
ಮಾ.29 ರಂದು ಮೂಡುಬಿದಿರೆಗೆ ಆಗಮಿಸಲಿದೆ ರಾಮನವಮಿ ರಥಯಾತ್ರೆ
Thursday, March 27, 2025
ಮೂಡುಬಿದಿರೆ: ಕೇರಳದ ಮಲ್ಲಪ್ಪುರಂ ಜಿಲ್ಲೆಯ ಆಂಜನೇಯ ಆಶ್ರಮದ ವಾಷಿ೯ಕ ಮಹೋತ್ಸವದ ಅಂಗವಾಗಿ ಹೊರಟಿರುವ ಶ್ರೀ ರಾಮನವಮಿ ರಥಯಾತ್ರೆಯು ಮಾ.29ರಂದು ಸಂಜೆ 6 ಗಂಟೆಗೆ ಮೂಡುಬಿದಿರೆಗೆ ಆಗಮಿಸಲಿದೆ ಎಂದು ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಗುರುವಾರ ಪತ್ರಿಕಾಗೊಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.
ರಥಯಾತ್ರೆಯನ್ನು ಅಲಂಗಾರು ಕಟ್ಟೆಯ ಬಳಿಯಿಂದ ಸಾರ್ವಜನಿಕವಾಗಿ ಸ್ವಾಗತಿಸಿ ಅಲ್ಲಿಂದ ಶೋಭಾಯಾತ್ರೆಯಲ್ಲಿ ಜೈನಮಠಕ್ಕೆ ಆಗಮಿಸಲಿದೆ. ಬಳಿಕ ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ವಿಶ್ವ ಹಿಂದೂ ಪರಿಷತ್ ವತಿಯಿಂದ ನಡೆಯುವ ಶನೀಶ್ವರ ಪೂಜಾ ವೇದಿಕೆಗೆ ರಥಯಾತ್ರೆಯನ್ನು ಬರಮಾಡಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಸಂಚಾಲಕ ಎಂ. ಬಾಹುಬಲಿ ಪ್ರಸಾದ್, ಉಪಾಧ್ಯಕ್ಷ ಎಂ. ದಯಾನಂದ ಪೈ, ಕಾರ್ಯದರ್ಶಿ ಎಂ ಶಾಂತರಾಮ್ ಕುಡ್ವ, ಜೊತೆಕಾರ್ಯದರ್ಶಿ ಶಿವ ಭಂಡಾರ್ಕರ್ ಹಾಗೂ ಕೋಶಾಧಿಕಾರಿ ರಾಘವೇಂದ್ರ ಭಂಡಾರ್ಕರ್ ಉಪಸ್ಥಿತರಿದ್ದರು.