
ಮುಳುಗಡೆಯಾಗುವ ಆಲಡ್ಕಕ್ಕೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಭೇಟಿ
Tuesday, June 3, 2025
ಬಂಟ್ವಾಳ: ಪ್ರತಿ ಮಳೆಯ ಸಂದರ್ಭ ನೆರೆಯಿಂದಾಗಿ ತಾಲೂಕಿನಲ್ಲಿ ಮೊದಲಿಗೆ ಜಲಾವೃತಗೊಳ್ಳುವ ಪಾಣೆಮಂಗಳೂರಿನ ಆಲಡ್ಕ ಪ್ರದೇಶಕ್ಕೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಳಸಿ ಮದ್ದಿದೇನಿ ಐಎಎಸ್ ಅವರು ಮಂಗಳವಾರ ಭೇಟಿ ನೀಡಿದರು.
ಈ ಸಂಬಂಧವಾಗಿ ಬಂಟ್ವಾಳ ತಹಶೀಲ್ದಾರ್ ಡಿ. ಅರ್ಚನಾ ಭಟ್ ಅವರಿಂದ ಪೂರಕ ಮಾಹಿತಿಯನ್ನು ಪಡೆದುಕೊಂಡರು. ಸ್ಥಳೀಯರಿಂದಲು ಮಾಹಿತಿ ಸಂಗ್ರಹಿಸಿದರು. ಅಲಡ್ಕದಲ್ಲಿ ಸುಮಾರು 17 ಮನೆಗಳು ನೆರೆಯಿಂದಾಗಿ ಜಲಾವೃತಗೊಳ್ಳುತ್ತದೆ.
ಕಳೆದ ವಾರ ಸುರಿದ ಜಡಿಮಳೆಗೂ ಆಲಡ್ಕದಲ್ಲಿ ಹಲವು ಮನೆಗಳು ಜಲಾವೃತಗೊಂಡಿತ್ತು. ಇಲ್ಲಿಯ ನಿವಾಸಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಪ್ರಯತ್ನಗಳ ಸಾಗುತ್ತಿವೆ ಎಂದು ಹೇಳಲಾಗಿದೆ.
ಉಪ್ಪಿನಂಗಡಿಗೆ ಬಂದಿದ್ದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಳಸಿ ಮದ್ದಿದೇನಿ ಅವರು ನೆರೆಯಿಂದ ಜಲಾವೃತಗೊಳ್ಳುವ ಬಂಟ್ವಾಳ ಪುರಸಭಾ ವ್ಯಾಪ್ತಿಯ ಆಲಡ್ಕ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ.
ಬಂಟ್ವಾಳ ಕಂದಾಯಾಧಿಕಾರಿ ಜನಾರ್ದನ್ ಉಪಸ್ಥಿತರಿದ್ದರು.