
ಛಾಯಾಗ್ರಾಹಕ, ಗಾಯಕ ಅಶ್ರಫ್ ಆಲಿ ನಿಧನ
Monday, June 9, 2025
ಮೂಡುಬಿದಿರೆ: ಹಿರಿಯ ಛಾಯಾಗ್ರಾಹಕ, ಹವ್ಯಾಸಿ ಗಾಯಕ ಅಶ್ರಫ್ ಆಲಿ (62) ರವಿವಾರ ನಿಧನ ಹೊಂದಿದರು.
ಮೂಡುಬಿದಿರೆಯಲ್ಲಿ ಗೆಳೆಯರ ಬಳಗ, ಚದುರಂಗ ಸಾಂಸ್ಕೃತಿಕ ಸಂಘಟನೆಗಳಲ್ಲಿ ನಟ, ಗಾಯಕರಾಗಿ ಸಕ್ರಿಯರಾಗಿದ್ದ ಅಶ್ರಫ್ ಆಲಿ ಛಾಯಾಗ್ರಾಹಕರಾಗಿ, ಅಡ್ಲಾ ನೆಟ್‌ವಕ್೯ ಕೇಬಲ್ ಟಿವಿಯಲ್ಲಿ ವೀಡಿಯೋ ಗ್ರಾಫರ್ ಆಗಿ ವೃತ್ತಿ ಜೀವನ ಆರಂಭಿಸಿ, ಕೆಲಕಾಲ ವಿದೇಶದಲ್ಲೂ ಕೆಲಸ ಮಾಡಿ ಮರಳಿ ಊರಲ್ಲೇ ಛಾಯಾಗ್ರಾಹಕ, ವೀಡಿಯೊ ಗ್ರಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.