
ಮುಹಮ್ಮದ್ ನಝೀರ್ ಮುಡಾ ಆಯುಕ್ತ
Thursday, June 12, 2025
ಮಂಗಳೂರು: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಆಯುಕ್ತರಾಗಿ ಮುಹಮ್ಮದ್ ನಝೀರ್ ಅವರನ್ನು ಸರಕಾರ ನಿಯೋಜಿಸಿದೆ. ಈ ವರೆಗೆ ಆಯುಕ್ತರಾಗಿದ್ದ ನೂರ್ ಜಹಾನ್ ಖಾನಂ ಅವರಿಗೆ ವರ್ಗಾವಣೆಯಾಗಿದ್ದು, ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ಜಂಟಿ ನಿರ್ದೇಶಕರಾಗಿದ್ದ ಮುಹಮ್ಮದ್ ನಝೀರ್ ಅವರನ್ನು ನಿಯೋಜಿಸಿ ಸರಕಾರ ಜೂ.೧೦ರಂದು ಆದೇಶ ಹೊರಡಿಸಿದೆ.
ಮುಹಮ್ಮದ್ ನಝೀರ್ ಈ ಹಿಂದೆ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಮತ್ತು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಾಗಿ, ಸ್ಮಾರ್ಟ್ ಸಿಟಿ ಲಿಮಿಟೆಡ್ನ ಆಡಳಿತ ನಿರ್ದೇಶಕರಾಗಿ ಕರ್ತವ್ಯ ಸಲ್ಲಿಸಿದ್ದರು.