
ಬಮ್ ಬಮ್ ಚಾರ್ ಮಿನಾರ್ ಮಾದಕ ವಸ್ತು ವಶ
Friday, June 20, 2025
ಮಂಗಳೂರು: ನಗರದ ಪಂಪ್‌ವೆಲ್ ಬಳಿ ಪಾನ್ ಶಾಪ್‌ನಲ್ಲಿ ವ್ಯಕ್ತಿಯೊಬ್ಬ ಚಾಕಲೇಟ್‌ನಂತೆ ಕಾಣುವ ಮಾದಕ ದ್ರವ್ಯದ ಸುವಾಸನೆಯುಳ್ಳ ಚಾಕಲೇಟ್ ಮಾರಾಟ ನಡೆಸುತ್ತಿದ್ದ ವೇಳೆ
ಮಂಗಳೂರು ಉಪವಿಭಾಗದ ಅಬಕಾರಿ ಪೊಲೀಸರು ದಾಳಿ ನಡೆಸಿ ಓರ್ವನನ್ನು ಬಂಧಿಸಿದ್ದಾರೆ.
ಉತ್ತರ ಪ್ರದೇಶ ಮೂಲದ ಸುಜಿತ್ ಕುಮಾರ್ ಬಂಧಿತ ವ್ಯಕ್ತಿ. ಆತನಿಂದ 303 ಗ್ರಾಂ. ಬಮ್ ಬಮ್ ಚಾರ್ ಮಿನಾರ್ ಹೆಸರಿನ ಮಾದಕ ದ್ರವ್ಯ ಸುವಾಸನೆಯುಳ್ಳ ಚಾಕಲೇಟ್ ವಶಕ್ಕೆ
ಪಡೆದುಕೊಳ್ಳಲಾಗಿದ್ದು ಎನ್.ಡಿ.ಪಿ.ಎಸ್ ಆಕ್ಟ್ 1985 ಕಲಂ 8(c) 20(b)(11)(A) & 25ರಂತೆ ಪ್ರಕರಣ ದಾಖಲಾಗಿದೆ.