ಹಿಂದೂ ನಾಯಕರ, ಕಾರ್ಯಕರ್ತರರೊಂದಿಗೆ ನೆರಳಿನಂತೆ ಜತೆಗಿರುತ್ತೇವೆ: ರಾಜೇಶ್ ಕೊಟ್ಟಾರಿ

ಹಿಂದೂ ನಾಯಕರ, ಕಾರ್ಯಕರ್ತರರೊಂದಿಗೆ ನೆರಳಿನಂತೆ ಜತೆಗಿರುತ್ತೇವೆ: ರಾಜೇಶ್ ಕೊಟ್ಟಾರಿ

ಮಂಗಳೂರು: ಕಾಂಗ್ರೆಸ್ ಸರಕಾರ ಇಡೀ ರಾಜ್ಯದಲ್ಲಿ ಹಿಂದೂಪರ ನಾಯಕರನ್ನು ಟಾರ್ಗೆಟ್ ಮಾಡಿ ತೊಂದರೆ ಕೊಡುವ ಕೆಲಸಕ್ಕೆ ಕೈ ಹಾಕಿದೆ. ಹಿಂದೂ ಕಾರ್ಯಕರ್ತರನ್ನು ಪೊಲೀಸ್ ಬಲ ಪ್ರಯೋಗಿಸಿ ಕಾಂಗ್ರೆಸ್ ಸರಕಾರ ತುಳಿಯಲು ಯತ್ನಸುತ್ತಿದ್ದು, ಬಿಜೆಪಿ ಪಕ್ಷ ಇದನ್ನು ತೀವ್ರವಾಗಿ ವಿರೋಧಿಸುತ್ತದೆ ಮಾತ್ರವಲ್ಲ ಹಿಂದೂ ಸಂಘಟನೆ ನಾಯಕರು, ಕಾರ್ಯಕರ್ತರೊಂದಿಗೆ ಪ್ರತೀ ಹೆಜ್ಜೆಗೂ ನೆರಳಿನಂತೆ ಪಕ್ಷ ಜತೆಗಿದ್ದು ಹೋರಾಟದಲ್ಲಿ ಭಾಗಿಯಾಗಲಿದೆ ಎಂದು ಉತ್ತರ ಮಂಡಲ ಬಿಜೆಪಿ ಅಧ್ಯಕ್ಷ ರಾಜೇಶ್ ಕೊಟ್ಟಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪೊಲೀಸ್ ಇಲಾಖೆ ಕಾಂಗ್ರೆಸ್ ಸರಕಾರದ ಅದೇಶ ಪರಿಪಾಲನೆ ಮಾಡಿ ಏಕಮುಖವಾಗಿ ವರ್ತಿಸದೆ, ನ್ಯಾಯ ಸಮ್ಮತವಾಗಿ ತನಿಖೆ ಮಾಡಿದರೆ ನಮ್ಮದೂ ಸಹಕಾರವಿದೆ.

ಅದರೆ ಇದೀಗ ಮಂಗಳೂರಿನಲ್ಲಿ ಕೆಲವು ಮುಸ್ಲಿಂ ಸಂಘಟನೆಗಳು, ಕಾಂಗ್ರೆಸ್ ಪಕ್ಷದಲ್ಲಿರುವ ಕೆಲವು ಮುಸಲ್ಮಾನ ನಾಯಕರು ರಾಜೀನಾಮೆಯ ಬ್ಲಾಕ್‌ಮೇಲ್ ನಾಟಕಕ್ಕೆ ಕಾಂಗ್ರೆಸ್ ಸರಕಾರವು ಹಿಂದೂ ನಾಯಕರ ಮೇಲೆ ಕೇಸು ದಾಖಲಿಸಲು ಪೊಲೀಸ್ ಇಲಾಖೆಯನ್ನು ಬಳಸಿಕೊಂಡು ಸಮಾಧಾನ ಮಾಡಲು ಮುಂದಾಗಿರುವಂತೆ ಕಾಣುತ್ತಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ನಿಮ್ಮ ಸರಕಾರದ ಆಡಳಿತ ವೈಫಲ್ಯದಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಸರಕಾರವು ಮೊದಲೇ ಸುಹಾಸ್ ಶೆಟ್ಟಿ ಕೊಲೆಗಡುಕರ ವಿರುದ್ಧ  ಬಿಗಿಯಾದ ಕ್ರಮ ಕೈಗೊಳ್ಳದ ಪರಿಣಾಮ ಅಶಾಂತಿ ಘಟನೆಗಳು ಹೆಚ್ಚಲು ಕಾರಣ. ಇದೀಗ ವೈಫಲ್ಯ ಮರೆ ಮಾಚಲು ಹಿಂದೂ ಸಂಘಟನೆ, ನಾಯಕರನ್ನು ಗುರಿಯಾಗಿಸಿ ಕ್ರಮ ಕೈಗೊಂಡರೆ ಬಿಜೆಪಿ ಯಾವುದೇ ಹೋರಾಟಕ್ಕೂ ಸಿದ್ದರಿದ್ದೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article