
ಕನ್ನಡ ಭವನದಲ್ಲಿ ‘ಮಿಡ್ಲ್ ಕ್ಲಾಸ್ ಫ್ಯಾಮಿಲಿ’ಗೆ ಚಾಲನೆ
Sunday, April 13, 2025
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ನೇತೃತ್ವದಲ್ಲಿ ಹೀಲಿಂಗ್ ಹ್ಯಾಂಡ್ಸ್ ಚಾರಿಟೇಬಲ್ ಟ್ರಸ್ಟ್ ಮೂಡುಬಿದಿರೆ ಇದರ ಸಹಭಾಗಿತ್ವದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕನ್ನಡಭವನಲ್ಲಿ ಏಳು ದಿನಗಳ ಕಾಲ ಪ್ರದಶ೯ನಗೊಳ್ಳಲಿರುವ ತುಳು ಚಲನಚಿತ್ರ ‘ಮಿಡ್ಲ್ ಕ್ಲಾಸ್ ಫ್ಯಾಮಿಲಿ’ಗೆ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸುದಶ೯ನ್ ಎಂ. ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಕನ್ನಡ ಭವನದಲ್ಲಿ ಚಲನಚಿತ್ರ ಪ್ರದಶ೯ಕ್ಕೆ ಅವಕಾಶ ನೀಡಿರುವುದು ಉತ್ತಮ ಬೆಳವಣಿಗೆಯಾಗಿದೆ. ಸಂಘಟಕರಿಗೆ ಯಾವುದೇ ರೀತಿಯ ತೊಂದರೆಯಾಗದೆ ಅವರು ಮಾಡಲು ಹೊರಟಿರುವ ಸಮಾಜಮುಖಿ ಕಾಯ೯ವು ಈ ಮೂಲಕ ಯಶಸ್ವಿಯಾಗಲಿ ಎಂದು ಹಾರೈಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಡಾ. ಎಂ. ಮೋಹನ ಆಳ್ವ, ಡಾ. ಅಮರಶ್ರೀ ಶೆಟ್ಟಿ ಮಾತನಾಡಿ ಶಃಭ ಹಾರೈಸಿದರು. ಪುರಸಭೆಯ ಉಪಾಧ್ಯಕ್ಷ ನಾಗರಾಜ ಪೂಜಾರಿ, ಉದ್ಯಮಿಗಳಾದ ಕೆ. ಶ್ರೀಪತಿ ಭಟ್, ಅಶ್ವಿನ್ ಜೊಸ್ಸಿ ಪಿರೇರಾ, ಹೇಮಚಂದ್ರ ಆಚಾಯ೯, ರೋಟರಿ ಕ್ಲಬ್ ನ ಅಧ್ಯಕ್ಷ ಪೂಣ೯ಚಂದ್ರ ಜೈನ್, ಪವರ್ ಫ್ರೆಂಡ್ಸ್ನ ಅಧ್ಯಕ್ಷ ವಿನಯ್ ಕುಮಾರ್, ಇನ್ನರ್ ವ್ಹೀಲ್ ಕ್ಲಬ್ನ ಅಧ್ಯಕ್ಷೆ ಬಿಂದಿಯಾ ಶರತ್ ಶೆಟ್ಟಿ, ಮಾನವ ಹಕ್ಕು ಮತ್ತು ಭ್ರಷ್ಟಾಚಾರ ಸಂಸ್ಥೆಯ ಮಹಿಳಾ ಘಟಕದ ರಾಜ್ಯ ಕಾಯ೯ದಶಿ೯ ಉಷಾ ಭಂಡಾರಿ, ರೋಟರಿ ಕ್ಲಬ್ನ ಪ್ರಭಾವತಿ ಶೆಟ್ಟಿ, ಸಿನೆಮಾದ ನಿದೇ೯ಶಕ ರಾಹುಲ್ ಅಮೀನ್, ನಟ ವಿನೀತ್ ಹಾಗೂ ವೀಲಿಂಗ್ ಹ್ಯಾಂಡ್ಸ್ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷರು ಮತ್ತು ಸದಸ್ಯರು ಈ ಸಂದಭ೯ದಲ್ಲಿದ್ದರು.
ಕಳೆದ ಎರಡು ವಷ೯ಗಳ ಹಿಂದೆ ಅಸ್ತಿತ್ವಕ್ಕೆ ಬಂದಿರುವ ಹೀಲಿಂಗ್ ಹ್ಯಾಂಡ್ಸ್ ಚಾರಿಟೇಬಲ್ ಟ್ರಸ್ಟ್ ಅಸಹಾಯಕರಿಗೆ, ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗೆ ಸ್ಪಂದಿಸುತ್ತಾ ಬಂದಿದೆ. ಇದೀಗ ಈ ಚಲನಚಿತ್ರ ಪ್ರದಶ೯ನದಲ್ಲೂ ಉಳಿಕೆಯಾಗುವ ಹಣವನ್ನು ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗೆ ಮೀಸಲಿಡಲಿದೆ.
ಇದೀಗ ಚಲನಚಿತ್ರ ಪ್ರದಶ೯ಕ್ಕೆ ಮೂಡುಬಿದಿರೆಯಲ್ಲಿ ಚಿತ್ರಮಂದಿರ ಇಲ್ಲದಿರುವುದರಿಂದ ಸ್ಕೌಟ್ಸ್ ಗೈಡ್ಸ್ ಕನ್ನಡ ಭವನವನ್ನು ಸುಸಜ್ಜಿತ ಹಾಗೂ ತಾತ್ಕಾಲಿಕ ಚಿತ್ರಮಂದಿರವಾಗಿ ಪರಿವತಿ೯ಸಿ ಪ್ರದಶ೯ನ ಮಾಡಲಾಗುತ್ತಿದೆ. ಮೂಡುಬಿದಿರೆಯ ಜನತೆ ತನ್ನ ಈ ಹಿಂದಿನ ತುಳು ಸಿನೆಮಾಕ್ಕೂ ಸಹಕಾರ ನೀಡಿದ್ದೀರಿ ಅದರಂತೆ ಈ ಸಿನೆಮಾಕ್ಕೂ ಪ್ರೋತ್ಸಾಹ ನೀಡುವಿರೆಂಬ ಭರವಸೆಯಿದೆ ಎಂದು ನಟ ವಿನೀತ್ ತಿಳಿಸಿದರು.