ಕಾರ್ಕಳ ಪುರಸಭೆ ಮಾಸಿಕ ಸಭೆ: ರಸ್ತೆ ಅವ್ಯವಸ್ಥೆ ಬಗ್ಗೆ ಪುರಸಭೆ ನಿರ್ಲಕ್ಷ ವಿಪಕ್ಷ ಸದಸ್ಯರ ಸಭಾತ್ಯಾಗ

ಕಾರ್ಕಳ ಪುರಸಭೆ ಮಾಸಿಕ ಸಭೆ: ರಸ್ತೆ ಅವ್ಯವಸ್ಥೆ ಬಗ್ಗೆ ಪುರಸಭೆ ನಿರ್ಲಕ್ಷ ವಿಪಕ್ಷ ಸದಸ್ಯರ ಸಭಾತ್ಯಾಗ


ಕಾರ್ಕಳ: ಕಾರ್ಕಳ ಪುರಸಭೆ ಅಧ್ಯಕ್ಷ ಯೋಗೀಶ್ ದೇವಾಡಿಗ ಅಧ್ಯಕ್ಷತೆಯಲ್ಲಿ ಬುಧವಾರ ಸಾಮಾನ್ಯ ಸಭೆ ನಡೆಯಿತು.

ರಸ್ತೆಯ ದುರಸ್ತಿಗಾಗಿ ವಿಪಕ್ಷ ಸದಸ್ಯರು ಪ್ರತಿಭಟನೆಗೆ ಇಳಿದಿದ್ದು, ಆಡಳಿತ ಪಕ್ಷ, ವಿಪಕ್ಷ ಪರಸ್ಪರ ವಾಗ್ವಾದ ನಡೆದು ವಿಪಕ್ಷ ಸಭಾ ತ್ಯಾಗ ನಡೆಸಿದರು.

ವಿಪಕ್ಷ ನಾಯಕ ಶುಭದರಾವ್ ಅವರ ನೇತೃತ್ವದಲ್ಲಿ ಎಲ್ಲಾ ಸದಸ್ಯರು ರಸ್ತೆ ಅವ್ಯವಸ್ಥೆ ಸರಿಪಡಿಸಲು ಒತ್ತಾಯಿಸಿ ಪುರಸಭೆ ಸದನ ಬಾವಿಯೊಳಗಿಳಿದು ಪ್ರತಿಭಟನೆ ನಡೆಸಿದರು. ಈ ನಡುವೆ ಆಡಳಿತ ಪಕ್ಷದ ಸದಸ್ಯರು ಪೂರಕ ವಿಷಯದಲ್ಲಿ ಪ್ರಶ್ನೆ ಕೇಳಿದ್ದು, ಚರ್ಚೆಗೆ ಮುಂದಾದರು. ಇದರಿಂದ ಆಕ್ರೋಶಗೊಂಡ ವಿಪಕ್ಷ ಸದಸ್ಯರು ಪುರಸಭೆ ಅಧ್ಯಕ್ಷ ಯೊಗೀಶ್ ದೇವಾಡಿಗ ಅವರಲ್ಲಿ ಅಸಮಾಧಾನ ವ್ಯಕ್ತಪಡಿಸಿ ಸಭಾತ್ಯಾಗ ಮಾಡಿದರು.

ಪ್ರತಿಭಟನೆ ನಡೆಸುವ ಸಂದರ್ಭ ಅಧ್ಯಕ್ಷರಿಂದ ಸಂಬಂಧಪಟ್ಟ ಅಧಿಕಾರಿಗಳಿಂದ ಸೂಕ್ತ ಕಾರಣ ಮತ್ತು ಪರಿಹಾರ ಬಯಸುತ್ತೇವೆ ಆದರೆ ಆಡಳಿತ ಪಕ್ಷದ ಸದಸ್ಯರು ಉದ್ದೇಶಪೂರ್ವಕವಾಗಿ ಪ್ರತಿಭಟನೆ ನಡುವೆ ಚರ್ಚೆಗಿಳಿದಿರುವುದಕ್ಕೆ? ನಮ್ಮ ಆಕ್ಷೇಪವಿದ್ದು, ಅಧ್ಯಕ್ಷರು ಮಾತ್ರ ನಮ್ಮ ಪ್ರಶ್ನೆಗೆ ಉತ್ತರಿಸಬೇಕು. ಅನಂತರ ಉಳಿದ ಸದಸ್ಯರು ವಿಷಯ ಪ್ರಸ್ತಾಪಿಸಿ ಚರ್ಚೆ ನಡೆಸಬಹುದು ಎಂದು ಶುಭದರಾವ್ ಹೇಳಿದರು.

ರಸ್ತೆ ಅವ್ಯವಸ್ಥೆಗೆ ನಿರ್ದಿಷ್ಟ ಕಾರಣ ತಿಳಿಯುವ ಸಲುವಾಗಿ ಪೂರಕವಾಗಿ ಪ್ರಶ್ನೆಗಳನ್ನು ಕೇಳಿದರೆ ಯಾವ ರೀತಿಯ ಸಮಸ್ಯೆಯಾಗುತ್ತದೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಪ್ರದೀಪ್ ರಾಣೆ ಹೇಳಿದರು. ಎಲ್ಲಾ ವಾರ್ಡ್‌ಗಳಲ್ಲಿಯೂ ರಸ್ತೆ ಅವ್ಯವಸ್ಥೆಯಿಂದ ಸಮಸ್ಯೆಗಳಾಗಿವೆ. ಮಳೆಗಾಲ ಸಮಯ ಕಾಮಗಾರಿ ಮಾಡಿರುವ ಕಾರಣ ಇಷ್ಟೆಲ್ಲ ಸಮಸ್ಯೆಗೆ ಕಾರಣವಾಗಿದೆ. ನಿರ್ದಿಷ್ಟವಾಗಿ ಒತ್ತಡ ಹೇರಿದ ಮೇಲಿನ ಅಧಿಕಾರಿಗಳು, ಸಂಬಂಧಪಟ್ಟ ಸಚಿವರು ಈ ಅವ್ಯವಸ್ಥೆಗೆ ಕಾರಣವಾಗಿದ್ದಾರೆ ಎಂದು ಆಡಳಿತ ಪಕ್ಷದ ಸದಸ್ಯರು ಆರೋಪಿಸಿದರು. ಕೆಲ ಹೊತ್ತಿನ ಬಳಿಕ ವಿಪಕ್ಷ ಸದಸ್ಯರು ಸಭೆಗೆ ಆಗಮಿಸಿ ಪ್ರತಿಭಟನೆಯಲ್ಲಿ ನಿರತರಾದರು. ಈ ನಡುವೆ ವಿಪಕ್ಷ ಸದಸ್ಯರು ಸಭಾ ತ್ಯಾಗ ಮಾಡಿದರು.

ಸದ್ಯಕ್ಕೆ ಎಲ್ಲಾ ಕಡೆಗಳಿಗೆ ವೆಟ್‌ಮಿಕ್‌ಸ್ ಹಾಕಿ ತಾತ್ಕಾಲಿಕ ದುರಸ್ತಿ ಮಾಡಿಕೊಡಲಾಗುವುದು. ಆಗಸ್‌ಟ್-ಸೆಪ್ಟೆಂಬರ್ ತಿಂಗಳಲ್ಲಿ ಡಾಮರು, ಕಾಂಕ್ರಿಟ್, ಇಂಟರ್‌ಲಾಕ್ ಇದ್ದಲ್ಲಿ ಆಯಾ ರಸ್ತೆಗಳನ್ನು ಸಮರ್ಪಕವಾಗಿ ಶಾಶ್ವರ ರೀತಿಯಲ್ಲಿ ಕಾಮಗಾರಿ ನಡೆಸಿಕೊಡಲಾಗುವುದು ಎಂದು ಕೆಯುಐಡಿಎಫ್‌ಸಿ ಅಧಿಕಾರಿ ಸ್ಪಷ್ಟನೆ ನೀಡಿದರು.

ಸದಸ್ಯರಾದ ನಳಿನಿ ಆಚಾರ್ಯ ಕಾಬೆಟ್ಟು ಪಾರ್ಕ್‌ನಲ್ಲಿ ವ್ಯಾಯಾಮ ಪರಿಕರಗಳನ್ನು ಅಳವಡಿಸುವಂತೆ, ಪ್ರಭಾ ಅವರು ಮಸೀದಿ ಬಳಿ ಅಪಘಾತ ಪ್ರಕರಣ ಹೆಚ್ಚುತ್ತಿದ್ದು, ಸಿಸಿಟಿವಿ ಅಳವಡಿಸುವಂತೆ ಚರ್ಚಿಸಿದರು. ವಿವೇಕಾನಂದ ಶೆಣೈ ಶೌಚಾಲಯ ದುರಸ್ತಿ, ನಿರ್ವಹಣೆಗೆ ಪ್ರತೀ ಶೌಚಾಲಯಕ್ಕೆ 60 ಸಾವಿರ ರೂ. ಖರ್ಚಾಗುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಬಸ್ ನಿಲ್ದಾಣದಲ್ಲಿ ಹಾನಿಗೊಳಗಾದ ಹೈಮಾಸ್‌ಟ್ ದೀಪ ದುರಸ್ತಿ ಪಡಿಸುವ ಬಗ್ಗೆ ಇದಕ್ಕೆ ಕಾರಣವಾದ ಬಸ್‌ನಿಂದ ನಷ್ಟವನ್ನು ವಸೂಲಿ ಮಾಡುವಂತೆ ಸುಮಾ ಕೇಶವ್ ಅವರು ಆಗ್ರಹಿಸಿದರು.

ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ, ಉಪಾಧ್ಯಕ್ಷ ಪ್ರಶಾಂತ್ ಕೋಟ್ಯಾನ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article