
ಕಾಂಗ್ರೆಸ್ ಸಂಪರ್ಕದಲ್ಲಿ ಬಿಜೆಪಿ, ಜೆಡಿಎಸ್ ಶಾಸಕರು: ಜಮೀರ್ ಹೇಳಿಕೆ ನಿರಾಧಾರ
ಮಂಗಳೂರು: ಬಿಜೆಪಿ, ಜೆಡಿಎಸ್ ಶಾಸಕರು ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆ ಎನ್ನುವ ಸಚಿವ ಜಮೀರ್ ಅಹ್ಮದ್ ಹೇಳಿಕೆಗೆ ವಿಧಾನ ಪರಿಷತ್ ಸದಸ್ಯ ಎನ್. ರವಿ ಕುಮಾರ್ ನಿರಾಧಾರ ಎಂದು ಪ್ರತಿಕ್ರಿಯಿಸಿದ್ದಾರೆ. ಹೀಗಾದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಬಿದ್ದುಹೋಗಲಿದೆ ಎಂದರು.
ಶನಿವಾರ ನಗರದಲ್ಲಿ ಸುದ್ದಿಗಾರರಲ್ಲಿ ಮಾತನಾಡಿದ ಅವರು, ಇದರಲ್ಲಿ ಯಾವುದೇ ಪುಷ್ಠೀಕರಿಸುವ ವಿಚಾರಗಳು ಇಲ್ಲ.ಬಿಜೆಪಿ ಹಾಗೂ ಜೆಡಿಎಸ್ನ 15 ರಷ್ಟು ಶಾಸಕರು ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆ ಎಂದರೆ ನಿಮ್ಮ ಸರ್ಕಾರ ಅಷ್ಟು ದುರ್ಬಲ ಆಗಿದೆ ಎಂದು ಅರ್ಥ. ಬಿಜೆಪಿ ಹಾಗೂ ಜೆಡಿಎಸ್ ಶಾಸಕರು ಕಾಂಗ್ರೆಸ್ ಪಕ್ಷ ಸೇರಬೇಕಾದರೆ ನಿಮ್ಮ ಸರ್ಕಾರ ಮಧ್ಯದಲ್ಲಿ ಬಿದ್ದು ಹೋಗುತ್ತದೆ ಎಂದು ಖಾತರಿಯಾಗಿದೆ. ಹಾಗಾಗಿ ಬಿಜೆಪಿ ಮತ್ತು ಜೆಡಿಎಸ್ ಶಾಸಕರನ್ನು ಕಾಂಗ್ರೆಸ್ ಸೇರಿಸಲು ನೀವು ಗಮನ ಹರಿಸಿದ್ದೀರಿ ಎಂದು ತಿರುಗೇಟು ನೀಡಿದರು.
ಕಾಂಗ್ರೆಸ್ ಗ್ಯಾರಂಟಿ ಫೇಲಾಗಿದೆ. ಎಸ್ಸಿ ಎಸ್ಟಿಗಳ ಅಭಿವೃದ್ಧಿಗೆ ಇರಿಸಿದ 25,480 ಕೋಟಿ ರೂ. ಹಣವನ್ನು ಲೂಟಿ ಮಾಡಿದ್ದೀರಿ. ನಿಮ್ಮ ಕಾಂಗ್ರೆಸ್ ಶಾಸಕರೇ ನಿಮ್ಮ ಸರ್ಕಾರದ ವಿರುದ್ಧ ಮಾತನಾಡುತ್ತಾರೆ. ಇದು ಐದು ವರ್ಷ ಪೂರ್ತಿ ಆಡಳಿತ ನಡೆಸುವ ಸರ್ಕಾರ ಅಲ್ಲ. ಹೋಗುತ್ತದೆ ಎಂದರು.
ಉಪ ಮುಖ್ಯಮಂತ್ರಿ ಡಿಕೆಶಿ ಕುಂಭಮೇಳ, ಈಶಾ ಫೌಂಡೇಶನ್ ಶಿವರಾತ್ರಿ ಕಾರ್ಯಕ್ರಮಕ್ಕೆ ಹೋಗಿರೋದಕ್ಕೆ ಕಾಂಗ್ರೆಸ್ನಲ್ಲೇ ಭಾರೀ ವಿರೋಧ ವಿಚಾರಕ್ಕೆ ಪ್ರತಿಕ್ರಿಯಿಸಿದ ವರು, 66 ಕೋಟಿಗೂ ಹೆಚ್ಚು ಮಂದಿ ಮಹಾಕುಂಭ ಮೇಳದಲ್ಲಿ ಭಾಗಿಯಾಗಿದ್ದಾರೆ. ಹಿಂದೂ ಧರ್ಮದ ಬಗ್ಗೆ ಇರುವ ನಂಬಿಕೆ ಒಂದು ಪರ್ಸೆಂಟ್ ಕಮ್ಮಿಯಾಗಿಲ್ಲ. ದೇಶದ ಹಿಂದೂ ಭಕ್ತರ ಶ್ರದ್ದೆ ಭಕ್ತಿಯನ್ನು ನೋಡಿ ಡಿಕೆಶಿ ಕೂಡಾ ಇತ್ತೀಚೆಗೆ ಶಿವರಾತ್ರಿ ಕಾರ್ಯಕ್ರಮದಲ್ಲಿ, ಮಹಾಕುಂಭಮೇಳದಲ್ಲಿ ಭಾಗವಹಿಸೋದು. ನಾನು ಹಿಂದೂವಾಗಿ ಹುಟ್ಟಿದ್ದೇನೆ, ಹಿಂದೂ ಆಗಿಯೇ ಸಾಯುತ್ತೇನೆ ಎಂದು ಹೇಳಿರುವುದನ್ನು ಗಮನಿಸಿದರೆ
ಇವತ್ತು ಹಿಂದೂ ಧರ್ಮದ ಬಗ್ಗೆ ಸ್ವಲ್ಪವೂ ಶ್ರದ್ಧೆ, ಭಕ್ತಿ ಕಡಿಮೆ ಆಗಿಲ್ಲ ಎಂಬುದನ್ನು ತೋರಿಸುತ್ತದೆ. ಇದು ಕಾಂಗ್ರೆಸ್ ನಾಯಕರ ಭಯಕ್ಕೆ ಕಾರಣವಾಗಿದೆ. ಹಾಗಾಗಿ ಈ ತರದ ಮಾತು ಹಾಗೂ ಚಟುವಟಿಕೆಗಳನ್ನು ಮಾಡುತ್ತಲೇ ಇರುತ್ತಾರೆ. ಇದು ಕಾಂಗ್ರೆಸ್‌ಗೆ ಡಿ. ಕೆ. ಶಿವಕುಮಾರ್ ನೀಡಿರುವ ದೊಡ್ಡ ಥ್ರೇಟ್. ಸಿದ್ದರಾಮಯ್ಯನವರನ್ನು ಮುಟ್ಟಿದರೆ ಸರ್ಕಾರ ಬಿದ್ದು ಹೋಗುತ್ತದೆ ಎನ್ನುವುದನ್ನು ಸಚಿವ ಜಮೀರ್ ಹೇಳಿರುವುದು ಕಾಂಗ್ರೆಸ್‌ಗೆ ಥ್ರೇಟ್ ಕೊಟ್ಟಂತಾಗಿದೆ ಎಂದಿದ್ದಾರೆ.