ತಾಯಿ ಕೇವಲ ವ್ಯಕ್ತಿಯಲ್ಲ, ಆಕೆಯೊಂದು ಶಕ್ತಿ

ತಾಯಿ ಕೇವಲ ವ್ಯಕ್ತಿಯಲ್ಲ, ಆಕೆಯೊಂದು ಶಕ್ತಿ


ಇಂದು ತಾಯಂದಿರ ದಿನ ಇಂದಿನ ದಿನದ ನೆನಪು ಯಾರಿಗೂ ಇರುವುದಿಲ್ಲ. ಇದರ ಹೊರತಾಗಿ ಪ್ರೇಮಿಗಳ ದಿನಾಚರಣೆ ಇತರ ದಿನಾಚರಣೆಗಳ ಎಲ್ಲರಿಗೂ ನೆನಪಿನಲ್ಲಿ ಇರುತ್ತದೆ. ಆದರೆ ನಮ್ಮನ್ನು ಹೆತ್ತು ಹೊತ್ತು ಸಲಹಿದ ಮಾತೇಯರ ದಿನವೂ ನಮಗೆ ನೆನಪಿರುವುದಿಲ್ಲ.

ತಾಯಿ ಈ ಒಂದು ಪದದಲ್ಲಿ ಅಡಗಿರೋ ಪ್ರೀತಿಯ ಆಳವನ್ನು ಅಳೆಯಲು ಜಗತ್ತಿನ ಯಾವುದೇ ತಕ್ಕಡಿಯು ಸಾಲದು ಅವಳು ಕೇವಲ ನಮ್ಮನ್ನು ಹೆತ್ತವಳಲ್ಲ ನಮ್ಮ ಅಸ್ತಿತ್ವದ ಬೇರು, ನಮ್ಮ ಬದುಕಿನ ಆಕಾಶ ಬಾಲ್ಯದ ಮುಗ್ಧ ನಗುವಿನಿಂದ ಹಿಡಿದು, ಯವ್ವನದ ಕನಸುಗಳವರೆಗೂ, ಪ್ರತಿಯೊಂದು ಹಂತದಲ್ಲೂ ಅವಳು ಪ್ರೀತಿಯ ಒಂದು ಅಕ್ಷಯವಾದ ನಿಧಿಯಂತೆ ನಮ್ಮನ್ನು ಕಾಪಾಡುತ್ತದೆ.

ಅವಳ ಮಡಿಲು ಒಂದು ಬೆಚ್ಚಗಿನ ತಾಣ, ಅಲ್ಲಿ ನಾವು ನಮ್ಮೆಲ್ಲ ನೋವುಗಳನ್ನು ಮರೆತು ಮಗುವಾಗಬಹುದು. ಅವಳ ಸ್ಪರ್ಶದಲ್ಲಿ ಒಂದು ದೈವಿಕ ಶಕ್ತಿ ಇದೆ, ತಾಯಿ ನಮ್ಮೆಲ್ಲರ ಆತಂಕಗಳನ್ನು ದೂರ ಮಾಡಿ ಮನಸ್ಸಿಗೆ ಶಾಂತಿಯನ್ನು ನೀಡುತ್ತಾರೆ.

ತಾಯಿಯ ಕಣ್ಣುಗಳು ಕರುಣೆಯ ಕಡಲಿದ್ದಂತೆ ಆ ಕಣ್ಣುಗಳಿಗೆ ನಮ್ಮೆಲ್ಲ ತಪ್ಪುಗಳು ಮನಿಸುವ ವಿಶಾಲವಾದ ಹೃದಯ ಅವಳದು. 

ನಮ್ಮ ಸಣ್ಣ ಸಾಧನೆಗಳಿಗೆ ಯಾರು ಸಂತೋಷ ಪಡದಿದ್ದರೂ ನಮ್ಮ ಸಣ್ಣ ಸಾಧನೆಗಳಿಗೆ ಬೆಟ್ಟದಷ್ಟು ಸಂತೋಷ ಪಡು ಮುಗ್ಧ ಮನಸ್ಸಿದೆ. ನಮ್ಮ ಸಣ್ಣ ನೋವುಗಳಿಗೆ ಸ್ಪಂದಿಸುತ್ತಾ ಅವಳ ಬೈಗುಳದಲ್ಲೂ ಒಂದು ಕಾಳಜಿಯು ಸೆಳೆಯುವಿರುತ್ತದೆ ಅದು ನಮ್ಮನ್ನು ತಿದ್ದಿ ಉತ್ತಮ ದಾರಿಗೆ ನಡೆಸುತ್ತದೆ.

ನನಗೆ ಎಷ್ಟೇ ಕಷ್ಟ ಬಂದರೂ ಪರವಾಗಿಲ್ಲ ನನ್ನ ಮಕ್ಕಳಿಗೆ ಯಾವುದೇ ತೊಂದರೆ ಬರಬಾರದು ಎಂದು ಬೇಡುವ ಪರಿಶುದ್ಧ ಹೃದಯ ತಾಯಿಗೆ ಮಾತ್ರ ಇರಲು ಸಾಧ್ಯ.

ತನಗೆ ಅದೆಷ್ಟೇ ಕಷ್ಟ ಬಂದರೂ ಅದನ್ನು ಲೆಕ್ಕಿಸದೆ, ತನ್ನ ಮಕ್ಕಳ ಕಡು ಕಷ್ಟದ ಸಮಯದಲ್ಲಿ ಆರೈಕೆ ಮಾಡಿ ಪ್ರೀತಿಯ ಎರಡು ಮಾತುಗಳನ್ನು ತಾಯಿ ಹೇಳಬಹುದು ಹೊರತು ಬೇರೆ ಯಾರಿಂದಲೂ ಸಾಧ್ಯವಿಲ್ಲ.

ಈ ಸ್ವಾರ್ಥದಿಂದ ಕೂಡಿದ ಪ್ರಪಂಚದಲ್ಲಿ ಪರಿಶುದ್ಧ ಪ್ರೀತಿಯನ್ನು ತಾಯಿಯಿಂದ ಸಿಗಬಹುದು ಹೊರತು ಬೇರೆ ಯಾರಿಂದಲೂ ಅಲ್ಲ.

ಕೆಲವರಿಗೆ ತಾಯಿಯು ಹೊರೆಯಾದಂತೆ ಆಗುತ್ತಾದೆ . ಅದೇ ತಾಯಿಯನ್ನು  ಬಳಿ ಆ ತಾಯಿಯ ಪ್ರೀತಿಯನ್ನು ಕೇಳಿದಾಗ ಮಾತ್ರ ನಮಗೆ ತಾಯಿಯ ಪ್ರೀತಿ ಎಂತಹದ್ದು ಎಂಬುದು ತಿಳಿಯುತ್ತದೆ.

ತಾಯಿಯ ಹೃದಯ ಒಂದು ಅನಂತ ಪ್ರೀತಿಯ ಆಗರ.ಅವಳು ತನ್ನೆಲ್ಲ ಆಸೆಗಳನ್ನು ಬದಿಗೊತ್ತಿ ನಮ್ಮ ಕನಸುಗಳನ್ನು ನನಸು ಮಾಡಲು ಹಗಳಿರಳು ಶ್ರಮಿಸುತ್ತಾಳೆ. ನಮ್ಮ ಹಸಿವನ್ನು ತನ್ನ ಹಸಿವೆಂದು ಭಾವಿಸುತ್ತಾಳೆ, ನಮ್ಮ ಕಷ್ಟಗಳನ್ನು ತನ್ನ ಕಷ್ಟಗಳೆಂದು ಎದುರಿಸುತ್ತಾಳೆ. ಜಗತ್ತೇ ನನ್ನ ವಿರುದ್ಧ ತಿರುಗಿದರು ಅವಳ ಪ್ರೀತಿ ಮಾತ್ರ ಎಂದಿಗೂ ಬದಲಾಗದು ಅದು ಸದಾ ನಮ್ಮನ್ನು ಬೆಂಬಲಿಸುತ್ತದೆ.

ಅವಳ ತ್ಯಾಗಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಅವಳ ಪ್ರೀತಿಗೆ ಹೋಲಿಕೆ ಮಾಡಲು ಬೇರೆ ಯಾರು ಇಲ್ಲ .ತಾಯಿ ಕೇವಲ ಒಂದು ವ್ಯಕ್ತಿಯಲ್ಲ ,ಅವಳು ಒಂದು ಶಕ್ತಿ, ಒಂದು ಪ್ರೇರಣೆ, ಒಂದು ಮಾರ್ಗದರ್ಶನ. ಅವಳು ನಮ್ಮ ಬದುಕಿನ ಮೊದಲ ಗೆಳತಿ, ನಮ್ಮ ಕಷ್ಟದ ಸಮಯದಲ್ಲಿ ಆಪ್ತ ಸಲಹೆಗಾರ್ತಿ.  ಅವಳ ಪ್ರೀತಿಯ ಬೆಳಕು ನಮ್ಮನ್ನು ಸದಾ ಮುನ್ನಡೆಸುತ್ತದೆ, ಅವಳ ಆಶೀರ್ವಾದ ನಮ್ಮನ್ನು ಎಲ್ಲಾ ವಿಪತ್ತುಗಳಿಂದ ಕಾಪಾಡುತ್ತದೆ.  ತಾಯಿ ಇಲ್ಲದ ಬದುಕು ದಿಕ್ಕಿಲ್ಲದ ದೋಣಿಯಂತೆ, ಅವಳಿರುವಿಕೆ ಒಂದು ಭದ್ರವಾದ ನೆಲೆ.

ತಾಯಿ ಎಂದಿಗೂ  ಮರೆಯಲಾಗದ ಬಂಧ ತಾಯಿಯ ಪ್ರೀತಿಯು ಶಾಶ್ವತವಾದದ್ದು ಮತ್ತು ಬದಲಾಗದ್ದು. ಅವಳು ನಮ್ಮ ಜೀವನದಲ್ಲಿ ಎಂದಿಗೂ ತುಂಬಲಾಗದ ಸ್ಥಾನ ಹೊಂದಿದ್ದಾಳೆ. ತಾಯಿಯ ಮಗದರ್ಶನ ಪ್ರೀತಿ ಮತ್ತು ಬೆಂಬಲವಿಲ್ಲದೆ ನಮ್ಮ ಬದುಕು ಅಪೂರ್ಣ.

ಈ ತಾಯಿಯ ದಿನಾಚರಣೆಯಂದು, ನಮ್ಮೆಲ್ಲರ ತಾಯಂದಿರಿಗೆ ನಮ್ಮ ಹೃದಯಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸೋಣ .ಅವರಿಗೆ ಪ್ರೀತಿ ಉಡುಗೊರೆಗಳನ್ನು ನೀಡುವ ಮೂಲಕ, ಅವರೊಂದಿಗೆ ಸಮಯ ಕಳೆಯುವ ಮೂಲಕ, ಅವರನ್ನು ಗೌರವಿಸುವ ಮೂಲಕ ಈ ದಿನವನ್ನು ಅರ್ಥಪೂರ್ಣವಾಗಿಸೋಣ. 

ಅಮ್ಮ, ನೀನು ನಮ್ಮೆಲ್ಲರ ಬದುಕಿನ ಬೆಳಕು ನಿನ್ನ ಪ್ರೀತಿಗೆ, ನಿನ್ನ ಕಾಳಜಿಗೆ ನಾವು ಸದಾ ಚಿರಋಣಿ .ತಾಯಿ ದಿನಾಚರಣೆಯ ಶುಭಾಶಯಗಳು! ನಿನ್ನ ಪ್ರೀತಿ ಮತ್ತು ಆಶೀರ್ವಾದ ಸದಾ ನಮ್ಮೊಂದಿಗಿರಲಿ.ಜಗತ್ತಿನ ಎಲ್ಲಾ ಅಮ್ಮಂದಿರಿಗೂ ತಾಯಿಯ ದಿನದ ಶುಭಾಶಯಗಳು! ನಿಮ್ಮ ತ್ಯಾಗ ಮತ್ತು ಪ್ರೀತಿ ಅನನ್ಯವಾದದ್ದು ನಿಮ್ಮನ್ನು ಸದಾ ಪ್ರೀತಿಸುತ್ತೇವೆ ಮತ್ತು ಗೌರವಿಸುತ್ತೇವೆ.

- ಸೈಮಾ, ದ್ವಿತೀಯ ಬಿಎ, ಪತ್ರಿಕೋದ್ಯಮ ವಿಭಾಗ ವಿಶ್ವವಿದ್ಯಾಲಯ ಕಾಲೇಜು ಮಂಗಳೂರು.



Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article