
ಕುದ್ರು ನಿವಾಸಿಗಳ ಸಂಕಷ್ಟ ಪರಿಹರಿಸುವಂತೆ ಸರ್ಕಾರಕ್ಕೆ ಪತ್ರ
Saturday, June 28, 2025
ಮಂಗಳೂರು: ಶೀಘ್ರ ಐಐಪಿಎಂ ರಚಿಸಿ ಕೇಂದ್ರ ಸರ್ಕಾರದಿಂದ ಅನುಮೋದನೆ ಪಡೆಯುವ ಮೂಲಕ ಕರಾವಳಿ ಭಾಗದ ಕುದ್ರು ನಿವಾಸಿಗಳ ಸಂಕಷ್ಟ ಪರಿಹರಿಸಲು ಮುಂದಾಗುವಂತೆ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಕೇಂದ್ರ ಸರ್ಕಾರದ ಸಿಆರ್‌ಝೆಡ್ ಅಧಿನಿಯಮ 2019 ರಿಂದಾಗಿ ಕರಾವಳಿ ಜಿಲ್ಲೆಗಳ ಕುದ್ರು ಅಥವಾ ದ್ವೀಪಗಳಲ್ಲಿ ವಾಸ ಮಾಡುವ ಜನರಿಗೆ ಮನೆ ನಿರ್ಮಾಣ ಮಾಡಲು ಮೂಲಭೂತ ಸೌಲಭ್ಯಗಳನ್ನು ಪಡೆದುಕೊಳ್ಳಲು ತೀವ್ರ ತೊಂದರೆಯಾಗಿತ್ತು ಕಾಯಿದೆಯ ಅವಕಾಶದಂತೆ ರಾಜ್ಯ ಸರ್ಕಾರವು ಐಐಎಂಪಿ ರಚನೆ ಮಾಡಿ ಕೇಂದ್ರ ಸರ್ಕಾರದಿಂದ ಅನುಮೋದನೆ ಪಡೆದಲ್ಲಿ ಕುದ್ರು ನಿವಾಸಿಗಳ ಸಮಸ್ಯೆ ಬಗೆಹರಿದಂತಾಗುತ್ತದೆ ಆದರೆ ಈ ಹಿಂದಿನ ಸರ್ಕಾರಗಳು ಈ ಬಗ್ಗೆ ಕ್ರಮ ವಹಿಸದಿರುವುದರಿಂದ ಜನರ ದೈನಂದಿನ ಜೀವನಕ್ಕೆ ತೊಂದರೆಯಾಗಿತ್ತು.
ಹಲವಾರು ವರ್ಷಗಳಿಂದ ಐಐಎಂಪಿ ರಚನೆ ಕುರಿತಂತೆ ಒತ್ತಾಯ ಕೇಳಿ ಬಂದಿತ್ತು ಸಮಸ್ಯೆಯ ತೀವ್ರತೆಯನ್ನು ಅರಿತ ಶಾಸಕರು ಸಮಸ್ಯೆ ಗಂಭೀರತೆಯನ್ನು ವಿವರಿಸಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.