
ವಿದ್ಯಾರ್ಥಿ ಬಸ್ ಪಾಸ್ ಅರ್ಜಿ ವಿತರಣೆ ಆರಂಭ!
Thursday, May 29, 2025
ಮಂಗಳೂರು: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಸಂಚರಿಸುವ ಖಾಸಗಿ ಎಕ್ಸ್‌ಪ್ರೆಸ್, ಸರ್ವಿಸ್ ಬಸ್‌ಗಳಲ್ಲಿ ಪ್ರಯಾಣಿಸುವ ವಿದ್ಯಾರ್ಥಿ ಗಳಿಗೆ ಕೆನರಾ ಬಸ್ ಮಾಲೀಕರ ಸಂಘದಿಂದ ನೀಡುವ 2025-26ನೇ ಸಾಲಿನ ಶೇ.50 ರಿಯಾಯಿತಿ ವಿದ್ಯಾರ್ಥಿ ಪಾಸ್‌ಗಳ ಅರ್ಜಿ ವಿತರಣೆ ಆರಂಭವಾಗಿದೆ.
ಸಂಘದ ಕಚೇರಿಗಳಾದ ಮಂಗಳೂರು, ಪಡುಬಿದ್ರಿ, ಉಡುಪಿ, ಕುಂದಾಪುರ, ಕಾರ್ಕಳ, ಮೂಡಬಿದಿರೆ, ಕಿನ್ನಿಗೋಳಿ, ಹಿರಿಯಡ್ಕ, ಹೆಬ್ರಿ, ಸಿದ್ದಾಪುರ, ಬೈಂದೂರು, ಹಾಲಾಡಿ ಕೇಂದ್ರಗಳಲ್ಲಿ ಅರ್ಜಿ ಪಡೆದು ಸೂಕ್ತ ದಾಖಲೆ ಸಲ್ಲಿಸಿ ವಿದ್ಯಾರ್ಥಿ ಪಾಸುಗಳನ್ನು ಪಡೆದುಕೊಳ್ಳಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ
ಕೆನರಾ ಬಸ್ಸು ಮಾಲಕರ ಸಂಘ (ರಿ)
ಪ್ರಧಾನ ಕಛೇರಿ ವಿಳಾಸ:
ಕೆನರಾ ಬಸ್ಸು ಮಾಲಕರ ಸಂಘ
ಇಂಟರ್ ಸಿಟಿ ಕಟ್ಟಡ, ಹೊಟೇಲ್ ಹರಿಕಿರಣ ಹತ್ತಿರ, ಸಿಟಿ ಬಸ್ ನಿಲ್ದಾಣ ಸ್ಟೇಟ್ ಬ್ಯಾಂಕ್ ಮಂಗಳೂರು.
ಸಂಪರ್ಕ: 7259018002, 0820-2521211 ಸಂಪರ್ಕಿಸಬಹುದು.