
ಸಿಇಟಿ: ಮೊದಲ 10ರಲ್ಲಿ 15 ರ‍್ಯಾಂಕ್ ಪಡೆದುಕೊಂಡ ಮಂಗಳೂರಿನ ಎಕ್ಸ್‌ಪರ್ಟ್ ಪಿಯು ಕಾಲೇಜ್
Saturday, May 24, 2025
ಮಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಿದ ಸಿಇಟಿ ಪರೀಕ್ಷೆಯ ಏಳು ವಿಭಾಗದಲ್ಲಿ ಮಂಗಳೂರಿನ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮೊದಲ 10 ರ‍್ಯಾಂಕ್‌ಗಳಲ್ಲಿ 15 ರ‍್ಯಾಂಕ್ ಪಡೆದು ಹೊಸ ಇತಿಹಾಸವನ್ನು ಸಂಸ್ಥೆಯು ನಿರ್ಮಾಣ ಮಾಡಿದೆ.
ಒಂದು ದ್ವಿತೀಯ, ನಾಲ್ಕು ತೃತೀಯ ರ‍್ಯಾಂಕ್ ಸೇರಿದಂತೆ ಮೊದಲ 10 ರ‍್ಯಾಂಕ್‌ಗಳಲ್ಲಿ 15 ರ‍್ಯಾಂಕ್, ಮೊದಲ 50 ರ‍್ಯಾಂಕ್‌ಗಳಲ್ಲಿ 84 ರ‍್ಯಾಂಕ್, ಮೊದಲ 100 ರ‍್ಯಾಂಕ್‌ನಲ್ಲಿ 163 ರ‍್ಯಾಂಕ್, ಮೊದಲ 150ರಲ್ಲಿ 232 ರ‍್ಯಾಂಕ್, ಮೊದಲ 200 ರ‍್ಯಾಂಕ್‌ಗಳಲ್ಲಿ 285, ಮೊದಲ 300 ರ‍್ಯಾಂಕ್‌ಗಳಲ್ಲಿ 385, ಮೊದಲ 400 ರ‍್ಯಾಂಕ್‌ಗಳಲ್ಲಿ 477, ಮೊದಲ 500 ರ‍್ಯಾಂಕ್‌ಗಳಲ್ಲಿ 579, ಮೊದಲ 1000 ರ‍್ಯಾಂಕ್‌ಗಳಲ್ಲಿ 937 ರ‍್ಯಾಂಕ್‌ಗಳನ್ನು ಸಂಸ್ಥೆಯ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ ಎಂದು ಎಕ್ಸ್‌ಪರ್ಟ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ.ನರೇಂದ್ರ ಎಲ್. ನಾಯಕ್ ತಿಳಿಸಿದ್ದಾರೆ.
ಸಾಯಿಶ್ ಶ್ರವಣ ಪಂಡಿತ್ ಬಿಎಸ್ಸಿ ಕೃಷಿಯಲ್ಲಿ 2ನೇ ರ‍್ಯಾಂಕ್, ಎಂಜಿನಿಯರಿಂಗ್‌ನಲ್ಲಿ 11, ಪಶು ವೈದ್ಯಕೀಯ, ಬಿಎಸ್ಸಿ ನರ್ಸಿಂಗ್‌ನಲ್ಲಿ 20, ಬಿಫಾರ್ಮಾ ಮತ್ತು ಡಿಫಾರ್ಮಾದಲ್ಲಿ ಹಾಗೂ ಬಿಎನ್‌ವೈಎಸ್‌ನಲ್ಲಿ 24ನೇ ರ‍್ಯಾಂಕ್, ಸಫಲ್ ಎಸ್ ಶೆಟ್ಟಿ ಬಿಎನ್‌ವೈಎಸ್, ಪಶುವೈದ್ಯಕೀಯ ಹಾಗೂ ಬಿಎಸ್ಸಿ ನರ್ಸಿಂಗ್‌ನಲ್ಲಿ 3ನೇ ರ‍್ಯಾಂಕ್, ಬಿಫಾರ್ಮಾ ಮತ್ತು ಡಿಫಾರ್ಮಾದಲ್ಲಿ 8ನೇ ರ‍್ಯಾಂಕ್ ಪಡೆದರೆ, ಸುಚಿತ್ ಪಿ.ಪ್ರಸಾದ್ ಕೃಷಿಯಲ್ಲಿ 3, ಎಂಜಿನಿಯರಿಂಗ್, ಬಿಫಾರ್ಮಾ ಮತ್ತು ಡಿಫಾರ್ಮಾದಲ್ಲಿ 21, ಪಶು ವೈದ್ಯಕೀಯ ಮತ್ತು ಬಿಎಸ್ಸಿ ನರ್ಸಿಂಗ್‌ನಲ್ಲಿ 23, ಬಿಎನ್‌ವೈಎಸ್ 30ನೇ ರ‍್ಯಾಂಕ್, ಸ್ನೇಹ ಐ. ಯರಗಣವಿ ಕೃಷಿಯಲ್ಲಿ 5, ಬಿಎನ್‌ವೈಎಸ್‌ನಲ್ಲಿ 16, ಬಿಫಾರ್ಮಾ ಮತ್ತು ಡಿಫಾರ್ಮಾದಲ್ಲಿ 19, ಪಶು ವೈದ್ಯಕೀಯ ಮತ್ತು ನರ್ಸಿಂಗ್‌ನಲ್ಲಿ 25, ಎಂಜಿನಿಯರಿಂಗ್‌ನಲ್ಲಿ 44ನೇ ರ‍್ಯಾಂಕ್, ಸಿದ್ದೇಶ್ ಬಿ. ದಮ್ಮಳ್ಳಿ ಕೃಷಿಯಲ್ಲಿ 7, ಎಂಜಿನಿಯರಿಂಗ್‌ನಲ್ಲಿ 43ನೇ ರ‍್ಯಾಂಕ್, ನಿಖಿಲ್ ಸೊನ್ನದ್ ಕೃಷಿಯಲ್ಲಿ 8, ಬಿಎನ್‌ವೈಎಸ್‌ನಲ್ಲಿ 26, ಕೆ. ರೆಹನ್ ಮೊಹಮ್ಮದ್ ಕೃಷಿಯಲ್ಲಿ 9, ಬಿಎನ್‌ವೈಎಸ್‌ನಲ್ಲಿ 31, ಪಶು ವೈದ್ಯಕೀಯದಲ್ಲಿ 43ನೇ ರ‍್ಯಾಂಕ್, ವಚನ್ ಎಲ್.ಎ. ಕೃಷಿಯಲ್ಲಿ 10, ಬಿಎನ್‌ವೈಎಸ್‌ನಲ್ಲಿ 27, ಪಶುವೈದ್ಯಕೀಯ ಮತ್ತು ನರ್ಸಿಂಗ್‌ನಲ್ಲಿ 35, ಬಿಫಾರ್ಮಾ ಮತ್ತು ಡಿಫಾರ್ಮಾದಲ್ಲಿ 40ನೇ ರ‍್ಯಾಂಕ್, ಪೂಜಾ ಕೃಷಿಯಲ್ಲಿ 11, ಬಿಎನ್‌ವೈಎಸ್‌ನಲ್ಲಿ 44, ಪಶುವೈದ್ಯಕೀಯ ಮತ್ತು ಬಿಎಸ್ಸಿ ನರ್ಸಿಂಗ್‌ನಲ್ಲಿ 47ನೇ ರ‍್ಯಾಂಕ್, ಮನ್ವಿತ್ ವಿಶಾಲ್ ಎಸ್.ಆರ್. ಪಶುವೈದ್ಯಕೀಯ ಮತ್ತು ಬಿಎಸ್ಸಿ ನರ್ಸಿಂಗ್ 13, ಬಿಫಾರ್ಮಾ ಮತ್ತು ಡಿಫಾರ್ಮಾದಲ್ಲಿ 29, ಬಿಎನ್‌ವೈಎಸ್‌ನಲ್ಲಿ 40ನೇ ರ‍್ಯಾಂಕ್, ಕೆ.ಆರ್. ಋತ್ವಿಕ್ ಕೃಷಿಯಲ್ಲಿ 15, ಪಶುವೈದ್ಯಕೀಯ ಮತ್ತು ಬಿಎಸ್ಸಿ ನರ್ಸಿಂಗ್‌ನಲ್ಲಿ 36, ಬಿಫಾರ್ಮಾ ಮತ್ತು ಡಿಫಾರ್ಮಾದಲ್ಲಿ 41ನೇ ರ‍್ಯಾಂಕ್, ವರುಣ್ ಸಿದ್ದಪ್ಪಗೌಡರ್ ಕೃಷಿಯಲ್ಲಿ 18ನೇ ರ‍್ಯಾಂಕ್, ಶ್ರೇಯಾ ಎಸ್. ಪಾಟೀಲ್ ಕೃಷಿಯಲ್ಲಿ 19, ಪಶುವೈದ್ಯಕೀಯ ಮತ್ತು ಬಿಎಸ್ಸಿ ನರ್ಸಿಂಗ್‌ನಲ್ಲಿ
50ನೇ ರ‍್ಯಾಂಕ್, ಮನೀಶ್ ಎಲ್. ಕೃಷಿಯಲ್ಲಿ 27, ಚರಂಜಿತ್ ನಾಗೋತಿ ಕೃಷಿಯಲ್ಲಿ 30ನೇ ರ‍್ಯಾಂಕ್, ಧನುಷ್ ಎಚ್. ಎಲ್. ಕೃಷಿಯಲ್ಲಿ 36ನೇ ರ‍್ಯಾಂಕ್, ವಾದಿರಾಜ್ ಜಿ. ಚಪ್ಪರ್ ಕೃಷಿಯಲ್ಲಿ 38ನೇ ರ‍್ಯಾಂಕ್, ಜೆ. ಶ್ರೇಯಸ್ ಬಿಎನ್‌ವೈಎಸ್‌ನಲ್ಲಿ 41, ಕೃಷಿಯಲ್ಲಿ 42ನೇ ರ‍್ಯಾಂಕ್, ವಚನಾ ಅಲ್ಲಮಪ್ರಭು ಬಾಗೋಡಿ ಕೃಷಿಯಲ್ಲಿ 44ನೇ ರ‍್ಯಾಂಕ್, ಯೋಗಿತ್ ಗೌಡ ಎಚ್.ವಿ. ಬಿಎನ್‌ವೈಎಸ್‌ನಲ್ಲಿ 22, ಪಶುವೈದ್ಯಕೀಯ ಮತ್ತು ಬಿಎಸ್ಸಿ ನರ್ಸಿಂಗ್‌ನಲ್ಲಿ 32, ಬಿಫಾರ್ಮಾ ಮತ್ತು ಡಿಫಾರ್ಮಾದಲ್ಲಿ 43ನೇ ರ‍್ಯಾಂಕ್, ಮೌರ್ಯ ಎಚ್.ಡಿ.ಗೌಡ ಬಿಎನ್‌ವೈಎಸ್‌ನಲ್ಲಿ 38, ಪಶುವೈದ್ಯಕೀಯ ಮತ್ತು ಬಿಎಸ್ಸಿ ನರ್ಸಿಂಗ್‌ನಲ್ಲಿ 27ನೇ ರ‍್ಯಾಂಕ್, ಎಂ.ತೇಜಸ್ವಿ ಪಾಟೀಲ್ ಬಿಎನ್‌ವೈಎಸ್‌ನಲ್ಲಿ 45, ಪಶುವೈದ್ಯಕೀಯ ಮತ್ತು ಬಿಎಸ್ಸಿ ನರ್ಸಿಂಗ್‌ನಲ್ಲಿ 29ನೇ ರ‍್ಯಾಂಕ್, ಅವನೀಶ್ ಬಿ. ಎಂಜಿನಿಯರಿಂಗ್‌ನಲ್ಲಿ 32, ಅಮೂಲ್ಯ ಕಾಮತ್ ಎಂಜಿನಿಯರಿಂಗ್‌ನಲ್ಲಿ 33ನೇ ರ‍್ಯಾಂಕ್, ಅನಿಕೇತ್ ಎಂಜಿನಿಯರಿಂಗ್‌ನಲ್ಲಿ 48ನೇ ರ‍್ಯಾಂಕ್, ಶ್ರೇಯಾ ಎಸ್ ಬಿಎನ್‌ವೈಎಸ್‌ನಲ್ಲಿ 49ನೇ ರ‍್ಯಾಂಕ್ ಪಡೆದಿದ್ದಾರೆ.
ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಕಠಿಣ ಪರಿಶ್ರಮ, ಪರಿಸರ, ಸರಿಯಾದ ಉತ್ತಮ ಮಾರ್ಗದರ್ಶನದಿಂದಾಗಿ ಈ ಸಾಧನೆ ಸಾಧ್ಯವಾಗಿದೆ. ಬಿಎಸ್ಸಿ ಕೃಷಿ ವಿಭಾಗದ ಮೊದಲ 10 ರ‍್ಯಾಂಕ್‌ನಲ್ಲಿ ಏಳು ರ‍್ಯಾಂಕ್‌ಗಳನ್ನು ಎಕ್ಸ್‌ಪರ್ಟ್ ವಿದ್ಯಾರ್ಥಿಗಳು ಪಡೆದಿರುವುದು ವಿಶೇಷವಾಗಿದೆ. ಈಗಾಗಲೇ ಬೋರ್ಡ್ ಪರೀಕ್ಷೆ ಹಾಗೂ ಜೆಇಇ ಮೈನ್ಸ್‌ನಲ್ಲಿ ಉತ್ತಮ ಫಲಿತಾಂಶವನ್ನು ಸಂಸ್ಥೆಯ ವಿದ್ಯಾರ್ಥಿಗಳು ಪಡೆದಿದ್ದು, ಮುಂದಿನ ದಿನಗಳಲ್ಲಿ ನೀಟ್‌ನಲ್ಲೂ ಉತ್ತಮ ಫಲಿತಾಂಶ ಪಡೆಯುವ ನಿರೀಕ್ಷೆ ಇದೆ. ಸಾಧನೆ ಮಾಡಿದ ಎಲ್ಲ ವಿದ್ಯಾರ್ಥಿಗಳಿಗೆ ಹಾರ್ದಿಕ ಅಭಿನಂದನೆಗಳು ಎಂದು ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ಅಭಿನಂದಿಸಿದ್ದಾರೆ.