
ಟಿಂಟ್ ಗ್ಲಾಸ್ ಅಳವಡಿಕೆ: ದಂಡ ವಸೂಲಿ
Tuesday, June 3, 2025
ಮಂಗಳೂರು: ಮಂಗಳೂರಲ್ಲಿ ಟಿಂಟ್ ಗ್ಲಾಸ್ ಅಳವಡಿಸಿದ ಕಾರುಗಳ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರು ಎರಡು ದಿನಗಳ ಅವಧಿಯಲ್ಲಿ 223 ಪ್ರಕರಣ ದಾಖಲಿಸಿ 1,11,500 ರೂ. ದಂಡ ವಸೂಲಿ ಮಾಡಿದ್ದಾರೆ.
ಅಪರಾಧಗಳನ್ನು ತಡೆಗಟ್ಟಲು ಹಾಗೂ ಮೋಟಾರು ವಾಹನ ಕಾಯ್ದೆಯಡಿ ನಿಯಮ ಉಲ್ಲಂಘನೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಟಿಂಟ್ ಗ್ಲಾಸ್ ಮತ್ತು ಬ್ಲಾಕ್ ಫಿಲ್ಮಂ ಸ್ಟಿಕ್ಕರ್ ಅಳವಡಿಸಿರುವುದನ್ನು ಚಾಲಕರಿಂದ ತೆಗೆಸಿ ದಂಡ ವಿಧಿಸಿ ತಿಳಿವಳಿಕೆ ನೀಡಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.