
ಕೆಸಿಇಟಿ: ಎಕ್ಸಲೆಂಟ್ ಮೂಡುಬಿದಿರೆ ವಿದ್ಯಾರ್ಥಿಗಳಿಗೆ ಅತ್ಯುತ್ತಮ ರ‍್ಯಾಂಕ್
Saturday, May 24, 2025
ಮೂಡುಬಿದಿರೆ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಸಿಇಟಿ ಪರೀಕ್ಷೆಯಲ್ಲಿ ಎಕ್ಸಲೆಂಟ್ ಪಿಯು ಕಾಲೇಜಿನ ಶಿಶಿರ್ ಎಚ್.ಶೆಟ್ಟಿ ಇ೦ಜಿನಿಯರಿ೦ಗ್ ವಿಭಾಗದಲ್ಲಿ 4ನೇ ರ‍್ಯಾಂಕ್, ನೂತನ್ ಕೃಷ್ಣ ಬಿ. ಬಿಎನ್‌ವೈಎಸ್‌ನಲ್ಲಿ 4ನೇ ರ‍್ಯಾಂಕ್ ಪಡೆದಿದ್ದಾರೆ.
ನೂತನ್ ಕೃಷ್ಣ ಬಿ ಫಾರ್ಮ ಮತ್ತು ಫಾರ್ಮಾ ಡಿನಲ್ಲಿ 5ನೇ ರ‍್ಯಾಂಕ್, ಬಿಎಸ್ಸಿ ನರ್ಸಿ೦ಗ್ ಮತ್ತು ವೆಟರಿನರಿ ಸಾಯನ್ಸ್‌ನಲ್ಲಿ ೬ನೇ ರ‍್ಯಾಂಕ್ ಅನ್ನು ಗಳಿಸಿದ್ದಾರೆ.
ವಿವಿಧ ವಿಭಾಗಗಳಲ್ಲಿ ಎಕ್ಸಲೆಂಟ್ ವಿದ್ಯಾರ್ಥಿಗಳು ನೂರು ರ‍್ಯಾಂಕ್ ಒಳಗೆ 13 ರ‍್ಯಾಂಕ್, 500 ಒಳಗೆ 38 ರ‍್ಯಾಂಕ್, ಸಾವಿರದ ಒಳಗೆ 65 ರ‍್ಯಾಂಕ್‌ಗಳನ್ನು ಪಡೆದು ರಾಜ್ಯದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ವೃತ್ತಿಪರ ಕೋರ್ಸುಗಳ ಪ್ರವೇಶಾತಿಗಾಗಿ ಅರ್ಹತೆ ಗಳಿಸಿದ್ದಾರೆ.
ಸಾಧಕ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಪ್ರಾಂಶುಪಾಲ ಪ್ರದೀಪ್ ಕುಮಾರ ಶೆಟ್ಟಿ ಮತ್ತು ಉಪನ್ಯಾಸಕ ವೃ೦ದ ಅಭಿನಂದಿಸಿದ್ದಾರೆ.