
ಕಥೊಲಿಕ್ ಸಭಾ ಕೇಂದ್ರೀಯ ನೂತನ ಅಧ್ಯಕ್ಷರಾಗಿ ಸಂತೋಷ್ ಡಿ’ಸೋಜ ಬಜ್ಪೆ ಆಯ್ಕೆ
Monday, May 12, 2025
ಮಂಗಳೂರು: ಇಲ್ಲಿನ ಧರ್ಮಕ್ಷೇತ್ರದ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಸಂಘಟನೆಯ 2025-26ನೇ ಸಾಲಿನ ವಾರ್ಷಿಕ ಚುನಾವಣೆಯು ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರ ನಿವಾಸದ ಸಭಾ ಭವನದಲ್ಲಿ ಮೇ 11ರಂದು ನಡೆದಿದ್ದು, ನೂತನ ಕೇಂದ್ರೀಯ ಅಧ್ಯಕ್ಷರಾಗಿ ಸಂತೋಷ್ ಡಿ’ಸೋಜ ಬಜ್ಪೆ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಕೇಂದ್ರೀಯ ಆದ್ಯಾತ್ಮಿಕ ನಿರ್ದೇಶಕ ವಂ. ಡಾ. ಜೆ.ಬಿ. ಸಲ್ಡಾನ್ಹಾ ಅವರು ಚುನಾವಣೆಯ ಮೊದಲು ನೂತನ ಪೋಪ್ ಲಿಯೋ ೧೪ರವರ ಚುನಾವಣೆಯನ್ನು ಸ್ಮರಿಸಿ ಅದೇ ರೀತಿ ಪ್ರಾರ್ಥನೆಯ ಮೂಲಕ ಚುನಾವಣೆಯನ್ನು ನಡೆಸಲು ಮಾರ್ಗದರ್ಶನ ನೀಡೀದರು.
ಅಧ್ಯಕ್ಷ ಸಂತೋಷ್ ಡಿಸೋಜ ಬಜ್ಪೆ, ಪ್ರಥಮ ಉಪಾಧ್ಯಕ್ಷ ಲೋರೆನ್ಸ್ ಡಿಸೋಜ ಸುರತ್ಕಲ್, ದ್ವಿತೀಯ ಉಪಾಧ್ಯಕ್ಷ ಲಿಯೋ ರೊಡ್ರಿಗಸ್ ಮಡಂತ್ಯಾರ್, ಪ್ರಧಾನ ಕಾರ್ಯದರ್ಶಿ ವಿಲ್ಮಾ ಮೊಂತೇರೊ ದೇರೆಬೈಲ್, ಸಹ ಕಾರ್ಯದರ್ಶಿ ಆಲ್ವಿನ್ ರೊಡ್ರಿಗಸ್ ಮೂಡಬಿದಿರೆ ಅಲಂಗಾರ್, ಖಜಾಂಚಿ ಫ್ರಾನ್ಸಿಸ್ ಮೊಂತೇರೊ ಮರಿಯಾಶ್ರಮ್ ತಲಪಾಡಿ, ಸಹ ಖಜಾಂಚಿ ಲವೀನಾ ಗ್ರೆಟ್ಟಾ ಡಿಸೋಜ ರಾಣಿಪುರ ಇವರೆಲ್ಲರೂ ಅವಿರೋಧವಾಗಿ ಆಯ್ಕೆಯಾದರು.
ಮಾಜಿ ಅಧ್ಯಕ್ಷ ಲ್ಯಾನ್ಸಿ ಡಿಕುನ್ಹಾ ಚುನಾವಣಾಧಿಕಾರಿಯಾಗಿ ಮತ್ತು ಜೆರಿ ಪೀಟರ್ ರೊಡ್ರಿಗಸ್ ಚುನಾವಣಾ ವೀಕ್ಷಣಾಧಿಕಾರಿಯಾಗಿ ಚುನಾವಣೆಯನ್ನು ನಡೆಸಿಕೊಟ್ಟರು.