ಜೂ.21ರಿಂದ ಮಾವು -ಹಲಸು ಮೇಳ

ಜೂ.21ರಿಂದ ಮಾವು -ಹಲಸು ಮೇಳ

ಮಂಗಳೂರು: ಕಲ್ಕೂರ ಪ್ರತಿಷ್ಠಾನ ಮಂಗಳೂರು ವತಿಯಿಂದ ಸಾವಯವ ಕೃಷಿಕ ಗ್ರಾಹಕ ಬಳಗದ ಸಹಕಾರದೊಂದಿಗೆ ಸಾವಯವ ಕೃಷಿಕರೇ ಬೆಳೆಸಿರುವ ವಿಶಿಷ್ಟ ತಳಿಗಳ ಸಮೃದ್ಧ ಫಲಗಳಾದ ಮಾವು-ಹಲಸು ಮೇಳ ಜೂ.21 ಹಾಗೂ 22ರಂದು ಬೆಳಗ್ಗೆ 7ರಿಂದ ಸಂಜೆ 7ರವರೆಗೆ ನಗರದ ಕದ್ರಿ ಕಂಬಳ ಮಲ್ಲಿಕಾ ಬಡಾವಣೆಯಲ್ಲಿರುವ ‘ಮಂಜು ಪ್ರಾಸಾದ’ದ ಆವರಣದಲ್ಲಿ ಆಯೋಜಿಸಲಾಗಿದೆ.

ನಾಡು ನುಡಿ ಜಾಗೃತಿ ಸಮ್ಮೇಳನ ಸರಣಿ ಕಾರ್ಯಕ್ರಮದ ಅಂಗವಾಗಿ ಸಾವಯವ ಬಳಗದ ರತ್ನಾಕರ್ ಕುಳಾಯಿ ಮಾರ್ಗದರ್ಶನದಲ್ಲಿ ನಡೆಯುವ ಈ ಮೇಳದಲ್ಲಿ ಬೆಳೆಗಾರರಿಗೆ ಮತ್ತು ಗ್ರಾಹಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಜೂ.21ರಂದು ಬೆಳಗ್ಗೆ 10ಕ್ಕೆ ಉದ್ಘಾಟನಾ ಸಮಾರಂಭದಲ್ಲಿ ಸ್ವದೇಶಿ ಗೋವುಗಳ ಹಾಗೂ ಪ್ರಾದೇಶಿಕ ಸಸ್ಯಗಳ ತಳಿ ಸಂರಕ್ಷಕ ಡಾ. ಮನೋಹರ ಉಪಾಧ್ಯಾಯ ಅತಿಥಿಯಾಗಿ ಭಾಗವಹಿಸುವರು. ಹೃದ್ರೋಗ ತಜ್ಞ ಡಾ. ಪದ್ಮನಾಭ ಕಾಮತ್ ಅವರು ಆರೋಗ್ಯ ಮತ್ತು ಆಹಾರ ಪದ್ದತಿ ಬಗ್ಗೆ ಉಪನ್ಯಾಸ ನೀಡುವರು. ಕದ್ರಿ ಫಲಪುಷ್ಪ ಪ್ರದರ್ಶನದ ಗೌರವಾಧ್ಯಕ್ಷೆ ಆರೂರು ಲಕ್ಷ್ಮಿ ರಾವ್ ಉದ್ಘಾಟಿಸುವರು. ಪ್ರಮುಖರಾದ ಕಟೀಲು ಲಕ್ಷ್ಮೀನಾರಾಯಣ ಆಸ್ರಣ್ಣ, ಶರವು ರಾಘವೇಂದ್ರ ಶಾಸ್ತ್ರಿ, ಎ.ಜೆ. ಶೆಟ್ಟಿ, ಹರಿಕೃಷ್ಣ ಪುನರೂರು, ಡಾ. ಎಂ.ಬಿ. ಪುರಾಣಿಕ್ ಸಹಿತ ಸಂಸದರು, ಶಾಸಕರು, ಗಣ್ಯರು ಭಾಗವಹಿಸುವರು ಎಂದು ಕಲ್ಕೂರ ಪ್ರತಿಷ್ಠಾನ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಮನಗರ, ಮಂಡ್ಯ, ಮೈಸೂರು, ಬೆಳಗಾವಿ ಹಾಗೂ ಸ್ಥಳೀಯ ಕೃಷಿಕರು ಭಾಗವಹಿಸುತ್ತಿದ್ದು, ವಿವಿಧ ತಳಿಯ ರುದ್ರಾಕ್ಷ, ಚಂದ್ರಬರ್ಕೆ ಹಲಸು, ಮಾವಿನ ಹಣ್ಣುಗಳಾದ ಮಲ್ಲಿಕಾ, ಮಲ್ಗೊವ, ನೀಲಂ, ಕಾಳಪಾಡಿ, ಬಾದಾಮಿ, ತೋತಾಪುರಿ ಲಭ್ಯವಿರುತ್ತದೆ. ಮಾವು ಹಲಸಿನಿಂದ ತಯಾರಿಸಿದ ಮೌಲ್ಯವಽತ ಸ್ವಾವಲಂಬಿ ಖಾದ್ಯಗಳಾದ ಹಲಸಿನ ಕಬಾಬ್, ಹಲಸಿನ ಗಾರಿಗೆ, ಚಿಪ್ಸ್, ಉಂಡ್ಳಕ, ಹಲಸಿನ ಪಾವುಬಾಜಿ, ಕಡುಬು, ಹಲಸಿನ ಕೇಕ್, ಹೋಳಿಗೆ, ಹಪ್ಪಳ, ಉಪ್ಪಿನಕಾಯಿ, ಐಸ್ ಕ್ರೀಂ, ವಿವಿಧ ಮಾವು ಹಲಸಿನ ಗಿಡಗಳು, ದೇಸಿ ತರಕಾರಿ ಬೀಜಗಳು, ಸಸಿಗಳು, ಕೃಷಿಗೆ ಸಂಬಂಽಸಿದ ಉಪಕರಣಗಳು ಹಾಗೂ ಕೃಷಿ ಸಾಹಿತ್ಯ ಕೃತಿಗಳು ಲಭ್ಯವಿರಲಿವೆ ಎಂದರು.

ಜೂ.22ರಂದು ರಾಧಾಕೃಷ್ಣ ಪುತ್ತೂರು (ಹಲಸಿನ ಉತ್ಪನ್ನಗಳ ಸಾಧಕ), ಮಹೇಶ್ ರಾಮನಗರ (ಸಾವಯವ ಮಾವು ಕೃಷಿಕ), ಸ್ನೇಹಾ ಭಟ್ (ಹೂ ಹಾಗೂ ಜಲಸಸ್ಯಗಳ ಪಾಲನೆ), ರಮೇಶ್ ನೂಜಿಪಾಡಿ (ಸಾವಯವ ಕೃಷಿಕ), ಚರಣ್ ರಾಜ್ (ಕೃಷಿ ಉತ್ಪನ್ನಗಳ ಮಾರಾಟಗಾರ) ಅವರನ್ನು ಸನ್ಮಾನಿಸಲಾಗುವುದು ಎಂದರು.

ಪ್ರಮುಖರಾದ ವಿಜಯಲಕ್ಷ್ಮೀ ಶೆಟ್ಟಿ, ಜನಾರ್ದನ ಹಂದೆ, ಶರತ್ ಕುಮಾರ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article