
ಬಸ್ ರಿಕ್ಷಾಕ್ಕೆ ಢಿಕ್ಕಿ: ಚಾಲಕ ಸಾವು
Saturday, June 7, 2025
ಬಂಟ್ವಾಳ: ರಾ.ಹೆ.ಯ ಮಾರಿಪಳ್ಳ ಸಮೀಪದ 10ನೇ ಮೈಲುಗಲ್ಲು ಬಳಿ ಕೆಎಸ್‌ಆರ್‌ಟಿಸಿ ಬಸ್ ಆಟೋರಿಕ್ಷಾಕ್ಕೆ ಢಿಕ್ಕಿಯಾಗಿ ಆಟೋ ಚಾಲಕ ಮೃತಪಟ್ಟ ಘಟನೆ ಇಂದು ನಡೆದಿದೆ.
ಮೂಲತಃ ಅಮೆಮ್ಮಾರ್ ನಿವಾಸಿಯಾಗಿದ್ದು, ಪ್ರಸ್ತುತ ಹತ್ತನೇ ಮೈಲ್ ಕಲ್ಲುನಲ್ಲಿರುವ ಫ್ಲಾಟ್‌ವೊಂದರಲ್ಲಿ ವಾಸ್ತವ್ಯವಿರುವ ಆಟೋಚಾಲಕ ಝಾಹಿದ್ (28) ಮೃತಪಟ್ಟವರೆಂದು ಗುರುತಿಸಲಾಗಿದೆ.
ರಸ್ತೆ ದಾಟಲು ನಿಂತ್ತಿದ್ದ ಮಕ್ಕಳನ್ನು ರಸ್ತೆ ದಾಟಿಸಿ ಹಿಂದಿರುಗುವಷ್ಟರಲ್ಲಿ ಮಂಗಳೂರು ಕಡೆಯಿಂದ ಬರುತ್ತಿದ್ದ, ಕೆಎಸ್‌ಆರ್‌ಟಿಸಿ ಬಸ್ ಢಿಕ್ಕಿಯಾಗಿ ಝಾಹಿದ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.
ಮೃತರು ತಾಯಿ, ಮೂವರು ಸಹೋದರರು, ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ. ಈ ಬಗ್ಗೆ ಬಂಟ್ವಾಳ ಟ್ರಾಫಿಕ್ ಠಾಣೆಯಲ್ಲಿ ಕೇಸುದಾಖಲಾಗಿದೆ.