
ಸಿದ್ಧಾಪುರ-ಹೆಬ್ರಿ ರಾಜ್ಯ ಹೆದ್ದಾರಿ ನಿರ್ಬಂಧ
Friday, June 27, 2025
ಉಡುಪಿ: ಹೆಬ್ರಿ ತಾಲೂಕಿನ ಸಿದ್ಧಾಪುರ-ಹೆಬ್ರಿ ರಾಜ್ಯ ಹೆದ್ದಾರಿ 296ರ ಕಿ.ಮೀ 60.50ರಲ್ಲಿ ಅತಿಯಾದ ಮಳೆಯಿಂದ ಹಾನಿಗೊಂಡ ರಸ್ತೆ ಹಾಗೂ ಮೋರಿಯನ್ನು ರಕ್ಷಣಾ ತಡೆಗೋಡೆಯೊಂದಿಗೆ ಪುನರ್ ನಿರ್ಮಿಸುವ ಕಾಮಗಾರಿ ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ ಜೂ.27ರಿಂದ ಜು.30ರ ವರೆಗೆ ಸಿದ್ಧಾಪುರ-ಹೆಬ್ರಿ (ಹೆಬ್ರಿ-ಕುಚ್ಚೂರು-ಕಂಚರಕಾಳ-ಮಾಂಡಿಮೂರುಕೈ) ರಾಜ್ಯ ಹೆದ್ದಾರಿಯಲ್ಲಿ ಎಲ್ಲಾ ರೀತಿಯ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಆ ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ ಬದಲಿ ಮಾರ್ಗವಾಗಿ ಗ್ರಾಮೀಣ ರಸ್ತೆಯಾದ ಮಾಂಡಿಮೂರುಕೈ-ಮೀನುಗದ್ದೆ-ಬೇಳಂಜೆ-ಕುಚ್ಚೂರು-ಹೆಬ್ರಿ ರಸ್ತೆ ಮೂಲಕ ಸಂಚರಿಸುವಂತೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಆದೇಶಿಸಿದ್ದಾರೆ.