
ಡಿಸಿಎಂ ಕೋಸ್೯: ರ‍್ಯಾಂಕ್ ವಿಜೇತ ಶಿಕ್ಷಣಾಥಿ೯ಗಳಿಗೆ ಸನ್ಮಾನ
Monday, May 12, 2025
ಮೂಡುಬಿದಿರೆ: ಕನಾ೯ಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು ಹಾಗೂ ಕನಾ೯ಟಕ ಇನ್‌ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್ ಮೂಡುಬಿದಿರೆ ಇವುಗಳ ಸಂಯುಕ್ತಾಶ್ರಯದಲ್ಲಿ ಡಿಸಿಎಂ ಕೋಸ್೯ 69ನೇ ತಂಡದ ರ‍್ಯಾಂಕ್ ವಿಜೇತ ಶಿಕ್ಷಣಾಥಿ೯ಗಳಿಗೆ ಸನ್ಮಾನ ಕಾಯ೯ಕ್ರಮವು ಲಾಡಿ ಕೆಐಸಿಎಂನ ಸಭಾಂಗಣದಲ್ಲಿ ನಡೆಯಿತು.
ಇನ್ನರ್ ವ್ಹೀಲ್ ಕ್ಲಬ್‌ನ ಮಾಜಿ ಅಧ್ಯಕ್ಷೆ ಜಯಶ್ರೀ ಅಮರನಾಥ ಶೆಟ್ಟಿ ಕಾಯ೯ಕ್ರಮವನ್ನು ಉದ್ಘಾಟಿಸಿ ಮಾತನಾಡಿ, ತನ್ನ ಪತಿ ಅಮರನಾಥ ಶೆಟ್ಟಿ ಅವರಿಗೆ ಸಹಕಾರಿ ಕ್ಷೇತ್ರದ ಬಗ್ಗೆ ಅಪಾರ ಗೌರವ ಮತ್ತು ಪ್ರೀತಿ ಆದ್ದರಿಂದಲೇ ಮೂಡುಬಿದಿರೆಯಂತಹ ಗ್ರಾಮೀಣ ಪ್ರದೇಶದಲ್ಲಿ ಸಹಕಾರಿ ತರಬೇತಿ ಸಂಸ್ಥೆಯನ್ನು ತೆರೆದು ಊರಿನಲ್ಲಿರುವ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿರುವುದು ಸಂತಸದ ವಿಷಯ ಎಂದ ಅವರು ರ‍್ಯಾಂಕ್ ಪಡೆದಿರುವ ವಿದ್ಯಾಥಿ೯ಗಳನ್ನು ಅಭಿನಂದಿಸಿದರು.
ಕನಾ೯ಟಕ ರಾಜ್ಯ ಸಹಕಾರ ಮಹಾಮಂಡಲಳ ನಿ., ಇದರ ನಿದೇ೯ಶಕ, ಉಡುಪಿ ಜಿಲ್ಲಾ ಸಹಕಾರ ಯೂನಿಯನ್‌ನ ಅಧ್ಯಕ್ಷ, ಸಹಕಾರ ರತ್ನ ಬಿ. ಜಯಕರ ಶೆಟ್ಟಿ ಇಂದ್ರಾಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಧನೆ ಮಾಡಲು ಮತ್ತು ಹೆಚ್ಚು ಬೆಳೆಯಲು ಅವಕಾಶವಿರುವ ಕ್ಷೇತ್ರವಿದ್ದರೆ ಅದು ಸಹಕಾರಿ ಕ್ಷೇತ್ರ. ಜೀವನದಲ್ಲಿ ಶಿಕ್ಷಣ ಅತೀ ಅಗತ್ಯ. ಅವಕಾಶ ಸಿಕ್ಕಿದಾಗ ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಸಹಕಾರಿ ಕ್ಷೇತ್ರದಲ್ಲಿ ತರಬೇತಿ ಪಡೆದವರಿಗೆ ಉದ್ಯೋಗದ ಅವಕಾಶವನ್ನು ನೀಡುವ ಬಗ್ಗೆ ಮನವಿ ಮಾಡಲಾಗುವುದೆಂದು ತಿಳಿಸಿದರು.
ಎಂಸಿಎಸ್ ಸೊಸೈಟಿಯ ಅಧ್ಯಕ್ಷ, ಸಹಕಾರ ರತ್ನ ಎಂ. ಬಾಹುಬಲಿ ಪ್ರಸಾದ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಒಂದು ಸಹಕಾರಿ ಬ್ಯಾಂಕ್ ಇರಬೇಕೆಂದು ಕೇಂದ್ರದ ನಿಲುವು ಇದೆ. ರಾಜ್ಯದಲ್ಲಿ 8 ಸಹಕಾರಿ ತರಬೇತಿ ಕೇಂದ್ರಗಳಿದ್ದು ಅವುಗಳಲ್ಲಿ ಮೂಡುಬಿದಿರೆಯು ಉತ್ತಮ ತರಬೇತಿ ಕೇಂದ್ರವಾಗಿದೆ ಎನ್ನುವುದಕ್ಕೆ ಇಲ್ಲಿನ ವಿದ್ಯಾಥಿ೯ಗಳಿಗೆ ರ‍್ಯಾಂಕ್ ಬಂದಿರುವುದೇ ಸಾಕ್ಷಿಯಾಗಿದೆ ಎಂದ ಅವರು ಸಹಕಾರಿ ಕ್ಷೇತ್ರದಲ್ಲಿ ಇರುವಷ್ಟು ಅವಕಾಶ ಬೇರೆಲ್ಲಿಯೂ ಇಲ್ಲ ಎಂಬುದನ್ನು ತಿಳಿದುಕೊಳ್ಳಿ ಎಂದರು.
ರ‍್ಯಾಂಕ್ ವಿಜೇತರಿಗೆ ಸನ್ಮಾನ:
ಚೇತನಾ ಬಿ.ಎಸ್. (1ನೇ ರ‍್ಯಾಂಕ್), ದೀಕ್ಷಾ (2ನೇ ರ‍್ಯಾಂಕ್), ಸ್ವಾತಿ (5ನೇ ರ‍್ಯಾಂಕ್), ಬಿಂದ್ಯಶ್ರೀ (6ನೇ ರ‍್ಯಾಂಕ್), ಧನ್ಯ ಮತ್ತು ಸುಮನ (8ನೇ ರ‍್ಯಾಂಕ್) ವಿಜೇತ ಶಿಕ್ಷಣಾಥಿ೯ಗಳಾಗಿದ್ದು ಇವರನ್ನು ಸನ್ಮಾನಿಸಲಾಯಿತು.
ಆಳ್ವಾಸ್ ಸಹಕಾರಿ ಸಂಘದ ಮುಖ್ಯ ಕಾಯ೯ನಿವ೯ಹಣಾಧಿಕಾರಿ ಅಪಿ೯ತಾ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಂಸ್ಥೆಯ ಪ್ರಾಂಶುಪಾಲ ವಿಶ್ವೇಶ್ವರಯ್ಯ ಸ್ವಾಗತಿಸಿ, ಉಪನ್ಯಾಸಕ ಹರೀಶ್ ಕಾಯ೯ಕ್ರಮ ನಿರೂಪಿಸಿದರು. ಉಪನ್ಯಾಸಕಿ ಬಿಂದು ವಂದಿಸಿದರು.