
‘ಸನಾತನ ರಾಷ್ಟ್ರ’ದ ಜಯ ಘೋಷದ ಜೊತೆಗೆ 5000ಕ್ಕೂ ಅಧಿಕ ಹಿಂದುತ್ವನಿಷ್ಠರಿಂದ ಗೋವಾದತ್ತ ಪ್ರಯಾಣ
Friday, May 16, 2025
ದಕ್ಷಿಣಕನ್ನಡ: ಮಾನವ ಕುಲದ ಪರಮಕಲ್ಯಾಣ ಮತ್ತು ರಾಮರಾಜ್ಯದ ಸ್ಥಾಪನೆಗಾಗಿ ಕಾರ್ಯನಿರತ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ ಇವರ 83ನೇ ಜನ್ಮೋತ್ಸವ ಮತ್ತು ಸನಾತನ ಸಂಸ್ಥೆಯ ರಜತ ಮಹೋತ್ಸವ ವರ್ಷದ ಪ್ರಯುಕ್ತ ಫೊಂಡಾ ಗೋವಾದಲ್ಲಿ ಮೇ 17 ರಿಂದ 19 ರ ವರೆಗೆ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ವನ್ನು ಆಯೋಜಿಸಲಾಗಿದೆ. ಈ ಮಹೋತ್ಸವವನ್ನು ಫರ್ಮಾಗುಡಿ, ಫೊಂಡಾ, ಗೋವಾದಲ್ಲಿರುವ ಇಂಜಿನಿಯರಿಂಗ್ ಕಾಲೇಜಿನ ಮೈದಾನದಲ್ಲಿ ಆಯೋಜಿಸಲಾಗಿದೆ.
ಈ ಉತ್ಸವದಲ್ಲಿ ಸಹಭಾಗಿ ಆಗಲು ದಕ್ಷಿಣಕನ್ನಡ ಮತ್ತು ಕೊಡಗು ಜಿಲ್ಲೆಯ 400ಕ್ಕೂ ಅಧಿಕ ಸನಾತನ ಸಂಸ್ಥೆಯ ಸಾಧಕರು, ಹಿಂದೂ ಧರ್ಮಪ್ರೇಮಿಗಳು ಮತ್ತು ಹಿಂದುತ್ವನಿಷ್ಠರು ‘ಸನಾತನ ರಾಷ್ಟ್ರ’ದ ಜಯ ಘೋಷದ ಜೊತೆಗೆ ವಾಹನಗಳ ಮೂಲಕ ಗೋವಾದ ಕಡೆಗೆ ಪ್ರಯಾಣ ಮಾಡಿದ್ದಾರೆ. ಎಲ್ಲಾ ಹಿಂದುತ್ವ ನಿಷ್ಠರು ಕೇಸರಿ ಟೋಪಿ ಧರಿಸಿದ್ದರು ಮತ್ತು ವಾಹನಗಳು/ಬಸ್ಸು/ರೈಲು/ವಿಮಾನದ ಮೇಲೆ ಕೇಸರಿ ಧ್ವಜ ಹಾರಿಸಿರುವುದರಿಂದ ಸಂಪೂರ್ಣ ವಾತಾವರಣದಲ್ಲಿ ಚೈತನ್ಯ ಮತ್ತು ಶಕ್ತಿಯ ಸಂಚಾರ ಆಗುತ್ತಿತ್ತು.