
ಓವರ್ ಟೇಕ್ ಭರಾಟೆ ಬಸ್ ಪಲ್ಟಿ
Monday, May 26, 2025
ಕಾಪು: ಸರ್ಕಾರಿ ಬಸ್ಸೊಂದನ್ನು ಓವರ್ ಟೇಕ್ ಮಾಡುವ ರಭಸಕ್ಕೆ ಖಾಸಗಿ ವೇಗದೂತ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಘಟನೆ ಸೋಮವಾರ ಸಂಜೆ ಕಾಪು ಠಾಣಾ ವ್ಯಾಪ್ತಿಯ ದಂಡ ತೀರ್ಥ ಶಾಲಾ ಬಳಿ ಸಂಭವಿಸಿದೆ.
ಜೋರಾಗಿ ಮಳೆ ಸುರಿಯುತ್ತಿದ್ದು ಓವರ್ ಟೇಕ್ ಭರಾಟೆ ಬಸ್ಸಿನ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರಣ ಬಸ್ಸು ಮಗುಚಿ ಬಿದ್ದಿದೆ.
ಸಾರ್ವಜನಿಕರು ಬಸ್ಸಿನಲ್ಲಿ ಸಿಲುಕಿದ್ದ ಪ್ರಯಾಣಿಕರನ್ನು ಬಸ್ಸಿನಿಂದ ರಕ್ಷಿಸಿದ್ದಾರೆ. ಅದೃಷ್ಟ ವಶಾತ್ ಬಸ್ಸಿನಲ್ಲಿದ್ದ ಪ್ರಯಾಣಿಕರು ಅಲ್ಪ ಸ್ವಲ್ಪ ಗಾಯಗೊಂಡಿದ್ದಾರೆ. ಈ ಕಾರಣದಿಂದಾಗಿ ಸ್ವಲ್ಪ ಸಮಯ ಹೆದ್ದಾರಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಯಿತು.
ಕಾಪು ಪೊಲೀಸರು ಸ್ಥಳಕ್ಕೆ ಆಗಮಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿದರು.