ರಿಕ್ಷಾ ಚಲಾಯಿಸುತ್ತಿದ್ದಾಗಲೇ ಹೃದಯಾಘಾತ: ಕೊಕ್ಕಡದ ರಿಕ್ಷಾ ಚಾಲಕ ದಾರುಣ ಸಾವು

ರಿಕ್ಷಾ ಚಲಾಯಿಸುತ್ತಿದ್ದಾಗಲೇ ಹೃದಯಾಘಾತ: ಕೊಕ್ಕಡದ ರಿಕ್ಷಾ ಚಾಲಕ ದಾರುಣ ಸಾವು


ಬೆಳ್ತಂಗಡಿ: ಕೊಕ್ಕಡ ಸಮೀಪದ ಕೆಂಪಕೋಡಿನ ನಿವಾಸಿ ಶರತ್ ಕುಮಾರ್ ಕೆ. (36) ಅವರು ತಮ್ಮ ಆಟೋ ರಿಕ್ಷಾ ಚಾಲನೆಯಲ್ಲೇ ಇದ್ದ ವೇಳೆ ಹೃದಯಾಘಾತದಿಂದ ಅಕಾಲಿಕವಾಗಿ ಮೃತಪಟ್ಟಿರುವ ದುರ್ಘಟನೆ ಇಂದು ಬೆಳಗ್ಗೆ ಸಂಭವಿಸಿದೆ.

ಶರತ್ ಕುಮಾರ್ ಅವರು ಪ್ರತಿದಿನದಂತೆ ಇಂದು ಬೆಳಗ್ಗೆ ವಿದ್ಯಾರ್ಥಿಗಳನ್ನು ಶಾಲೆಗೆ ಬಿಟ್ಟು ಮರುಪಯಣದಲ್ಲಿ ತಮ್ಮ ಸ್ವಂತ ಆಟೋ ರಿಕ್ಷಾ ಚಲಾಯಿಸಿಕೊಂಡು ಮನೆಗೆ ಮರಳುತ್ತಿದ್ದರು. ಈ ವೇಳೆ ಅವರಿಗೆ ತೀವ್ರ ಹೃದಯಾಘಾತ ಸಂಭವಿಸಿದ್ದು, ರಿಕ್ಷಾ ಚಲಾಯಿಸುವ ನಡುವೆಯೇ ನಿಧನರಾದರು.

ಸ್ಥಳೀಯರು ಕೂಡಲೇ ವಿಷಯವನ್ನು ಗಮನಿಸಿ ಶರತ್‌ರನ್ನು ಕೊಕ್ಕಡ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಲುಪಿಸಿದರು. ಆದರೆ, ಅದಾಗಲೇ ಅವರು ನಿಧನ ಹೊಂದಿದ್ದರು.

ಮೃತ ಶರತ್ ಕುಮಾರ್ ಅವರು ಕುಟುಂಬದ ಏಕೈಕ ಆಧಾರಸ್ತಂಭರಾಗಿದ್ದರು. ಅವರು ತಂದೆ ರಘುರಾಮ ಮಡಿವಾಳ, ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article