
ಪಂಚಾಯತ್‌ನ ಅನುಮತಿ ಇಲ್ಲದೆ ಕೊಳವೆ ಬಾವಿ ನಿರ್ಮಾಣ: ಆಕ್ಷೇಪ
Friday, June 27, 2025
ಮಂಗಳೂರು: ಸರಕಾರದ ನಿಯಮ ಪ್ರಕಾರ ಸರಕಾರದ ಕೊಳವೆ ಬಾವಿಯಿಂದ 500 ಮೀಟರ್ ಅಂತರ ದೂರದಲ್ಲಿ ಖಾಸಗಿ ಕೊಳವೆ ಬಾವಿ ಮಾಡಬೇಕು ಮತ್ತು ಪಂಚಾಯತ್‌ನಿಂದ ಅನುಮತಿ ಪಡೆಯಬೇಕು. ಆದರೆ ನಮ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯ ಚೇಳೈರು ಪದವಿನಲ್ಲಿ ಖಾಸಗಿ ಜಾಗದಲ್ಲಿ ವ್ಯಕ್ತಿಯೊಬ್ಬರು ರಾಜಕೀಯ ಒತ್ತಡ ಬಳಸಿಕೊಂಡು ಪಂಚಾಯತ್ ಅನುಮತಿ ಪಡೆಯದೇ ಪಂಚಾಯತ್‌ನ ಕೊಳವೆ ಬಾವಿಯ ಪಕ್ಕದಲ್ಲಿ ಕೊಳವೆ ಬಾವಿ ಮಾಡಿದ್ದಾರೆ ಇದಕ್ಕೆ ಪಂಚಾಯತ್ ಏನು ಕ್ರಮ ಕೈಗೊಂಡಿದೆ.
ಬಡವರು ಈ ರೀತಿ ಮಾಡಿದ್ದರೆ ಪಂಚಾಯತ್ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಅದರೆ ಇದಕ್ಕೆ ನಾವು ಎನು ಕ್ರಮ ಕೈಗೊಂಡಿದ್ದೇವೆ ಬಡವರಿಗೊಂದು ನ್ಯಾಯ ಶ್ರೀಮಂತರಿಗೊಂದು ನ್ಯಾಯವೇ ಹಾಗಾಗಿ ನಮಗೆಲ್ಲರಿಗೂ ಕೊಳವೆ ಬಾವಿ ತೋಡಲು ಅವಕಾಶ ಕೊಡಿ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ಗ್ರಾಮಸ್ಥರು ಅಗ್ರಹಿಸಿ ಘಟನೆ ಇಂದು ಚೇಳೈರು ಗ್ರಾಮ ಪಂಚಾಯತ್‌ನ ಸಭಾಂಗಣದಲ್ಲಿ ನಡೆದ ಪಂಚಾಯತ್‌ನ ಪ್ರಥಮ ಹಂತದ ಗ್ರಾಮಸಭೆಯಲ್ಲಿ ಜರುಗಿತು.
ಇದಕ್ಕೆ ಉತ್ತರಿಸಿದ ಅಭಿವೃದ್ಧಿ ಅಧಿಕಾರಿ ನಿತ್ಯಾನಂದ ಮಾತನಾಡಿ, ನಾವು ಪಂಚಾಯತ್‌ನಿಂದ ಮೆಸ್ಕಾಂ ಇಲಾಖೆಗೆ ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕ ನೀಡಬಾರದಾಗಿ ಪತ್ರ ಬರೆದಿದ್ದೇವೆ ಅದರೂ ಸಂಪರ್ಕ ನೀಡಿರುವುದು ನಮ್ಮ ಗಮನಕ್ಕೆ ಬಂದಿದೆ ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.