
ಪ್ರವಾಹ ಪೀಡಿತ ಪ್ರದೇಶಕ್ಕೆ ಶಾಸಕ ಕಾಮತ್ ಅಧಿಕಾರಿಗಳೊಂದಿಗೆ ಭೇಟಿ
Saturday, June 28, 2025
ಮಂಗಳೂರು: ನಗರದಾದ್ಯಂತ ಸುರಿದ ವಿಪರೀತ ಮಳೆಯಿಂದಾಗಿ ಮಂಗಳೂರು ನಗರ ದಕ್ಷಿಣ ವ್ಯಾಪ್ತಿಯ ವಾರ್ಡ್ ಸಂಖ್ಯೆ 42 ರಲ್ಲಿ ಉಂಟಾಗಿದ್ದ ಪ್ರವಾಹ ಪೀಡಿತ ಪ್ರದೇಶಕ್ಕೆ ಶಾಸಕ ವೇದವ್ಯಾಸ ಕಾಮತ್ ಅವರು ಪಾಲಿಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದರು.
ಈ ವೇಳೆ ಅಳಕೆ ನಾಗಬ್ರಹ್ಮ, ಅಳಕೆ ಬ್ರಿಡ್ಜ್, ಕುದ್ರೋಳಿ ಭಾರತ್ ಬೀಡಿ ಕಾಂಪೌಂಡ್, ಮೊದಲಾದ ಸ್ಥಳಗಳನ್ನು ಪರಿಶೀಲನೆ ನಡೆಸಿ, ತುರ್ತು ಕ್ರಮಗಳ ಸಹಿತ ಭವಿಷ್ಯದಲ್ಲಿ ಇಂತಹ ಸ್ಥಿತಿ ಮರುಕಳಿಸದಂತೆ ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ನಿಕಟ ಪೂರ್ವ ಪಾಲಿಕೆ ಸದಸ್ಯೆ ಜಯಶ್ರೀ ಜೆ. ಕುಡ್ವ, ಶರತ್ ಶೆಟ್ಟಿ, ಕೃಷ್ಣಪ್ರಸಾದ್, ಕಲಾವತಿ, ಲಕ್ಷ್ಮಿ, ಸುನಂದ, ಜನಾರ್ಧನ ಕುಡ್ವ, ತಾರಾ ಗೋಪಾಲ್, ರಾಜೇಂದ್ರ ಶೆಟ್ಟಿ, ಪಾಲಿಕೆಯ ಅಭಿಯಂತರರು, ಯೋಜನಾಧಿಕಾರಿಗಳು, ಬಿಜೆಪಿ ಕಾರ್ಯಕರ್ತರು, ಸ್ಥಳಿಯರು ಉಪಸ್ಥಿತರಿದ್ದರು.