
ಜೂ.13 ರಿಂದ ಫೋರಂನಲ್ಲಿ ಹಲಸಿನ ಹಬ್ಬ
Tuesday, June 10, 2025
ಮಂಗಳೂರು: ಪಾಂಡೇಶ್ವರದಲ್ಲಿ ಫಿಜಾ ಬೈ ನೆಕ್ಸಸ್ ಮಾಲ್‌ನಲ್ಲಿ ಬಹು ನಿರೀಕ್ಷಿತ ಹಲಸಿನ ಹಬ್ಬದ ಮೂರನೇ ಆವೃತ್ತಿ ಜೂ.13ರಿಂದ 15ರ ತನಕ ನಡೆತಲಿದೆ.
ಪ್ರಾದೇಶಿಕವಾಗಿ ಅತ್ಯಂತ ಪ್ರಿಯವಾದ ಹಣ್ಣುಗಳಲ್ಲಿ ಒಂದಾದ ಬಹುಪಯೋಗಿ ಹಲಸಿನ ಹಣ್ಣಿನ ಆರೋಗ್ಯ ಲಾಭಗಳು ಮತ್ತು ಆರ್ಥಿಕ ಅವಕಾಶಗಳ ಬಗ್ಗೆ ಅರಿವು ಮೂಡಿಸಲು ಕಾರ್ಯಕ್ರಮ ಈ ಸಂದರ್ಭದಲ್ಲಿ ನಡೆಯಲಿದೆ. ಸ್ಥಳೀಯ ವ್ಯಾಪಾರಿಗಳಿಗೆ ತಮ್ಮ ವೈಶಿಷ್ಟ್ಯತೆಯುಳ್ಳ ಹಲಸು ಆಧರಿತ ಉತ್ಪನ್ನಗಳನ್ನು ಮಾರಾಟ ಮಾಡುವ ವೇದಿಕೆಯನ್ನು ಇದು ನೀಡಲಿದೆ. ಚಿಪ್ಸ್, ಪಾಪಡ್, ಹೋಳಿಗೆ, ಐಸ್ಕ್ರಿಮ್, ಕರಿ, ಉಪ್ಪಿನಕಾಯಿ, ಮತ್ತು ಮಜ್ಜಿಗೆಗಳನ್ನು ಒಳಗೊಂಡ ಇತರೆ ಹಲಸಿನ ಹಣ್ಣಿನ ಖಾದ್ಯಗಳು ದೊರೆಯಲಿದೆ. ಸ್ಥಳೀಯ ಅಡುಗೆ ಪರಿಣಿತರಿಂದ ಲೈವ್ ಅಡುಗೆ ಪ್ರದರ್ಶನಗಳು ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.