
ಒಂಟಿ ಮಹಿಳೆಯ ಶವ ಪತ್ತೆ
Thursday, May 29, 2025
ಉಳ್ಳಾಲ: ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಮೊಂಟೆಪದವು ಸಮೀಪ ಮಹಿಳೆಯೊಬ್ಬರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. ಸೊಂಟಕ್ಕೆ ಕಲ್ಲು ಕಟ್ಟಿರುವ ಸ್ಥಿತಿಯಲ್ಲಿ ಶವ ಸಿಕ್ಕಿರುವುದರಿಂದ ಕೊಲೆ ಶಂಕೆ ವ್ಯಕ್ತವಾಗಿದೆ.
ಸಕಲೇಶಪುರ ಮೂಲದ ಸುಂದರಿ (35) ಎಂಬವರ ಮೃತದೇಹ ಪತ್ತೆಯಾಗಿದೆ. ಕಳೆದ ಒಂದೂವರೆ ವರ್ಷಗಳಿಂದ ಮನೆ ಮನೆ ಕೆಲಸಕ್ಕೆ ತೆರಳಿ ಜೀವನ ನಿರ್ವಹಿಸುತ್ತಿದ್ದ ಈಕೆ ಮನೆಯಲ್ಲಿ ಒಂಟಿಯಾಗಿದ್ದರು. ಇದೀಗ ಆಕೆಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ವಾರದ ಹಿಂದೆ ಕೊಲೆ ನಡೆಸಿರುವ ಸಾಧ್ಯತೆ ಇದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸೊಂಟಕ್ಕೆ ಕೆಂಪು ಕಲ್ಲನ್ನು ಕಟ್ಟಲಾಗಿದ್ದು ಕಿರುಕುಳ ನೀಡಿ ಕೊಲೆ ನಡೆಸಿರುವ ಸಾಧ್ಯತೆಗಳಿವೆ. ಕೊಣಾಜೆ ಪೋಲೀಸರು ಸ್ಥಳದಲ್ಲಿ ತನಿಖೆ ಆರಂಭಿಸಿದ್ದಾರೆ.