ಮನೆ ಸಾಮಾಗ್ರಿ ಖರೀದಿನೆ ಪದಲ್ಲಿ ಲಕ್ಷಾಂತರ ರೂಪಾಯಿ ವಂಚನೆ

ಮನೆ ಸಾಮಾಗ್ರಿ ಖರೀದಿನೆ ಪದಲ್ಲಿ ಲಕ್ಷಾಂತರ ರೂಪಾಯಿ ವಂಚನೆ

ಬಂಟ್ವಾಳ: ಆನ್‌ಲೈನ್ ಮೂಲಕ ಮನೆ ಸಾಮಾಗ್ರಿ ಖರೀದಿಸುವ ಬಗ್ಗೆ ವಾಟ್ಸಪ್ ಕರೆ ಮಾಡಿದ ವ್ಯಕ್ತಿಯ ಬ್ಯಾಂಕ್ ಖಾತೆಗಳಿಂದ ಲಕ್ಷಾಂತರ ರೂ. ಹಣ ವರ್ಗಾಯಿಸಿಕೊಂಡು ವಂಚಿಸಿದ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುರಿಯಾಳ ಗ್ರಾಮದ ಮೇಲ್ಕೋಡಿ ನಿವಾಸಿ ಹೆನ್ರಿ ಕ್ರಾಸ್ತಾ ಎಂಬವರೇ ಲಕ್ಷಾಂತರ ರೂ. ಹಣ ಕಳೆದುಕೊಂಡು ವಂಚನೆಗೊಳಗಾದವರು. ಇವರಿಗೆ ಬ್ಯಾಂಕ್ ಆಫ್ ಬರೋಡಾ ಬಿ.ಸಿ. ರೋಡ್ ಶಾಖೆ, ಎಚ್‌ಡಿಎಫ್‌ಸಿ ಬ್ಯಾಂಕ್ ಬಂಟ್ವಾಳ ಶಾಖೆಯಲ್ಲಿ ಖಾತೆಗಳಿದ್ದು, ಹಾಗೂ ಎಸ್‌ಬಿಐ ಬ್ಯಾಂಕ್, ಬಿ.ಸಿ. ರೋಡ್ ಶಾಖೆಯಲ್ಲಿ ಪತ್ನಿ ಪ್ಲೇವಿಯ ಎಲ್ಸಿ ಕ್ರಾಸ್ತ ಅವರ ಜೊತೆ ಜಂಟಿ ಖಾತೆ ಹಾಗೂ ಪುತ್ರ ಅಮೀತ್ ಕ್ರಾಸ್ತಾ ಅವರ ಹೆಸರಿನಲ್ಲಿ ಜಂಟಿ ಖಾತೆಗಳಿವೆ.

ಮೇ.10 ರಂದು ಬೆಳಗ್ಗೆ 7 ಗಂಟೆಗೆ ಹೆನ್ರಿ ಕ್ರಾಸ್ತಾ ಅವರು ಮೊಬೈಲ್‌ನಲ್ಲಿ ಫೇಸ್‌ಬುಕ್ ನೋಡಿಕೊಂಡಿರುವಾಗ ಬಂದ ಜಾಹೀರಾತೊಂದನ್ನು ನೋಡಿ ಮನೆಯ ಸ್ನಾನದ ಗೃಹದ ಪರಿಕರಗಳನ್ನು ಆನ್‌ಲೈನ್‌ನಲ್ಲಿ ಕೊಂಡುಕೊಳ್ಳಲು ಅದರಲ್ಲಿರುವ ವಾಟ್ಸಪ್ ಮೊಬೈಲ್ ಸಂಖ್ಯೆಗೆ ಹೆ ಎಂದು ಮೆಸೆಜ್ ಮಾಡಿದ್ದು, ವಾಟ್ಸಾಪ್ ಮೊಬೈಲ್ ಸಂಖ್ಯೆಯಿಂದ ಕರೆ ಮಾಡಿ ವಿಚಾರಿಸಿದ್ದು, ಈ ಸಂದರ್ಭ ವಂಚಕರು ವಾಟ್ಸಪ್ ಕರೆಯಲ್ಲಿ ಇರುವಂತೆ ತಿಳಿಸಿದ್ದಾರೆ.

ಈ ವೇಳೆ ಕ್ರಾಸ್ತಾ ಅವರ ಮೊಬೈಲ್ ಮಾಹಿತಿಯನ್ನು ಯಾವುದೋ ವಿಧಾನದಿಂದ ಪಡೆದುಕೊಂಡು, ಬ್ಯಾಂಕ್ ಆಫ್ ಬರೋಡಾ, ಬಿ.ಸಿ. ರೋಡ್ ಖಾತೆಯಿಂದ 40 ಸಾವಿರ ರೂ., ಎಚ್‌ಡಿಎಫ್‌ಸಿ ಬ್ಯಾಂಕ್, ಬಂಟ್ವಾಳ ಶಾಖೆಯ ಖಾತೆಯಿಂದ 1.05 ಲಕ್ಷ ರೂ. ಮತ್ತು ಎಸ್‌ಬಿಐ ಬ್ಯಾಂಕ್, ಬಿಸಿ ರೋಡ್ ಶಾಖೆಯಲ್ಲಿರುವ 2 ಖಾತೆಗಳಿಂದ 2,29,700 ರೂ. ಮತ್ತು 25 ಸಾವಿರ, 2,54,700 ರೂ.ಗಳನ್ನು ಸಹಿತ ಎಲ್ಲಾ ಬ್ಯಾಂಕ್ ಖಾತೆಗಳಿಂದ ಒಟ್ಟು 3,99,700 ರೂ.ಗಳನ್ನು ಯಾವುದೋ ವಿಧಾನದ ಮೂಲಕ ಹಣವನ್ನು ಬ್ಯಾಂಕ್ ಖಾತೆಗಳಿಂದ ವರ್ಗಾವಣೆಗೊಳಿಸಿಕೊಂಡಿರುತ್ತಾರೆ. 

ಈ ಬಗ್ಗೆ ಅವರ ಪತ್ನಿ ಪ್ಲೇವಿಯ ಎಲ್ಸಿ ಕ್ರಾಸ್ತ ಅವರು ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article