
ಜೆಪ್ಪು ಬಪ್ಪಾಲ್ ಶ್ರೀ ಜನಾರ್ದನ ಭಜನಾ ಮಂದಿರದ ಆವರಣದ ಮೇಲ್ಛಾವಣೆ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದ ಶಾಸಕ ಕಾಮತ್
Monday, March 10, 2025
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 59ನೇ ವಾರ್ಡಿನ ಜೆಪ್ಪು ಬಪ್ಪಾಲ್ ಶ್ರೀ ಜನಾರ್ದನ ಭಜನಾ ಮಂದಿರದ ಆವರಣದ ಮೇಲ್ಛಾವಣೆ ಕಾಮಗಾರಿಯ ಗುದ್ದಲಿ ಪೂಜೆಯನ್ನು ಶಾಸಕ ವೇದವ್ಯಾಸ ಕಾಮತ್ ಅವರ ನೇತೃತ್ವದಲ್ಲಿ ನೆರವೇರಿಸಲಾಯಿತು.
ಬಳಿಕ ಅವರು ಮಾತನಾಡಿ, ಈ ಭಜನಾ ಮಂದಿರಕ್ಕೆ ಮೇಲ್ಛಾವಣಿಯ ಅಗತ್ಯತೆ ಬಗ್ಗೆ ನಿಕಟಪೂರ್ವ ಸ್ಥಳೀಯ ಪಾಲಿಕೆ ಸದಸ್ಯ ಭರತ್ ಕುಮಾರ್ ಅವರು ಗಮನಕ್ಕೆ ತಂದು ವಿಶೇಷ ಕಾಳಜಿ ವಹಿಸಿದ್ದರು. ಇದೀಗ ವಿಶೇಷ ಅನುದಾನದ ಮೂಲಕ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು ಶೀಘ್ರದಲ್ಲಿ ಪೂರ್ಣಗೊಳ್ಳುವ ಭರವಸೆಯಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಿಕಟ ಪೂರ್ವ ಪಾಲಿಕೆ ಸದಸ್ಯ ಶೈಲೇಶ್, ಪ್ರಮುಖರಾದ ನವೀನ್ ಶೆಟ್ಟಿ, ಪುಂಡಲಿಕ ಸುವರ್ಣ, ಸುನಿಲ್ ಕುಮಾರ್, ರಘುವೀರ್ ಆಚಾರ್ಯ, ಸತೀಶ್ ಆಚಾರ್ಯ, ಲಕ್ಷ್ಮಣ ಆಚಾರ್ಯ, ರಘುವೀರ್ ದೋಟ, ಪುಷ್ಪರಾಜ್ ಶೆಟ್ಟಿ, ಸುರೇಖಾ ರಾವ್, ದೇವಾನಂದ ಸನಿಲ್, ಶಿವಾನಂದ ರೈ, ಅಮಿತಾ ಕೆ, ರಾಜನ್ ಬಪ್ಪಾಲ್, ಸೀತಾರಾಮ ಪೂಜಾರಿ, ಪ್ರಶಾಂತ್ ಕನಕರ ಬೆಟ್ಟು, ಸೌರಭ್ ಮಜಿಲ ಸೇರಿದಂತೆ ಭಜನಾ ಮಂದಿರದ ಪದಾಧಿಕಾರಿಗಳು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.