ಕರ್ನಾಟಕ ಸಿ.ಇ.ಟಿ. ಫಲಿತಾಂಶ: ಕೃಷಿ ವಿಭಾಗದಲ್ಲಿ ಆಳ್ವಾಸ್‌ನ ಅಕ್ಷಯ್ ಎಂ. ಹೆಗ್ಡೆ ರಾಜ್ಯಕ್ಕೆ ಪ್ರಥಮ

ಕರ್ನಾಟಕ ಸಿ.ಇ.ಟಿ. ಫಲಿತಾಂಶ: ಕೃಷಿ ವಿಭಾಗದಲ್ಲಿ ಆಳ್ವಾಸ್‌ನ ಅಕ್ಷಯ್ ಎಂ. ಹೆಗ್ಡೆ ರಾಜ್ಯಕ್ಕೆ ಪ್ರಥಮ


ಮೂಡುಬಿದಿರೆ: ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ-2025ರಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಅಕ್ಷಯ್ ಎಂ. ಹೆಗ್ಡೆ ಕೆಸಿಇಟಿ-ಕೃಷಿ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಗಳಿಸಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅವರು ಶನಿವಾರ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.


ಈ ಅಸಾಧಾರಣ ಸಾಧನೆಯ ಜೊತೆಗೆ ಆಳ್ವಾಸ್‌ನ ಇತರ ವಿದ್ಯಾರ್ಥಿಗಳು ಉನ್ನತ ರ‍್ಯಾಂಕ್‌ಗಳನ್ನು ಪಡೆಯುವ ಮೂಲಕ ವರ್ಷದಿಂದ ವರ್ಷಕ್ಕೆ ಅತ್ಯುತ್ತಮ ಸಿಇಟಿ ಫಲಿತಾಂಶವನ್ನು ಮುಂದುವರಿಸಿದ್ದಾರೆ.


ಮೊದಲ 10 ರ‍್ಯಾಂಕ್‌ಗಳಲ್ಲಿ 02 ರ‍್ಯಾಂಕ್, ಮೊದಲ 50 ರ‍್ಯಾಂಕ್‌ಗಳಲ್ಲಿ 12 ರ‍್ಯಾಂಕ್, ಮೊದಲ 100 ರ‍್ಯಾಂಕ್‌ಗಳಲ್ಲಿ 24 ರ‍್ಯಾಂಕ್, ಮೊದಲ 200 ರ‍್ಯಾಂಕ್‌ಗಳಲ್ಲಿ 52 ರ‍್ಯಾಂಕ್, ಮೊದಲ 500 ರ‍್ಯಾಂಕ್‌ಗಳಲ್ಲಿ 172 ರ‍್ಯಾಂಕ್, ಮೊದಲ 1,000 ರ‍್ಯಾಂಕ್‌ಗಳಲ್ಲಿ 506 ರ‍್ಯಾಂಕ್‌ಗಳನ್ನು ಪಡೆದುಕೊಂಡಿದ್ದಾರೆ.


ಪಿಸಿಬಿಯಲ್ಲಿ 3 ವಿದ್ಯಾರ್ಥಿಗಳು 180ರಲ್ಲಿ 170ಕ್ಕೂ ಅಧಿಕ ಅಂಕ, 49 ವಿದ್ಯಾರ್ಥಿಗಳು 160ಕ್ಕೂ ಅಧಿಕ, 146 ವಿದ್ಯಾರ್ಥಿಗಳು 150ಕ್ಕೂ ಅಧಿಕ, 851 ವಿದ್ಯಾರ್ಥಿಗಳು 121ಕ್ಕೂ ಅಧಿಕ, 1359 ವಿದ್ಯಾರ್ಥಿಗಳು 100ಕ್ಕೂ ಅಧಿಕ ಅಂಕಗಳನ್ನು ಗಳಿಸಿಕೊಂಡಿದ್ದಾರೆ.


ಪಿಸಿಎಮ್‌ನಲ್ಲಿ ಒಬ್ಬ ವಿದ್ಯಾರ್ಥಿ 180ರಲ್ಲಿ 170ಕ್ಕೂ ಅಧಿಕ ಅಂಕ, 5 ವಿದ್ಯಾರ್ಥಿಗಳು 160ಕ್ಕೂ ಅಧಿಕ, 34 ವಿದ್ಯಾರ್ಥಿಗಳು 150ಕ್ಕೂ ಅಧಿಕ, 489 ವಿದ್ಯಾರ್ಥಿಗಳು 120ಕ್ಕೂ ಅಧಿಕ, 971 ವಿದ್ಯಾರ್ಥಿಗಳು 100ಕ್ಕೂ ಅಧಿಕ ಅಂಕಗಳನ್ನು ಪಡೆದುಕೊಂಡಿದ್ದಾರೆ.


ಅಕ್ಷಯ್ ಎಂ. ಹೆಗ್ಡೆ ಕೃಷಿಯಲ್ಲಿ 1ನೇ ರ‍್ಯಾಂಕ್, ನ್ಯಾಚುರೋಪತಿಯಲ್ಲಿ 11ನೇ ರ‍್ಯಾಂಕ್, ಪಶುವೈದ್ಯಕೀಯದಲ್ಲಿ 12ನೇ ರ‍್ಯಾಂಕ್, ನರ್ಸಿಂಗ್‌ನಲ್ಲಿ 12ನೇ ರ‍್ಯಾಂಕ್, ಇಂಜಿನಿಯರಿಂಗ್‌ನಲ್ಲಿ 29ನೇ ರ‍್ಯಾಂಕ್, ಬಿ. ಫಾರ್ಮ ಹಾಗೂ ಡಿ.ಫಾರ್ಮನಲ್ಲಿ 34ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ.


ವೈಭವ್ ಎಂ. ಕೃಷಿಯಲ್ಲಿ 23ನೇ ರ‍್ಯಾಂಕ್, ನ್ಯಾಚುರೋಪತಿಯಲ್ಲಿ 61ನೇ ರ‍್ಯಾಂಕ್, ಪಶುವೈದ್ಯಕೀಯದಲ್ಲಿ 85ನೇ ರ‍್ಯಾಂಕ್, ನರ್ಸಿಂಗ್‌ನಲ್ಲಿ 86ನೇ ರ‍್ಯಾಂಕ್, ಬಿ. ಫಾರ್ಮ ಹಾಗೂ ಡಿ.ಫಾರ್ಮನಲ್ಲಿ 115ನೇ ಬ್ಯಾಂಕ್, ಇಂಜಿನಿಯರಿಂಗ್‌ನಲ್ಲಿ 163ನೇ ರ‍್ಯಾಂಕ್, ವಿಜೇತ್ ಜಿ. ಗೌಡ ಕೃಷಿಯಲ್ಲಿ 34ನೇ ರ‍್ಯಾಂಕ್, ನ್ಯಾಚುರೋಪತಿಯಲ್ಲಿ 124ನೇ ಬ್ಯಾಂಕ್, ರಾಜಾ ಯದುವಂಶಿ ಕೃಷಿಯಲ್ಲಿ 46ನೇ ರ‍್ಯಾಂಕ್, ನ್ಯಾಚುರೋಪತಿಯಲ್ಲಿ 132ನೇ ರ‍್ಯಾಂಕ್, ತುಷಾರ್ ಘನಶ್ಯಾಮ್ ಪಟೇಲ್ ಕೃಷಿಯಲ್ಲಿ 50ನೇ ರ‍್ಯಾಂಕ್, ಪಶುವೈದ್ಯಕೀಯದಲ್ಲಿ 70ನೇ ರ‍್ಯಾಂಕ್, ನರ್ಸಿಂಗ್‌ನಲ್ಲಿ 70ನೇ ರ‍್ಯಾಂಕ್, ನ್ಯಾಚುರೋಪತಿಯಲ್ಲಿ 96ನೇ ರ‍್ಯಾಂಕ್, ಬಿ. ಫಾರ್ಮ ಹಾಗೂ ಡಿ.ಫಾರ್ಮನಲ್ಲಿ 125ನೇ ರ‍್ಯಾಂಕ್, ಚೈತನ್ಯ ಕೃಷಿಯಲ್ಲಿ 62ನೇ ರ‍್ಯಾಂಕ್, ಜಸ್ವಂತ್ ಸಿ. ಕೃಷಿಯಲ್ಲಿ 67ನೇ ರ‍್ಯಾಂಕ್, ಸಾಗರಿಕಾ ಎಂ.ಆರ್. ಕೃಷಿಯಲ್ಲಿ (ಪ್ರಾ) 17ನೇ ರ‍್ಯಾಂಕ್, ತುಷಾರ್ ಉಡುಪ ಕೃಷಿಯಲ್ಲಿ ೯97ನೇ ರ‍್ಯಾಂಕ್, ಅಕ್ಷಯ್ ಆರ್. ತಾಸಿಲ್ದಾರ್ ಪಶುವೈದ್ಯಕೀಯದಲ್ಲಿ 6ನೇ ರ‍್ಯಾಂಕ್, ಕೃಷಿಯಲ್ಲಿ (ಪ್ರಾ) 17ನೇ ರ‍್ಯಾಂಕ್ ಅವಿಸ್ ಹಸನ್ ಅಸಿಫಲಿ ಮುಜಾವರ್ ಕೃಷಿಯಲ್ಲಿ 95ನೇ ರ‍್ಯಾಂಕ್, ನ್ಯಾಚುರೋಪತಿಯಲ್ಲಿ 183ನೇ ಬ್ಯಾಂಕ್ ಪಡೆದುಕೊಂಡಿದ್ದಾರೆ.


ಪ್ರಮುಖವಾಗಿ ಇಂಜಿನಿಯರಿಂಗ್ ವಿಭಾಗದಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮೊದಲ 1000 ರ‍್ಯಾಂಕ್‌ಗಳಲ್ಲಿ 26 ವಿದ್ಯಾರ್ಥಿಗಳು, ಮೊದಲ 5000 ರ‍್ಯಾಂಕ್‌ಗಳಲ್ಲಿ 266 ವಿದ್ಯಾರ್ಥಿಗಳು, ಮೊದಲ 10,000 ರ‍್ಯಾಂಕ್‌ಗಳಲ್ಲಿ ಒಟ್ಟು 638 ವಿದ್ಯಾರ್ಥಿಗಳು ರ‍್ಯಾಂಕ್‌ನ್ನು ಪಡೆದಿದ್ದು, ಇವರೆಲ್ಲರೂ ರಾಜ್ಯದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೀಟು ಪಡೆಯಲು ಅರ್ಹತೆ ಪಡೆದಿದ್ದಾರೆ.


ವಿದ್ಯಾರ್ಥಿ ಕರ್ನಾಟಕಕ್ಕೆ ಪ್ರಥಮ ರ‍್ಯಾಂಕ್ ಗಳಿಸಿರುವುದನ್ನು ಹಾಗೂ ಇತರ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿರುವುದಕ್ಕೆ ನಾನು ಹೆಮ್ಮೆ ಪಡುತ್ತೇನೆ ಎಂದ ಅವರು ಎಲ್ಲಾ ಸಾಧಕರನ್ನು ಅಭಿನಂದಿಸಿದರು.


ಪ್ರಾಂಶುಪಾಲ ಪ್ರೊ. ಎಮ್. ಸದಾಕತ್ ಸುದ್ಧಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
















Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article