ಇತಿಹಾಸ ಸೃಷ್ಟಿಸಿದ ಕಂಬಳದ ಕೋಣ

ಇತಿಹಾಸ ಸೃಷ್ಟಿಸಿದ ಕಂಬಳದ ಕೋಣ


ಮಂಗಳೂರು: ತುಳುನಾಡಿನ ಜಾನಪದ ಕ್ರೀಡೆಗಳಲ್ಲೊಂದಾದ ಕಂಬಳ (Kambala) ಸೀಸನ್ ಈಗ ನಡೆಯುತ್ತಿದೆ. ಪ್ರತೀ ವೀಕೆಂಡ್‌ಗಳಲ್ಲಿ ಒಂದೊಂದು ಊರಿನಲ್ಲಿ ಕಂಬಳ ನಡೆಯುತ್ತಿದ್ದು, ಈ ವಾರ ಸುರತ್ಕಲ್ ಸಮೀಪದ ಗುರುಪುರದಲ್ಲಿ ಕಂಬಳ (Gurupura Kambala) ಆಯೋಜನೆ ಮಾಡಲಾಗಿದೆ.

ನಿನ್ನೆ ಬೆಳಗ್ಗೆ ಗುರುಪುರ ಕಂಬಳ ಆರಂಭಗೊಂಡಿದ್ದು, ಇಂದು ಸಂಜೆ ವೇಳೆಗೆ ಮುಕ್ತಾಯದ ಹಂತ ತಲುಪಲಿದೆ. ಈತನ್ಮಧ್ಯೆ, ನಿನ್ನೆ ರಾತ್ರಿ ಗುರುಪುರ ಕಂಬಳದಲ್ಲಿ ರೋಮಾಂಚಕಾರಿ ಸಂಗತಿಯೊಂದು ನಡೆದಿದೆ. ಕಂಬಳ ಓಟದ ವೇಳೆ ಕೋಣಗಳಿಗೆ ಕಟ್ಟಿದ್ದ ನೇಗಿಲು ಜಾರಿ ಕೆಳಗೆ ಬಿದ್ದರೂ ಓಟಗಾರನಿಲ್ಲದೆಯೇ ಕೋಣಗಳು ಗುರಿ ತಲುಪಿ ಇತಿಹಾಸ ಸೃಷ್ಟಿಸಿವೆ.

ಹೌದು.. ಗುರುಪುರದಲ್ಲಿ ನಿನ್ನೆ ನಡೆದ (12-04-2025)  ಮೂಳೂರು-ಅಡ್ಡೂರು ಜೋಡುಕರೆ ಕಂಬಳ ಕ್ರೀಡೆಯಲ್ಲಿ ಮಾಣಿ ಸಾಗು ಮನೆ (ಎ) ಮತ್ತು ಹೊಸ್ಮಾರ್ ಸೂರ್ಯಶ್ರೀ (ಬಿ) ತಂಡದ ಮಧ್ಯೆ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯ ನಡೆಯಿತು. ಈ ವೇಳೆ ಹೊಸ್ಮಾರ್ ಸೂರ್ಯಶ್ರೀ ತಂಡದ ಕೋಣಗಳಾದ ಕೃಷ್ಣಾಪುರ ನಡುಮನೆ ಪರಮೇಶ್ವರ್ ಸಾಲ್ಯಾನ್‌ ಅವರ ಕಿಂಗ್ ಕೆಪಿ ಬೊಲ್ಲೆ ಮತ್ತು ಹೊಸ್ಮಾರ್ ಸೂರ್ಯಶ್ರೀ ತಂಡದ ಬಾರ್ಗಿ (KP Bolle-Hosmar Bhargi) ಕೋಣಗಳು ಓಟಗಾರನಿಲ್ಲದೆಯೇ ಗುರಿ ತಲುಪಿ ಮುಂದಿನ ಹಂತಕ್ಕೆ ತೇರ್ಗಡೆಗೊಂಡವು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article