ಗಾಳಿ, ಮಳೆಗೆ ತಾಲೂಕಿನಲ್ಲಿ ಧರೆಗುರುಳಿದ  35 ವಿದ್ಯುತ್ ಕಂಬಗಳು, ಮರಗಳು: 10 ಲಕ್ಷಕ್ಕೂ ಅಧಿಕ ನಷ್ಟ

ಗಾಳಿ, ಮಳೆಗೆ ತಾಲೂಕಿನಲ್ಲಿ ಧರೆಗುರುಳಿದ 35 ವಿದ್ಯುತ್ ಕಂಬಗಳು, ಮರಗಳು: 10 ಲಕ್ಷಕ್ಕೂ ಅಧಿಕ ನಷ್ಟ


ಮೂಡುಬಿದಿರೆ: ಶುಕ್ರವಾರ ಮತ್ತು ಶನಿವಾರ ಬೀಸಿದ ಗಾಳಿ ಮಳೆಗೆ ತಾಲೂಕಿನಲ್ಲಿ ಮರಗಳು ಮತ್ತು 35 ರಷ್ಟು ವಿದ್ಯುತ್ ಕಂಬಗಳು ಧರೆಗುರುಳಿದ್ದು ಸುಮಾರು ರೂ. 10 ಲಕ್ಷಕ್ಕೂ ಅಧಿಕ ನಷ್ಟ ಉಂಟಾಗಿದೆ.


ರಭಸವಾಗಿ ಬೀಸಿದ ಗಾಳಿಯ ಪರಿಣಾಮವಾಗಿ ಮಹಾವೀರ ಕಾಲೇಜು ಬಳಿ, ಬಿರಾವಿನ ಕಕ್ಕೆಬೆಟ್ಟು, ಪಾಲಡ್ಕ ಗ್ರಾ.ಪಂ. ವ್ಯಾಪ್ತಿಯ ಕಡಂದಲೆ, ವಣ೯ಬೆಟ್ಟು, ಮುಂಡುದೆ೯, ಬೆಳುವಾಯಿ, ಶಿತಾ೯ಡಿ ಹಾಗೂ ಕಲ್ಲಮುಂಡ್ಕೂರು ಗ್ರಾ. ಪಂ. ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಮರಗಳು ಉರುಳಿ ವಿದ್ಯುತ್ ಕಂಬಗಳ ಮೇಲೆ ಬಿದ್ದ ಪರಿಣಾಮವಾಗಿ ಕಂಬಗಳು ನೆಲಕ್ಕೆ ಬಿದ್ದಿವೆ.


ಮಹಾವೀರ ಕಾಲೇಜು ಬಳಿ ರಾಜ್ಯ ಹೆದ್ದಾರಿಗೆ ಬೆಳಿಗ್ಗೆ 5 ಗಂಟೆ ವೇಳೆಗೆ ಮರ, ವಿದ್ಯುತ್ ಕಂಬ ಬಿದ್ದದ್ದರಿಂದ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿತ್ತು.


ಮೆಸ್ಕಾಂ ಇಲಾಖೆಯು ತಕ್ಷಣ ಕಾಯ೯ಪ್ರವೃತವಾಗಿ ವಿದ್ಯುತ್ ಸಂಪಕ೯ ಕಲ್ಪಿಸಿದ್ದಾರೆ.




Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article