
12 ವರ್ಷದ ಬಾಲಕನ ಹೆಚ್ಚಿನ ಚಿಕಿತ್ಸೆಗೆ ಸಹಾಯಹಸ್ತ
ಕುಂದಾಪುರ: ಕುಂದಾಪುರ ತಾಲೂಕಿನ ಬೇಳೂರು ಗ್ರಾಮದ ದೇಲಟ್ಟು ನಿವಾಸಿ ಉಷಾ ಕೊಠಾರಿ ಎಂಬ ತಾಯಿಯ ಪಾಡು ಕೂಡ ಇದೇ ಆಗಿದ್ದು ವಿಪರ್ಯಾಸವೇ ಸರಿ..!
ಹೌದು ಇದು ಕುಂದಾಯ ತಾಲೂಕಿನ ಬೇಳೂರು ಗ್ರಾಮದ ಹುಡುಗ ಪ್ರಜ್ವಲ್ ಅನುಭವಿಸುತ್ತಿರುವ ಸಂಕಷ್ಟ.
ಎಳೆಯ ವಯಸ್ಸಲ್ಲಿ ನೆರೆಮನೆಯ ಮಗುವು ಆಟ ಅಡಿ ಪಾಠ ಕಲಿತು ಚಿಗರೆಯಂತೆ ಚಿಗಿಯುತ್ತಿದ್ದರೆ ತನ್ನ ಕಂದಮ್ಮ ಆಸ್ಪತ್ರೆಯ ಹಾಸಿಗೆ ಮೇಲೆ ಜೀವನ್ಮರಣ ಸ್ಥಿತಿಯಲ್ಲಿದ್ದರೆ ಯಾವ ತಾಯಿ ತಾನೇ ಸುಖದಿಂದಿದ್ದಾಳು..?
ಉಷ ಅವರ ಮಗ ಪ್ರಜ್ವಲ 9ನೇ ತರಗತಿ ಓದುತ್ತಿರುವ 14 ವರ್ಷದ ವಿದ್ಯಾರ್ಥಿ. ಎರಡು ವರ್ಷದ ಹಿಂದೆ ಅನಾರೋಗ್ಯವೆಂದು ಪರೀಕ್ಷಿಸಿದಾಗ Acute Lymphobiastic Leukemia (ರಕ್ತದ ಕ್ಯಾನ್ಸರ್) ಎಂದು ವೈದ್ಯರು ತಿಳಿಸಿದರು. ಎದೆಗುಂದದ ಉಷ ಅವರು ತನ್ನವರನ್ನು ಕಾಡಿಬೇಡಿ ಚಿನ್ನವನ್ನೆಲ್ಲ ಒತ್ತೆಯಿರಿಸಿ 20 ಲಕ್ಷ ವ್ಯಯಿಸಿ ಮಗನನ್ನು ಸುರಕ್ಷಿತವಾಗಿ ಮನೆಗೆ ಕರೆತರುತ್ತಾರೆ.
ಮತ್ತೆ 2 ವರ್ಷದ ನಂತರ ಇದೀಗ ಜ್ವರವೆಂದು ಪರೀಕ್ಷಿಸಿದಾಗ ಮತ್ತದೇ ಮಾರಿ ಒಕ್ಕರಿಸಿಕೊಂಡಿದ್ದು, Bone Marrow Transplant ಮಾಡಬೇಕು ಮತ್ತು ಅಂದಾಜು 30 ಲಕ್ಷ ಖರ್ಚು ತಗಲುತ್ತದೆ ಎನ್ನುತ್ತಾರೆ ನಾರಾಯಣ ಹೃದಯಾಲಯದ ಕ್ಯಾನ್ಸರ್ ವಿಭಾಗದ ತಜ್ಞರು..!
ಈಗಾಗಲೇ ಚಿಕಿತ್ಸೆ ಆರಂಭಗೊಂಡಿದ್ದು, ಚಿಕಿತ್ಸೆ ಮುಂದುವರಿಸಲು ಹಣದ ಅಗತ್ಯವಿದ್ದು, ಸಹಾಯ ಹಸ್ತ ಚಾಚಿದ್ದಾರೆ.
Bank Name: Bank of Baroda
A/c No. : 81740100001075
IFSC Code: BARBOVJKMBH
Google Pay
PhonePe
96201 08964
ಉಷಾ ಕೊಠಾರಿ