ಕಂಬಳದಲ್ಲಿ ಮುಗಿಯದ ಗೊಂದಲ: ಮುಂದಿನ ಕಂಬಳಗಳನ್ನಾದರೂ ಗೊಂದಲ ರಹಿತವಾಗಿ ನಡೆಸುವಂತೆ ಬೇಡಿಕೊಂಡ ಜಿಲ್ಲಾ ಕಂಬಳ ಸಮಿತಿ

ಕಂಬಳದಲ್ಲಿ ಮುಗಿಯದ ಗೊಂದಲ: ಮುಂದಿನ ಕಂಬಳಗಳನ್ನಾದರೂ ಗೊಂದಲ ರಹಿತವಾಗಿ ನಡೆಸುವಂತೆ ಬೇಡಿಕೊಂಡ ಜಿಲ್ಲಾ ಕಂಬಳ ಸಮಿತಿ


ಮೂಡುಬಿದಿರೆ: ಅವಿಭಜಿತ ದ.ಕ. ಜಿಲ್ಲೆಯಲ್ಲಿ ಈ ವರ್ಷದ ಋತುವಿನ ಕಂಬಳಗಳು ಮುಕ್ತಾಯದ ಹಂತದಲ್ಲಿದ್ದು ಮೂರ್‍ನಾಲ್ಕು ಕಂಬಳಗಳು ಮಾತ್ರ ಬಾಕಿಯುಳಿದಿದ್ದು ಈ ಕಂಬಳಗಳನ್ನಾದರೂ ಗೊಂದಲರಹಿತವಾಗಿ ನಡೆಸುವಂತೆ  ಜಿಲ್ಲಾ ಕಂಬಳ ಸಮಿತಿಯು ಬೇಡಿಕೊಂಡಿದೆ.

ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಇಲ್ಲಿನ ಸೃಷ್ಠಿ ಗಾರ್ಡನ್‌ನಲ್ಲಿ ಬುಧವಾರ ನಡೆದ ಪರಾಮಶೆ೯ ಸಭೆಯಲ್ಲಿ ಮಾತನಾಡಿದ ಅಧ್ಯಕ್ಷರು ಈಗಾಗಲೇ ನಡೆದಿರುವ 


ಒಂದೆರಡು ಕಂಬಳಗಳಲ್ಲಿ ಗೊಂದಲಗಳು ಉಂಟಾಗಿದ್ದು ಇದು ಮತ್ತೆ ಪುನರಾವರ್ತನೆಯಾಗದಂತೆ ಕಂಬಳದ ತೀರ್ಪುಗಾರರು, ಯಜಮಾನರು ಸಹಕರಿಸಲು ಕೋರಿದರು.

ಶಿವಮೊಗ್ಗದಲ್ಲಿ ಎಪ್ರಿಲ್ 19ರಂದು ಕಂಬಳ ನಡೆಸಲು ನಿರ್ಧರಿಸಿದ್ದರೂ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಅದನ್ನು ರದ್ದುಪಡಿಸಿ ಆ ದಿನದಂದು ಬೈಂದೂರ್‌ನಲ್ಲಿ ನಡೆಸಲು ನಿರ್ಧರಿಸಲಾಯಿತು. 


ಕಂಬಳ ತೀರ್ಪುಗಾರರು ಮತ್ತು ಸೆನ್ಸಾರ್ ನಿರ್ವಾಹಕರು ಫಲಿತಾಂಶವನ್ನು ಸೂಕ್ಷ್ಮವಾಗಿ ಗಮನಿಸಿ ತೀರ್ಪು ನೀಡಬೇಕು. ತೀರ್ಪಿನಲ್ಲಿ ಯಾವುದೇ ಗೊಂದಲವಾಗದಂತೆ ಎಚ್ಚರಗೊಳಿಸಬೇಕು. ಕೋಣಗಳನ್ನು ಸಮಯಕ್ಕೆ ಸರಿಯಾಗಿ ಬಿಡುವ ಮೂಲಕ ಕಂಬಳವನ್ನು ಕಾಲಮಿತಿಯೊಳಗೆ ನಡೆಸಲು ಸಹಕರಿಸಬೇಕು ಎಂದು ಮನವಿ ಮಾಡಲಾಯಿತು. 

ಶಿಸ್ತು ಸಮಿತಿಯ ಅಧ್ಯಕ್ಷ ಭಾಸ್ಕರ ಎಸ್. ಕೋಟ್ಯಾನ್, ಕೋಣಗಳ ಯಜಮಾನರಾದ ಕೊಳಚೂರು ಕೊಂಡೊಟ್ಟು ಸುಕುಮಾರ್ ಶೆಟ್ಟಿ, ಉದಯ ಎಸ್. ಕೋಟ್ಯಾನ್, ತ್ರಿಶಾಲ್ ಎ. ಪೂಜಾರಿ, ಪವನ್ ಕೋಟ್ಯಾನ್, ಓಟಗಾರರಾದ ಶ್ರೀನಿವಾಸ್ ಗೌಡ, ರಿತೇಶ್ ಒಂಟಿಕಟ್ಟೆ, ರಾಜೇಶ್ ಮಾರ್ನಾಡು, ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ಲೋಕೇಶ್ ಶೆಟ್ಟಿ, ಮಾಜಿ ಅಧ್ಯಕ್ಷ ಎರ್ಮಾಳ್ ರೋಹಿತ್ ಹೆಗ್ಡೆ, ಜಿಲ್ಲಾ ಕಂಬಳ ಸಮಿತಿಯ ಪದಾಧಿಕಾರಿಗಳಾದ ಚಂದ್ರಹಾಸ ಸನಿಲ್, ವಿಜಯ್ ಕುಮಾರ್ ಕಂಗಿನಮನೆ ಮತ್ತಿತರರು ಉಪಸ್ಥಿತರಿದ್ದರು.


ಜಿಲ್ಲಾ ಕಂಬಳ ಸಮಿತಿಯು ಪ್ರತಿ ಬಾರಿಯೂ ನಡೆಸುವ ಸಭೆಗಳಲ್ಲಿ ಕಂಬಳಗಳು ಶಿಸ್ತುಬದ್ಧವಾಗಿ ನಡೆಯಬೇಕು. 24 ಗಂಟೆಯೊಳಗೆ ಮುಗಿಯಬೇಕೆಂದು ಚಚಿ೯ಸುತ್ತಾ ಬರುತ್ತಿದೆ ಆದರೆ ಎರಡ್ಮೂರು ಕಂಬಳಗಳನ್ನು ಹೊರತುಪಡಿಸಿ ಬೇರೆಲ್ಲಾ ಕಂಬಳಗಳು ಜಿಲ್ಲಾ ಕಂಬಳ ಸಮಿತಿಯ ನಿಯಮವನ್ನು ಗಾಳಿಗೆ ತೂರಿ ನಡೆಯುತ್ತಿರುವುದು ವಿಪಯಾ೯ಸ.


Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article