ಲಕ್ಷಾಂತರ ಮೌಲ್ಯದ ಎಂಡಿಎಂಎ ವಶ

ಲಕ್ಷಾಂತರ ಮೌಲ್ಯದ ಎಂಡಿಎಂಎ ವಶ

ಬಂಟ್ವಾಳ: ಪಾಣೆಮಂಗಳೂರಿಗೆ ಸಮೀಪದ ನಂದಾವರ ಬಳಿ ಮಾದಕ ವಸ್ತು (ಎಂಡಿಎಂಎ) ಸೇವಿಸಿ ಬಳಿಕ ಮಾರಾಟದ ಉದ್ದೇಶಕ್ಕಾಗಿ ಅವಿತುಕೊಂಡಿದ್ದ ಮೂವರು ಆರೋಪಿಗಳನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸಿದ್ದು,ಈ ಸಂಬಂಧ ಆರೋಪಿಗಳಿಂದ ಲಕ್ಷಾಂತರ ರೂ ಮೌಲ್ಯದ ವಿವಿಧ ಸೊತ್ತುಗಳನ್ನು  ವಶಪಡಿಸಿದ್ದಾರೆ.

ನಂದಾವರ ಬಸ್ತಿಗುಡ್ಡೆ ನಿವಾಸಿಗಳಾದ ಮೊಹಮ್ಮದ್ ಇಮ್ಮಿಯಾಜ್, ಯೂನುಸ್ ಹಾಗೂ ಪುತ್ತೂರು ನರಿಮೊಗರು ಗ್ರಾಮದ ಪುರುಷರಕಟ್ಟೆ ನಿವಾಸಿ ಮೊಹಮ್ಮದ್ ಇಕ್ಬಾಲ್ ಬಂಧಿತ ಆರೋಪಿಗಳು.

5 ಲಕ್ಷ ಮೌಲ್ಯದ 2.99 ಗ್ರಾಂ ತೂಕದ ಎಂ.ಡಿ.ಎಂ.ಎ. ಸೊತ್ತು ಖಾಲಿ 5 ಪ್ಲಾಸ್ಟಿಕ್ ಕವರ್, 30 ಲಕ್ಷ ಮೌಲ್ಯದ ಕಾರು, ಆರೋಪಿಗಳ ಕೈಯಲ್ಲಿದ್ದ 45 ಸಾ.ರೂ. ಮೌಲ್ಯದ 4 ಮೊಬೈಲ್ ಫೋನ್ ಗಳನ್ನು ಬಂಧಿತರಿಂದ ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ. 

ಬಂಟ್ವಾಳ ನಗರ ಠಾಣಾ ಎಸ್ ಐ ಮತ್ತವರ ಸಿಬ್ಬಂದಿಗಳು ಗಸ್ತಿನಲ್ಲಿದ್ದಾಗ ಸಂಶಯಾಸ್ಪದವಾಗಿ ವರ್ತಿಸುತ್ತಿದ್ದ ಮೂವರನ್ನು ವಶಕ್ಕೆ ಪಡೆದು  ವಿಚಾರಣೆಗೊಳಪಡಿಸಿದಾಗ  ಮಾದಕ ವಸ್ತು ಸೇವನೆ ಮತ್ತು ಮಾರಾಟ ಮಾಡುವ ವಿಚಾರ ಬೆಳಕಿಗೆ ಬಂದಿದೆ. 

ಆರೋಪಿಗಳು ನಂದಾವರದ ಗೌಸಿಯಾ ಹೊಟೇಲ್ ಬಳಿ ರಸ್ತೆ  ಬದಿಯಲ್ಲಿ ಕಾರು ನಿಲ್ಲಿಸಿ ನಿಷೇಧಿತ ನಿದ್ರಾಜನ ಮಾದಕ ವಸ್ತುಗಳ ಸೇವನೆ ಮಾಡಿ ಬಳಿಕ ಇದನ್ನು ಮಾರಾಟ ಮಾಡುವ ಉದ್ದೇಶವಿರಿಸಿಕೊಂಡು ಅವಿತು ಕುಳಿತಿದ್ದರೆನ್ನಲಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article