
ಶಕ್ತಿ ರೆಸಿಡೆನ್ಸಿಯಲ್ ಶಾಲೆಯಲ್ಲಿ ವಿಶ್ವ ಸಂಗೀತ ದಿನಾಚರಣೆ
Friday, June 20, 2025
ಮಂಗಳೂರು: ಶಕ್ತಿನಗರದಲ್ಲಿರುವ ಶಕ್ತಿ ರೆಸಿಡೆನ್ಸಿಯಲ್ ಶಾಲೆಯಲ್ಲಿ ವಿಶ್ವ ಸಂಗೀತ ದಿನವನ್ನು ಆಚರಿಸಲಾಯಿತು.
ಮುಖ್ಯ ಅತಿಥಿ ಎಕ್ಸ್‌ಪರ್ಟ್ ಸಮೂಹ ಸಂಸ್ಥೆಗಳ ಐ ಟಿ ನಿರ್ದೇಶಕ ಅಂಕುಶ್‌ಎನ್ ನಾಯಕ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ದಿನದಲ್ಲಿ ಕನಿಷ್ಠ ಒಂದುಗಂಟೆಯಾದರೂ ನಾವು ನಮ್ಮ ಹವ್ಯಾಸಗಳಿಗೆ ಮೀಸಲಿಡಬೇಕು, ಪ್ರತಿಯೊಬ್ಬರೂ ಒಂದಲ್ಲಾ ಒಂದು ರೀತಿಯ ಸಂಗೀತ ಕಲಿಯಬೇಕು, ಸಂಗೀತವು ನಮ್ಮಲ್ಲಿ ಕ್ರಿಯಾಶೀಲತೆಯನ್ನು ಹಾಗೂ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ನಾವು ನಮ್ಮ ಭಾರತೀಯ ಶಾಸ್ತ್ರೀಯ ಸಂಗೀತ ಶೈಲಿಯನ್ನು ಅದರ ಪ್ರಾಮುಖ್ಯತೆಯನ್ನು ಅರಿತು ಗೌರವಿಸಬೇಕು ಎಂದರು.
ಭಾರತದ ಅನೇಕ ಯುವ ಸಂಗೀತಕಾರರುಇಂದು ಭಾರತವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುತ್ತಿದ್ದಾರೆ. ನಮ್ಮದೇಶದ ಸಂಗೀತಕ್ಕೆಜಗತ್ತಿನಲ್ಲಿ ಮನ್ನನೆಯಿದೆ. ಜಗತ್ತಿನ ಬೇರೆ ಬೇರೆದೇಶದಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತ ಅಲಿಸುವ ಜನರುದೊಡ್ಡ ಪ್ರಮಾಣದಲ್ಲಿ ಸಂಗೀತ ಕಚೇರಿಯನ್ನು ಆಯೋಜಿಸಿದಾಗ ಸೇರುತ್ತಾರೆ. ಆದರೆ ಇಂದು ಭಾರತದಲ್ಲಿ ಆ ಸಂಖ್ಯೆ ಕಡಿಮೆಯಾಗುತ್ತಿರುವುದು ಸ್ವಲ್ಪ ನೋವನ್ನುಕೊಡುತ್ತಿದೆ. ನಾವು ನಮ್ಮ ಶಾಲಾ ಹಂತದಲ್ಲಿ ಸಮಯವನ್ನು ಹೊಂದಾಣಿಕೆ ಮಾಡಿ ಸಂಗೀತಕ್ಕೆ ಒತ್ತು ಕೊಡಬೇಕೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಈ ಸಂದರ್ಭ ಅವರನ್ನು ಗೌರವಿಸಲಾಯಿತು.
ಸಂಗೀತ ದಿನಾಚರಣೆಯ ಪ್ರಯುಕ್ತ ಶಕ್ತಿ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಂದ ವಿವಿಧ ಸಂಗೀತವಾದ್ಯಗಳನ್ನೊಳಗೊಂಡ ಕಾರ್ಯಕ್ರಮ ನಡೆಯಿತು.
ಶಕ್ತಿ ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿ ಡಾ. ಕೆ. ಸಿ. ನಾಕ್ ಅಧ್ಯಕ್ಷತೆ ವಹಿಸಿದ್ದರು. ಶಕ್ತಿ ವಿದ್ಯಾ ಸಂಸ್ಥೆಯ ಮುಖ್ಯ ಸಲಹೆಗಾರ ರಮೇಶ್ ಕೆ, ಶಕ್ತಿ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲ ವೆಂಕಟೇಶ್ ಮೂರ್ತಿ ಹಾಗೂ ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ಬಬಿತಾ ಸೂರಜ್ ಉಪಸ್ಥಿತರಿದ್ದರು. ಶಿಕ್ಷಕಿ ಅರುಣೀತ ಕಾರ್ಯಕ್ರಮ ನಿರೂಪಿಸಿದರು.