
ಮಹಿಳಾ ಸಫಾಯಿ ಕರ್ಮಚಾರಿಗಳ ದುಸ್ತರ ಬದುಕು: ವಿಶ್ವ ಸಂಸ್ಥೆಯ ಗಮನ ಸೆಳೆದ ಡಾ. ಪ್ರೀತಿ ಎಲ್.ಎನ್.
ಮಂಗಳೂರು: ಭಾರತದ ಅತ್ಯಂತ ಶೋಷಿತ ಜನವರ್ಗವಾಗಿರುವ ಮಹಿಳಾ ಸಫಾಯಿ ಕರ್ಮಚಾರಿಗಳ ಅಘಾತಕಾರಿ ಹಾಗೂ ದುರಂತಮಯ ಬದುಕಿನ ಬಗ್ಗೆ ವಿಶ್ವಸಂಸ್ಥೆಯ ಗಮನ ಸೆಳೆಯಲಾಗಿದ್ದು, ಈ ಅಮಾನವೀಯ ಮತ್ತು ನಿಷೇಧಿತ ಪದ್ಧತಿಯನ್ನು ಕೊನೆಗಾಣಿಸಲು ಅಗತ್ಯ ಪರಿಣಾಮಕಾರಿ ಕ್ರಮಗಳನ್ನುಕೈಗೊಳ್ಳಲು ಆಗ್ರಹಿಸಲಾಗಿದೆ.
ಫೆ.೧೭ರಂದು ಜಿನೇವಾದಲ್ಲಿ ನಡೆದ, ’ಮಹಿಳೆಯರ ವಿರುದ್ಧದ ಎಲ್ಲ ವಿಧದ ತಾರತಮ್ಯ ನಿರ್ಮೂಲನೆ ಕುರಿತ ವಿಶ್ವ ಸಂಸ್ಥೆಯ ಸಮಿತಿ’ಯ 90ನೇ ಅಧಿವೇಶನದಲ್ಲಿ, ಲಿಂಗಾಧಾರಿತ ಪೂರ್ವಾಗ್ರಹಗಳ ಕುರಿತು ನಡೆದ ಸಾಮಾನ್ಯ ಚರ್ಚೆಯಲ್ಲಿ ತಮ್ಮ ವಿಚಾರಮಂಡಿಸಿರು ಅಂತರರಾಷ್ಟ್ರೀಯ ಮಾನವಹಕ್ಕುಗಳ ಕಾನೂನು ತಜ್ಞೆ ಮಂಗಳೂರು ಮೂಲದ ಡಾ. ಪ್ರೀತಿ ಲೋಲಾಕ್ಷ ನಾಗವೇಣಿ ಅವರು, ಮಹಿಳಾ ಸಫಾಯಿ ಕರ್ಮಚಾರಿಗಳ ಅತ್ಯಂತ ದುಸ್ತರ ಬದುಕಿನ ಅನಾವರಣ ಮಾಡಿದರು.
ಡಾ. ಪ್ರೀತಿ.ಎಲ್.ಎನ್. ಅವರು, ಡಾ. ಅಮಿತ್ ಆನಂದ್ ಅವರೊಂದಿಗೆ ಜಂಟಿಯಾಗಿ ಸಿದ್ಧಪಡಿಸಿ, ಪ್ರಸ್ತುತಪಡಿಸಿರುವ ಹೇಳಿಕೆ (ವಿಡಿಯೋ)ಯನ್ನು ವಿಶ್ವಸಂಸ್ಥೆ ತನ್ನಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.
ಬ್ರಿಟಿಷ್ ಸಂಸತ್ತಿನಲ್ಲೂ..
ಬ್ರಿಟನ್‌ನಲ್ಲಿರುವ ದಕ್ಷಿಣ ಏಷ್ಯಾದ ಮಹಿಳೆಯರು ಹೆರಿಗೆ ಮತ್ತು ಪ್ರಸೂತಿಗೆ ಸಂಬಂಧಪಟ್ಟಂತೆ ಎದುರಿಸುತ್ತಿರುವ ಆರೋಗ್ಯ ಸೇವೆಗಳ ಲಭ್ಯತೆ ಕುರಿತು, ಮತ್ತು ಬ್ರಿಟನ್‌ನ ಆಧುನಿಕ ಗುಲಾಮಗಿರಿ ಕಾಯ್ದೆ, 2015 ಮತ್ತು ಅಕ್ರಮವಲಸೆ ಕಾಯ್ದೆ, 2023 ಕುರಿತುಡಾ. ಪ್ರೀತಿ ಮತ್ತು ಡಾ. ಅಮಿತ್ ಅವರ ಸಂಶೋಧನಾಧಾರಿತ ವರದಿಗಳ ಮಹತ್ವವನ್ನು ಬ್ರಿಟನ್ ಸಂಸತ್‌ನ ಹೌಸ್‌ಆಫ್ಲಾರ್ಡ್ಸ್ಮತ್ತು ಹೌಸ್ ಆಫ್ಕಾಮನ್ಸ್ನ ಸೆಲೆಕ್ಟ್ಕಮಿಟಿಗಳು ಪರಿಗಣಿಸಿ, ಇವುಗಳ ಬಗ್ಗೆಚರ್ಚೆಗಳನ್ನು ನಡೆಸಿದ್ದು, ತಮ್ಮ ವರದಿಗಳಲ್ಲಿ ಇವರನ್ನು ಉಲ್ಲೇಖಸಿರುವುದು ಮತ್ತು ಈಇಬ್ಬರು ಕಾನೂನುಬನು ತಜ್ಞರು ಇತ್ತೀಚೆಗೆ ಬ್ರಿಟನ್ ಸಂಸತ್ತಿಗೆ ಮಾನಸಿಕ ಆರೋಗ್ಯ ಕುರಿತ ಕರಡು ಕಾಯೆ ಬಗ್ಗೆ ಸಲ್ಲಿಸಿರುವ ವಿಶ್ಲೇಷಣೆಯನ್ನು ಸಂಸತ್ತುತನ್ನವೆವ್‌ಸೈಟ್‌ನಲ್ಲಿ ಪ್ರಕಟಪಡಿಸಿರುವುದು ಇವರ ಸಂಶೋಧನೆಗೆ ಸಿಕ್ಕಿರುವ ಮಹತ್ವಪೂರ್ಣ ಮನ್ನಣೆಯಾಗಿದೆ.