ಕರಾವಳಿಯಲ್ಲಿ ಇನ್ನೆರಡುದಿನ ಮಳೆ ವಿರಾಮ

ಕರಾವಳಿಯಲ್ಲಿ ಇನ್ನೆರಡುದಿನ ಮಳೆ ವಿರಾಮ

ಮಂಗಳೂರು: ಕಳೆದ 15-20 ದಿನಗಳಿಂದ ಕರಾವಳಿಯಾಧ್ಯಂತ ಉತ್ತಮ ಮಳೆಯಾಗಿದ್ದು, ಕರಾವಳಿಗೆ ಇನ್ನೆರಡುದಿನ ಮಳೆಗೆ ವಿರಾಮವಿರಲಿದೆ. ಈ ಮಧ್ಯೆ ಕರಾವಳಿಯಲ್ಲಿ ತಾಪಮಾನದಲ್ಲಿ ದಾಖಲೆಯ ಏರಿಕೆ ಕಂಡಿದೆ.

ಗುರುವಾರ ಮಳೆ ಕ್ಷೀಣಗೊಂಡು ಹಲವಡೆ ಬಿಸಿಲು ಆವರಿಸಿತ್ತು. ದಿನದ ಬಹುತೇಕ ಸಮಯ ಮಳೆ ,ಮೋದಮುಸುಕಿದ ವಾತಾವರಣ ಕಂಡುವಬಂದಿದೆ. ಮಂಗಳೂರು, ಸುಳ್ಯ, ಬಂಟ್ವಾಳ, ಪುತ್ತೂರು ಸುತ್ತಮುತ್ತ ಮಧ್ಯಾಹ್ನ ಹಾಘೂ ಸಂಜೆ ವೇಳೆ ಅಲ್ಪ ಮಳೆಯಾಗಿದೆ. ಸಧ್ಯದ ಮುನ್ಸೂಚನೆಯಂತೆ ಮುಂದಿನ 2 ದಿನ ಕರಾವಳಿಯಾಧ್ಯಂತ ಮಳೆ ಕಡಿಮೆಯಾಗಿ ಸಾಧಾರಣ ಬಿಸಿಲು ಆವರಿಸಲಿದೆ. ಮುಂದಿನ 2 ದಿನ ದ.ಕ, ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದರೂ, ದಿನದಲ್ಲಿ ಅಲ್ಲಲ್ಲಿ 2 ರಿಂದ 3 ಮಳೆಯ ಮುನ್ಸೂಚನೆ ಇದೆ. ಕೆಲವು ಭಾಗಗಳಲ್ಲಿ ಅನಿರೀಕ್ಷಿತ ಗುಡುಗು ಸಾಧ್ಯತಯೂ ಇದೆ. ಈಗಿನಂತೆ ಜೂನ್ 21ರ ತನಕ ಮಳೆಯ ಪ್ರಮಾಣ ಕಡಿಮೆ ಇದ್ದು, ನಂತರ ಸ್ವಲ್ಪ ಜಾಸ್ತಿಯಾಗುವ ಲಕ್ಷಣಗಳಿವೆ. ಆದರೂ ಭಾರಿ ಮಳೆಯ ಸಾಧ್ಯತೆ ಕಾಣಿಸುತ್ತಿಲ್ಲ. ಸಾಮಾನ್ಯ ಮಳೆ ಮುಂದುವರಿಯಬಹುದು ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಸಮುದ್ರ ಆಸುಪಾಸಿನ ನಿವಾಸಿಗಳು ಎಚ್ಚರಿಕೆ:

ಮಳೆಯಿಂದಾಗಿ  ತುಂಬೆ ಡ್ಯಾಂ ಸೇರಿದಂತೆ ನೇತ್ರಾವತಿ ಉಪ್ಪಿನಂಗಡಿ ಭಾಗದಲ್ಲಿ ನೀರಿನ ಮಟ್ಟದಲ್ಲಿ ಏರಿಕೆಯಾಗಿಲ್ಲ. ಅರಬ್ಬಿ ಸಮುದ್ರದಲ್ಲಿ ಗಾಳಿಯ ಪ್ರಮಾಣ ಗಂಟೆಗೆ 35ಕಿ.ಮೀ ನಿಂದ 40ಕಿ.ಮೀ ವರೆಗೆ ಹೆಚ್ಚಳವಾಗಿರುವುದರಿಂದ ಮೀನುಗಾರರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ಜತೆಗೆ ಸಮುದ್ರ ಆಸುಪಾಸಿನ ನಿವಾಸಿಗಳು ಎಚ್ಚರಿಕೆಯಲ್ಲಿರುವಂತೆ ಜಿಲ್ಲಾಡಳಿತ ಸೂಚಿಸಿದೆ. 

ಘಾಟ್ ಸುತ್ತಮುತ್ತ ಉತ್ತಮ ಮಳೆ:

ಕರಾವಳಿಯ ತಗ್ಗುಪ್ರದೇಶದಲ್ಲಿ ಮಳೆ ಇಳಿಕೆಯಾದರೂ ಘಾಟ್ ಸುತ್ತಮುತ್ತ ಉತ್ತಮ ಮಳೆಯಾಗಿದೆ. ಈ ಹಿನ್ನೆಲೆಯಲ್ಲಿ ಕರಾವಳಿಯ ನದಿಗಳಲ್ಲಿ ನೀರು ಸರಾಗವಾಗಿ ಹರಿಯುತ್ತಿದ್ದು, ಅಪಾಯದ ಮಟ್ಟ ಮೀರಿಲ್ಲ. ಅರಬ್ಬಿ ಸಮುದ್ರದಲ್ಲಿ ಉಂಟಾಗಿದ್ದ ವಾಯುಭಾರ ಕುಸಿತದಂತಹ ತಿರುವಿಕೆಯು ಮಧ್ಯಪ್ರದೇಶದ ಉತ್ತರ ಭಾಗ ತಲುಪಿದ್ದು, ಅಲ್ಲೆ ಶಿಥಿಲಗೊಳ್ಳುವ ಲಕ್ಷಣಗಳಿವೆ. ಬಂಗಾಳಕೊಲ್ಲಿಯ ತಿರುಗುವಿಕೆಯು ಪಶ್ಚಿಮ ಬಂಗಾಳದಲ್ಲಿದ್ದು, ಜೂನ್ 21ರಂದು ಉತ್ತರ ಪ್ರದೇಶ ತನಕ ಸಾಗಿ ಶಿಥಿಲಗೊಳ್ಳುವ ಸಾಧ್ಯತೆಗಳಿವೆ. ಇದರ ಪರಿಣಾಮದಿಂದ ಜೂ.21ರ ಬಳಿಕ ರಾಜ್ಯದ ಕರಾವಳಿ ಭಾಗಗಳಿಲ್ಲಿ ಮಳೆಯ ಪ್ರಮಾಣ ನಿರೀಕ್ಷೆಗಿಂತ ಸ್ವಲ್ಪ ಜಾಸ್ತಿ ಇರಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.

 ತಾಪಮಾನದಲ್ಲಿ ದಾಖಲೆಯ ಏರಿಕೆ:

 ದ.ಕ. ಜಿಲ್ಲೆಯಲ್ಲಿ ಗುರುವಾರ ಮಳೆ ಕ್ಷೀಣಗೊಂಡು ಬಹುತೇಕ ಸಂದರ್ಭ ಪ್ರಖರ ಖಾರವಾದ ಬಿಸಿಲು ಆವರಿಸಿರುವುದು ಮಾತ್ರವಲ್ಲದೆ ತಾಪಮಾನದಲ್ಲಿ ದಾಖಲೆಯ ಏರಿಕೆ ದಾಖಲಾಗಿದೆ. ಮಳೆಗೆ ಹಿಡಿಶಾಪಹಾಕುತ್ತಿದ್ದ ಜನ ದಿಡೀರ್ ಆವರಿಸಿದ ಖಾರ ಬಿಸಿಲಿಗೆ ಕಂಗಾಲಾಗಿದ್ದಾರೆ. ಗುರುವಾರ ಗರಿಷ್ಠ 36.1 ಡಿಗ್ರಿ ಸೆಲ್ಸಿಯಸ್, ಕನಿಷ್ಠ 24.7 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿ ಇದು ಜೂನ್ 19ರಂದು ದಾಖಲಾದ ಅತೀ ಹೆಚ್ಚಿನ ತಾಪಮಾನ. ಶುಕ್ರವಾರ ವೇಳೆ ತುಸು ಏರಿಕೆಯಾಗುವ ಸಾಧ್ಯತೆ ಇದೆ. ಗುರುವಾರ ಬೆಳಗ್ಗಿನವರೆಗೆ 15.1 ಮಿಲಿ ಮೀಟರ್ ಮಳೆ ದಾಖಲಾಗಿದೆ. ಕಳೆದ 2 ದಿನಗಳಲ್ಲಿ ಅತೀ ಹೆಚ್ಚು ಮಳೆಯಾಘಿದ್ದ ಮೂಡುಬಿದಿರೆಯಲ್ಲಿ 19.1 ಮಿ.ಮೀ ಮಳೆಯಾಗಿದೆ. ಬೆಳ್ತಂಗಡಿಯಲ್ಲಿ 17.2 ಮಿ.ಮೀ, ಬಂಟ್ವಾಳ 10.5 ಮಿ.ಮೀ, ಮಂಗಳೂರು 5.1 ಮಿ.ಮೀ, ಪುತ್ತೂರು 16.8 ಮಿ.ಮೀ, ಸುಳ್ಯ 16.3 ಮಿ.ಮೀ, ಕಡಬ 19.1 ಮಿ.ಮೀ, ಮೂಲ್ಕಿ 6.5 ಮಿ.ಮೀ, ಉಳ್ಳಾಲ 7.2 ಮಿ.ಮೀ. ಮಳೆಯಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article