
ಕೆಎಎಸ್ ಪರೀಕ್ಷೆ ಬರೆಯುವ ಗದಗ ಜಿಲ್ಲೆಯ ವಿಕಲಚೇತನ ಶಿವಾನಂದ ಇ. ಸುಂಕದ ಅವರಿಗೆ ಎಸ್‌ಸಿಡಿಸಿಸಿ ಬ್ಯಾಂಕ್‌ನಿಂದ ಆರ್ಥಿಕ ನೆರವು
Monday, June 9, 2025
ಮಂಗಳೂರು: ಕೆಎಎಸ್ ಪರೀಕ್ಷೆ ಬರೆಯುವ ಗದಗ ಜಿಲ್ಲೆಯ ಶಿವಾನಂದ ಇ. ಸುಂಕದ ಅವರಿಗೆ ಎಸ್ ಸಿಡಿಸಿಸಿ ಬ್ಯಾಂಕ್‌ನಿಂದ ಹಾಗೂ ರಾಜೇಂದ್ರಕುಮಾರ್ ಅವರಿಂದ ಆರ್ಥೀಕ ನೆರವನ್ನು ಸೋಮವಾರ ವಿತರಿಸಲಾಯಿತು.
ಗದಗ ಜಿಲ್ಲೆಯ ನರಗುಂದ ತಾಲೂಕಿನವರಾದ ಶಿವಾನಂದ ಇ ಸುಂಕದ ಶೇ. 80ರಷ್ಟು ವಿಕಲಚೇತನರಾಗಿದ್ದು, ಬಿಕಾಂ ಪದವೀಧರಾಗಿದ್ದಾರೆ. ಕೆಎಎಸ್ ಪರೀಕ್ಷೆ ಬರೆಯುವ ಮಹಾದಾಸೆ ಇಟ್ಟುಕೊಂಡಿರುವ ಶಿವಾನಂದ ಇ ಸುಂಕದ ಅವರು ಗದಗದಿಂದ ಮಂಗಳೂರಿಗೆ ಬಂದು ರಾಜೇಂದ್ರ ಕುಮಾರ್ ಅವರನ್ನು ಭೇಟಿಯಾಗಿದ್ದಾರೆ. ಶಿವಾನಂದ ಅವರ ಮನವಿಗೆ ಸ್ಪಂದಿಸಿದ ರಾಜೇಂದ್ರ ಕುಮಾರ್ ಕೂಡಲೇ ಅವರಿಗೆ ಆರ್ಥಿಕ ನೆರವನ್ನು ನೀಡಿ ಅವರ ಮುಂದಿನ ಭವಿಷ್ಯಕ್ಕೆ ಶುಭಕೋರಿದರು.
ಈ ಸಂದರ್ಭದಲ್ಲಿ ಬ್ಯಾಂಕಿನ ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೋಟ್ಟು, ಮಾಜಿ ನಿರ್ದೇಶಕರಾದ ರಾಜು ಪೂಜಾರಿ, ಬ್ಯಾಂಕಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ. ಗೋಪಾಲಕೃಷ್ಣ ಭಟ್, ಉದ್ಯಮಿ ಇನಾಯಿತ್ ಅಲಿ, ಜಯಪ್ರಕಾಶ್ ತುಂಬೆ, ಸತೀಶ್ ಜಿ.ಎಸ್. ಅಂಪಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರದೀಪ್ ಶೆಟ್ಟಿ, ದಿವಾಕರ್ ಮತ್ತಿತರರು ಉಪಸ್ಥಿತರಿದ್ದರು.