
ಆರಂಭದಿಂದಲೂ ಆರೋಪ ಎದುರಿಸುತ್ತಿರುವ ಬ್ರಹ್ಮರಕೊಟ್ಲು ಟೋಲ್ ಗೇಟ್
ಮಂಗಳೂರು: ಬ್ರಹ್ಮರಕೊಟ್ಲುವಿಲ್ಲಿರುವಂತ ಅವೈಜ್ಞಾನಿಕವಾದ ಟೋಲ್ ಗೇಟ್ ದೇಶದ ಯಾವುದೇ ಭಾಗದಲ್ಲಿ ಇಲ್ಲ ಎಂಬ ಮಾತಿದೆ. ಈ ಟೋಲ್ ಗೇಟ್ ಹೊಂದಿರಬೇಕಾದ ಮೂಲಭೂತ ಸೌಲಭ್ಯವನ್ನು ಹೊಂದಿಲ್ಲ ಎಂಬ ಗಂಭೀರ ಆರೋಪ ಆರಂಭದಿಂದಲೂ ಕೇಳಿಬರುತ್ತಿದೆ.
ಕೋಳಿಗೂಡಿನಂತ ಕಬ್ಬಿಣದ ಗೂಡು, ಮೇಲ್ಬಾಗದಲ್ಲಿ ತಗಡುಶೀಟು, ಕೇಂದ್ರದ ನಡುವಲ್ಲೇ ಹೊಂಡಬಿದ್ದರೂ ಅದನ್ನು ಸುಸ್ಥಿತಿಗೆ ತಾರದ ರಸ್ತೆ, ಟೋಲ್ ಪಕ್ಕ ಸರ್ವಿಸ್ ರಸ್ತೆ, ಅಂಬ್ಯುಲೆಸ್ ಸಹಿತ ನ್ಯಾಯಾಧೀಶರು ಸಹಿತ ಗಣ್ಯಾಗಣ್ಯರು ಸಂಚರಿಸಲು ಪ್ರೀ ಲೇನ್ ರಸ್ತೆ ಬೇಕು ಇಲ್ಲಿ ಅದ್ಯಾವುದು ಇಲ್ಲ, ವಾಹನ ಸಂಚಾರಕ್ಕೆ ಎರಡು ಲೇನ್ ರಸ್ತೆಇದೆ, ಮೂರನೇ ಲೇನ್ ಬ್ಯಾರಿಕೇಡ್ ಹಾಕಲಾಗುತ್ತಿದ್ದು, ಅನೀವಾರ್ಯವಿದ್ದಾಗ ಮಾತ್ರ ತೆರವುಗೊಳಿಸಲಾಗುತ್ತಿದೆ.
ಬೆಳಗ್ಗೆ ಮತ್ತು ಸಂಜೆಯ ಪೀಕ್ ವೇಳೆಯಲ್ಲಿ ಬ್ರಹ್ಮರಕೊಟ್ಲು ಟೋಲ್‌ನಲ್ಲಿ ವಾಹನಗಳು ಸರತಿಯಲ್ಲಿ ನಿಂತೇ ಸಂಚಾರಿಸಬೇಕಾಗಿದೆ ಎಂಬುದು ಇಲ್ಲಿ ಗಮನಾರ್ಹ ಅಂಶವಾಗಿದೆ.
ಟೋಲ್ ಸಂಗ್ರಹದ ವಿಚಾರದಲ್ಲಿ ವಸೂಲಿಗಾರರು ವಾಹನ ಚಾಲಕರೊಂದಿಗೆ ಗೂಂಡಾಪ್ರವೃರ್ತನೆ ತೋರುತ್ತಿದ್ದಾರೆ ಎಂಬ ಆರೋಪವು ಇದೆ. ಬ್ರಹ್ಮರಕೊಟ್ಲು ಟೋಲ್‌ನಲ್ಲಿ ಸಾಕಷ್ಟು ಬಾರಿ ವಾಹನ ಚಾಲಕರ, ಪ್ರಯಾಣಿಕರು, ಟೋಲ್ ವಸೂಲಿಗಾರರ ಮಧ್ಯೆ ಸಾಕಷ್ಟು ಬಾರಿ ಜಗಳ ನಡೆದಿದೆ.
ಈ ಅವೈಜ್ಞಾನಿಕ ಟೋಲ್ ತೆರವುಗೊಳಿಸಬೇಕೆಂಬ ಕೂಗು ಇಂದು ನಿನ್ನೆಯದಲ್ಲ ಹಲವು ವರ್ಷದಿಂದ ಕೇಳಿಬರುತ್ತಲೆ ಇದೆ. ಆಗೊಮ್ಮ, ಈಗೊಮ್ಮೆ ಒಂದು ದಿನದ ಪ್ರತಿಭಟನೆಗಳು ನಡೆಯುತ್ತವೆ. ಬಳಿಕ ವಾಹನಗಳಿಗೆ ಉಚಿತ ಸಂಚಾರದ ಅವಕಾಶ ಸಿಕ್ಕುತ್ತಿದ್ದಂತೆ ಪ್ರತಿಭಟನೆಗೆ ಕರೆಕೊಡುವವರು ಸಮ್ಮನಾಗುತ್ತಿದ್ದಾರೆ.