
ಸುಹಾಸ್ ಶೆಟ್ಟಿ ಹತ್ಯೆಗೂ ಮುನ್ನ ಭರ್ಜರಿ ಪಾರ್ಟಿ
Monday, May 5, 2025
ಮಂಗಳೂರು: ಹಿಂದೂ ಕಾರ್ಯಕರ್ತ, ರೌಡಿ ಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳು ಹತ್ಯೆಗೂ ಮುನ್ನ ಚಿಕ್ಕಮಗಳೂರು ಜಿಲ್ಲೆಯ ಕಳಸದ ರೆಸಾರ್ಟ್‌ನಲ್ಲಿ ಭರ್ಜರಿ ಪಾರ್ಟಿ ಮಾಡಿರುವುದು ಬೆಳಕಿಗೆ ಬಂದಿದೆ.
ಏ.2 ರಂದು ಆರೋಪಿಗಳು ನೈಟ್ ಪಾರ್ಟಿ ಮಾಡಿದ್ದು, ಹತ್ಯೆಗೆ ಸ್ಕೆಚ್ ರೂಪಿಸಲೆಂದೇ ಪಾರ್ಟಿ ಮಾಡಿರುವ ಅನುಮಾನ ವ್ಯಕ್ತವಾಗಿದೆ. ಕ್ಯಾಂಪ್ ಫೈರ್ ಹಾಕಿ ಸುಹಾಸ್ ಶೆಟ್ಟಿ ಹತ್ಯೆಯ ಆರೋಪಿಗಳಾದ ಮುಝಮ್ಮಿಲ್, ನಿಯಾಜ್ ಹಾಗೂ ಚಿಕ್ಕಮಗಳೂರು ಮೂಲದ ರಂಜಿತ್ ಪಾರ್ಟಿ ಮಾಡಿದ್ದಾರೆ. ಈ ಮೂವರ ಜೊತೆ ಇನ್ನೂ ಐದು ಜನ ಅಪರಿಚಿತರು ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಪಾರ್ಟಿ ಮಾಡಿರುವ ಪೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರೆಲ್ ಆಗಿದೆ.