
ಶ್ರೀ ಕ್ಷೇತ್ರ ಬೋಳಂಬಳ್ಳಿ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಪ್ರತಿಷ್ಠಾಪನೆ: ಮೇ 4ರಿಂದ 9ರವರೆಗೆ ವಿರಾಟ್ ವಿರಾಗಿಗೆ ಮಹಾಮಜ್ಜನ
ಕುಂದಾಪುರ: ಶ್ರೀ ಕ್ಷೇತ್ರ ಬೋಳಂಬಳ್ಳಿ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಪ್ರತಿಷ್ಠಾಪನೆ ಹಾಗೂ ಮಹಾಮಜ್ಜನ ಮಹೋತ್ಸವ ಮೇ.4ರಿಂದ ಮೇ.9 ನಡೆಯಲಿದೆ.
ಆಚಾರ್ಯ ಶ್ರೀ 108 ಗುಲಾಬಭೂಷಣ ಮುನಿಮಹಾರಾಜರ ಸಾನಿಧ್ಯ ಹಾಗೂ ಪರಂಪರೆ ಕುಲಗುರುಗಳಾದ ಹೊಂಬುಜ ಜೈನ ಮಠದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರ ಸಾನಿಧ್ಯ ಹಾಗೂ ಮಾರ್ಗದರ್ಶನದಲ್ಲಿ, ವಿವಿಧ ಮಠಾಧೀಶರ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಶುಭಾಶಯಗಳೊಂದಿಗೆ ಶ್ರೀ ಕ್ಷೇತ್ರ ಬೋಳಂಬಳ್ಳಿಯ ಧರ್ಮದರ್ಶಿ ಧರ್ಮರಾಜ್ ಜೈನ್ ಮತ್ತು ವನಿತಾ ಧರ್ಮರಾಜ್ ಅವರ ಮುಂದಾಳತ್ವದಲ್ಲಿ ಜೈನ ಆಗಮೋಕ್ತ ವಿಧಿ-ವಿಧಾನಗಳು ನೆರವೇರಲಿದೆ.
ಮೇ.4 ರಂದು ಬೆಳಗ್ಗೆ ಇಂದ್ರಪ್ರತಿಷ್ಠೆ, 7 ಗಂಟೆಗೆ ತೋರಣ ಮುಹೂರ್ತ, ವಿಮಾನಶುದ್ಧಿ, ನಾಂದಿಮಂಗಲ, ವಾಸ್ತುಪೂಜಾ ವಿಧಾನ, ನವಗ್ರಹ ಶಾಂತಿ, ಶ್ರೀ ಬಲಿ ವಿಧಾನ, ಮೃತಿಕಾ ಸಂಗ್ರಹಣ, ಅಂಕುರಾರ್ಪಣೆ, ಪಂಚಕಲ್ಯಾಣ ಮಂಟಪ ಪ್ರವೇಶ, 11 ಗಂಟೆಗೆ ಧ್ವಜಾರೋಹಣ, ಮಹಾಮಂಗಳಾರತಿ ನಡೆಯಲಿದೆ.
ಮೇ 5ರಂದು ಬೆಳಗ್ಗೆ 8.30 ರಿಂದ ಶ್ರೀಪೀಠ ಯಂತ್ರಾರಾಧನೆ, ಶ್ರೀಬಲಿ ವಿಧಾನ, ಮಂಡಲ ಪಲಷ್ಠೆ, ವೇದಿ ಪ್ರತಿಷ್ಠೆ, ಯಾಗಮಂಡಲ ಯಂತ್ರಾರಾಧನೆ, ಕಲಿಕುಂಡ ಯಂತ್ರಾರಾಧನೆ, ಭೇರಿತಾಡನ, ನವಕಲಶ ಅಭಿಷೇಕ, ಮಹಾಮಂಗಳಾರತಿ ನೆರವೇರಲಿದೆ. ಮೇ 6ರಂದು ಬೆಳಗ್ಗೆ 8.30ರಿಂದ ನಿತ್ಯವಿಧಿ ಸಹಿತ 24 ತೀರ್ಥಂಕರರ ಆರಾಧನೆ, ಯಾಗಮಂಡಲ ಆರಾಧನೆ, ಜಲಯಾತ್ರಾ ಮಹೋತ್ಸವ, ಗರ್ಭಾವತರಣ ಕಲ್ಯಾಣ, 16 ಸ್ವಪ್ನಗಳ ದರ್ಶನ ಜರುಗಲಿದೆ.
ಮಹಾಮಸ್ತಕಾಭಿಷೇಕ:
ಮೇ 7ರಂದು ಬೆಳಗ್ಗೆ 8.30 ರಿಂದ ಜನ್ಮಕಲ್ಯಾಣ ಅಷ್ಟದಿಕ್ಕು ಧಾಮ ಸಂಪ್ರೋಕ್ಷಣೆ, ಪಾಂಡುಕಾ ತಿಲೋಪರಿ 108 ಕಲಶಗಳಿಂದ ಜಿನ ಬಾಲಕನ ಜನ್ಮಾಭಿಷೇಕ, ನಾಮಕರಣ, ಬಾಲಲೀಲಾ ಮಹೋತ್ಸವ ರಾಜ್ಯಾಭಿಷೇಕ, ಸಂಜೆ ವೈರಾಗ್ಯ ಪೂರ್ವಕ ದೀಕ್ಷಾವಿಧಿ, ಪರಿನಿಷ್ಕ್ರಮಣ ಕಲ್ಯಾಣ, ಬ್ರಹ್ಮಯಕ್ಷ ಪ್ರತಿಷ್ಠೆ, ನವಕಲಶ ಅಭಿಷೇಕ, ಮಹಾಮಂಗಳಾರತಿ ನಡೆಯಲಿದೆ.
ಮೇ 8ರಂದು ನಿತ್ಯವಿಧಿ ಸಹಿತ ಆಹಾರದಾನವಿಧಿ, ಶ್ರೀಗಂಧ ಯಂತ್ರಾರಾಧನೆ ವಿಧಾನ, 8.30ರ ವೃಷಭ ಲಗ್ನದಲ್ಲಿ ಕೇವಲ ಜ್ಞಾನಕಲ್ಯಾಣ ಮುಖವಸ್ತ್ರ ಉದ್ಘಾಟನೆ, ಮಧ್ಯಾಹ್ನ 2 ಗಂಟೆಯಿಂದ ಸಮವಸರಣ ಪೂಜೆ, ಸಿದ್ಧಚಕ್ರ ಯಂತ್ರಾರಾಧನೆ ವಿಧಾನ, ಅಗ್ನಿತ್ರಯಾರ್ಚನಾ ಪೂರ್ವಕ ನಿರ್ವಾಣ ಕಲ್ಯಾಣ, ಭಗವಾನ ಶ್ರೀ ಬಾಹುಬಲಿ ಸ್ವಾಮಿ ಪ್ರತಿಷ್ಠೆ, ಸಂಜೆ 4 ಗಂಟೆಯಿಂದ 1008 ಕಲಶಗಳಿಂದ ಮಹಾಮಸ್ತಕಾಭಿಷೇಕ, ಮಹಾಪೂಜೆ, ಮಹಾಮಂಗಳಾರತಿ ನಡೆಯಲಿದೆ.
ಮೇ 9ರಂದು ಬೆಳಿಗ್ಗೆ ನಿತ್ಯವಿಧಿ ಸಹಿತ ಶ್ರೀಬಲಿ, ರಥಶುದ್ದಿ ಮಧ್ಯಾಹ್ನ 12.30 ರಿಂದ 1.30ಕ್ಕೆ ಶ್ರೀದೇವರ ರಥಾರೋಹಣ, ಸಂಜೆ 4 ಗಂಟೆಯಿಂದ ಶ್ರೀ ಬಾಹುಬಲಿ ಸ್ವಾಮಿಗೆ 108 ಕಲಶಗಳಿಂದ ಅಭಿಷೇಕ, ಮಹಾಮಂಗಳಾರತಿ, ಪಾದಪೂಜೆ, ಸಂಘಪೂಜೆ, ಕುಂಕುಮೋತ್ಸವ, ಧ್ವಜಾ ಅವರೋಹಣ, ತೋರಣ ವಿಸರ್ಜನೆ ಮತ್ತು ಕಂಕಣ ವಿಸರ್ಜನೆ ನಡೆಯಲಿದೆ.
ಮೂರ್ತಿ ಲೋಕಾರ್ಪಣೆ:
ಮೇ 9ರಂದು ಸಂಜೆ 3 ಗಂಟೆಗೆ ನಡೆಯುವ ಧಾರ್ಮಿಕ ಸಭ ಕಾರ್ಯಕ್ರಮದ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಭಗವಾನ್ ಶ್ರೀ ಬಾಹುಬಲಿ ಮತ್ತು ಕೇವಲಿ ಸಿದ್ಧ ಭಗವಾನ್ ಶ್ರೀರಾಮ ಮೂರ್ತಿಯ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.