
ವಿದ್ಯುತ್ ಮಗ್ಗ ಬಟ್ಟೆ ಉತ್ಪಾದನಾ ಘಟಕ ಉದ್ಘಾಟನೆ
Saturday, June 28, 2025
ಮಂಗಳೂರು: ಅಡ್ಯಾರ್ ಗ್ರಾಮ ಪಂಚಾಯತ್, ಅಡ್ಯಾರ್ ಮಂಗಳೂರು ಮತ್ತು ಸಹ್ಯಾದ್ರಿ ಕಾಲೇಜು ಆಫ್ ಇಂಜಿನಿಯರಿಂಗ್ ಅಂಡ್ ಮ್ಯಾನೇಜ್ಮೆಂಟ್, ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಜೂ.27 ರಂದು ಅಡ್ಯಾರ್ ಪದವು ಅಂಬೇಡ್ಕರ್ ಭವನದಲ್ಲಿ ‘ವಿದ್ಯುತ್ ಮಗ್ಗ ಬಟ್ಟೆ ಉತ್ಪಾದನಾ ಘಟಕ’ವನ್ನು ಶಾಸಕ ಡಾ. ವೈ. ಭರತ್ ಶೆಟ್ಟಿ ಉದ್ಘಾಟಿಸಿದರು.
ಬಳಿಕ ಅವರು ಮಾತನಾಡಿ, ವಿದ್ಯುತ್ ಮಗ್ಗ ಘಟಕದ ಉದ್ಘಾಟನೆಯೊಂದಿಗೆ ಸ್ಥಳೀಯರ ಕೈಗಾರಿಕಾ ಅವಕಾಶಗಳು ಹೆಚ್ಚಾಗಲಿದ್ದು, ಮಹಿಳೆಯರಿಗೆ ಸ್ವಾವಲಂಬನೆಗೆ ದಾರಿ ಬಿಡಲಿದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಭಾಗವಹಿಸಿ ಮಾತನಾಡಿ, ವಿದ್ಯುತ್ ಮಗ್ಗ ಘಟಕ ಉದ್ಘಾಟನೆಯು ಗ್ರಾಮೀಣ ಆಧಾರಿತ ಉದ್ಯಮದ ವಿಕಾಸದತ್ತ ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಡ್ಯಾರ್ ಗ್ರಾಮ ಪಂಚಾಯತ್‌ನ ಅಧ್ಯಕ್ಷ ಅಬ್ದುಲ್ ಜಲೀಲ್ ಮಾತನಾಡಿ, ಪಂಚಾಯತ್ ಎಲ್ಲರ ಅಭಿವೃದ್ಧಿಗೆ ಈ ಮೂಲಕ ತೊಡಗಲಿದೆ ಎಂದು ಹೇಳಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಪಂಚಾಯತ್ ಸದಸ್ಯರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಹಾಗೂ ಸ್ಥಳೀಯ ನಾಗರಿಕರು ಭಾಗವಹಿಸಿದ್ದರು.
ಸಹ್ಯಾದ್ರಿ ಕಾಲೇಜಿನ ಪ್ರಾಂಶುಪಾಲ ಡಾ. ಇಂಜಗನೇರಿ ಸ್ವಾಗತಿಸಿ, ಡಾ. ವಿಶಾಲ್ ಸಮರ್ಥ ವಂದಿಸಿದರು. ಪ್ರೊ. ಪದ್ಮನಾಭ ಅವರು ಕಾರ್ಯಕ್ರಮ ನಿರೂಪಿಸಿದರು.