
ಆಲಾಡಿಯಲ್ಲಿ ಗುಡ್ಡಕ್ಕೆ ಬೆಂಕಿ: ಮರಗಳು ನಾಶ
Monday, May 12, 2025
ಬಂಟ್ವಾಳ: ಸಜೀಪಮುನ್ನೂರು ಗ್ರಾಮದ ಆಲಾಡಿ ಎಂಬಲ್ಲಿರುವ ಗುಡ್ಡವೊಂದಕ್ಕೆ ಸೋಮವಾರ ಮಧ್ಯಾಹ್ನ ಆಕಸ್ಮಿಕವಾದ ಬೆಂಕಿ ಅವಘಡದಿಂದ ಬೆಲೆಬಾಳುವ ಹಲವು ಮರಗಳು ಬೆಂಕಿಗಾಹುತಿಯಾಗಿದೆ.
ಸುದ್ದಿ ತಿಳಿದಾಕ್ಷಣ ಸ್ಥಳೀಯರು ನೀರು ಹಾಯಿಸಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದ್ದಾರೆಯಾದರೂ ಬೆಂಕಿ ಕೆನ್ನಾಲಗೆ ಅತ್ಯಂತ ವೇಗವಾಗಿ ಹಬ್ಬಿದರಿಂದ ಬೆಂಕಿಯನ್ನು ನಂದಿಸಲು ಸಾಧ್ಯವಾಗದೆ ಕೊನೆಗೆ ಅಗ್ನಿಶಾಮಕ ದಳವನ್ನು ಕರೆಸಲಾಯಿತು. ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು.