
ಹಲಸಿನಕಾಯಿ ತೆಗೆಯಲು ಹೋಗಿ ಮರದಿಂದ ಬಿದ್ದು ಸಾವು
Saturday, May 24, 2025
ಕಿನ್ನಿಗೋಳಿ: ಸಮೀಪದ ಬಾಬಾಕೋಡಿ ಎಂಬಲ್ಲಿ ಮರದಿಂದ ಹಲಸಿನ ಕಾಯಿ ತೆಗೆಯಲು ಹೋಗಿ ಆಯತಪ್ಪಿ ಬಿದ್ದು ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ.
ಮೃತ ಯುವಕನನ್ನು ಕರ್ನೀರೆ ನಿವಾಸಿ ಕೆಮ್ಮಡೆಯಲ್ಲಿ ವಾಸ್ತವ್ಯವಿದ್ದ ಹರೀಶ್ (40) ಎಂದು ಗುರುತಿಸಲಾಗಿದೆ
ಹರೀಶ್ ತೆಂಗಿನ ಮರ ಏರಿ ತೆಂಗಿನಕಾಯಿ ಕೊಯ್ಯುವ ವೃತ್ತಿ ನಡೆಸುತ್ತಿದ್ದು ಕಿನ್ನಿಗೋಳಿ ಸಮೀಪದ ಬಾಬಾಕೋಡಿ ಎಂಬಲ್ಲಿ ಫೆಲಿಕ್ಸ್ ಡಿಸೋಜಾ ಎಂಬವರ ಮನೆಯಲ್ಲಿ ತೆಂಗಿನಕಾಯಿ ಕೊಯ್ದು ಬಳಿಕ ಹಲಸಿನ ಹಣ್ಣಿನ ಮರಕ್ಕೆ ಹತ್ತಿ ಹಲಸಿನ ಕಾಯಿ ಕೊಯ್ಯುವ ವೇಳೆ ಆಯ ತಪ್ಪಿ ಬಿದ್ದು ಕಾಂಕ್ರೀಟ್ ರಸ್ತೆಗೆ ಬಿದ್ದು ತಲೆಗೆ ಗಂಭೀರ ಗಾಯಗಳಾಗಿ ಸಾವನ್ನಪ್ಪಿದ್ದಾರೆ ಹರೀಶ್ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.