
ಬೆಂಕಿಗಾಹುತಿಯಾದ ಮನೆ
Sunday, June 8, 2025
ಕಾಸರಗೋಡು: ನಗರದ ತಳಂಗರೆಯಲ್ಲಿ ಹಂಚು ಹಾಸಿದ ಮನೆಯೊಂದು ಶನಿವಾರ ರಾತ್ರಿ ಬೆಂಕಿಗಾಹುತಿಯಾಗಿದೆ.
ಸಾರಾ ಎಂಬವರ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮನೆಯಲ್ಲಿದ್ದ ಎಲ್ಲಾ ಸಾಮಗ್ರಿಗಳು ಹೊತ್ತಿ ಉರಿದಿವೆ. ಮನೆಗೆ ರಸ್ತೆ ಸೌಕರ್ಯ ಇಲ್ಲದ ಕಾರಣ ಅಗ್ನಿಶಾಮಕ ದಳದ ವಾಹನ ತಲಪಲು ವಿಳಂಬವಾಯಿತು. ಶಾರ್ಟ್ ಸರ್ಕ್ಯೂಟ್ ಘಟನೆಗೆ ಕಾರಣ ಎನ್ನಲಾಗಿದೆ. ಸುಮಾರು 50 ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ.