
ಕಾಲೇಜು ಬಸ್ಸಿಗೆ ಖಾಸಗಿ ಬಸ್ಸು ಢಿಕ್ಕಿ: ವಿದ್ಯಾರ್ಥಿನಿಯರು, ಪ್ರಯಾಣಿಕರಿಗೆ ಗಾಯ
Sunday, May 18, 2025
ಮಂಗಳೂರು: ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳಲು ನಿಂತಿದ್ದ ಕಾಲೇಜು ಬಸ್ಸಿಗೆ ಹಿಂದಿನಿಂದ ಖಾಸಗಿ ಬಸ್ಸೊಂದು ಢಿಕ್ಕಿ ಹೊಡೆದ ಪರಿಣಾಮ ಬಲ್ಮಠ ಬಳಿಯ ನರ್ಸಿಂಗ್ ಕಾಲೇಜೊಂದರ ವಿದ್ಯಾರ್ಥಿಗಳು ಹಾಗೂ ಬಸ್ಸಿನಲ್ಲಿದ್ದ ಪ್ರಯಾಣಿಕರು ಸೇರಿ 10-12 ಮಂದಿ ಸಣ್ಣ ಪುಟ್ಟ ಗಾಯಗೊಂಡ ಘಟನೆ ಶನಿವಾರ ಬೆಳಗ್ಗೆ 7.25ರ ವೇಳೆಗೆ ನಗರದ ಬಲ್ಮಠದಲ್ಲಿ ಸಂಭವಿಸಿದೆ.
ಬಲ್ಮಠ-ಬೆಂದೂರುವೆಲ್ ರಸ್ತೆಯ ಬದಿಯಲ್ಲಿ ಕಾಲೇಜು ಬಸ್ಸನ್ನು ನಿಲ್ಲಿಸಲಾಗಿತ್ತು. ವಿದ್ಯಾರ್ಥಿನಿಯರು ಬಸ್ ಏರುತ್ತಿದ್ದರು. ಆಗ ಕಲೆಕ್ಟರ್ ಗೇಟ್ ಕಡೆಯಿಂದ ವೇಗವಾಗಿ ಬಂದ ತೊಕ್ಕೊಟ್ಟು ಕಡೆಗೆ ಹೋಗುವ ಬಸ್ ಢಿಕ್ಕಿಯಾಗಿದೆ. ಕಾಲೇಜು ಬಸ್ಸಿನ ಹಿಂಭಾಗ ಮತ್ತು ಖಾಸಗಿ ಬಸ್ಸಿನ ಮುಂಭಾಗ ಜಖಂಗೊಂಡಿದೆ. ಢಿಕ್ಕಿ ಹೊಡೆದ ರಭಸಕ್ಕೆ ಕಾಲೇಜು ಬಸ್ ಕೆಲವು ಅಡಿಗಳಷ್ಟು ಮುಂದಕ್ಕೆ ಸಾಗಿದೆ. ತತ್ಕ್ಷಣ ಸ್ಥಳೀಯರು ನೆರವಿಗೆ ಧಾವಿಸಿದ್ದಾರೆ.
ಕದ್ರಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.