
ಬಂಟ್ವಾಳ: ಮಳೆಗೆ ಮುರಿದುಬಿದ್ದ ಕಾಲುಸಂಕ
Saturday, July 5, 2025
ಬಂಟ್ವಾಳ: ಶುಕ್ರವಾರ ರಾತ್ರಿಯಿಂದ ಶನಿವಾರ ಬೆಳಗ್ಗಿನವರೆಗೆ ಬಂಟ್ವಾಳದಾದ್ಯಂತ ಸುರಿದ ಧಾರಕಾರ ಮಳೆಗೆ ಕಡೇಶ್ವಾಲ್ಯ ಗ್ರಾಮದ ನಡ್ಯೇಲು ಎಂಬಲ್ಲಿ ಕಾಲುಸಂಕ ಮುರಿದು ಬಿದ್ದಿರುವ ಘಟನೆ ಸಂಭವಿಸಿದೆ.
ಮೊದಲೇ ಈ ಕಾಲುಸಂಕದಲ್ಲಿ ಸಂಚರಿಸದಂತೆ ಮುಂಜಾಗೃತಾಕ್ರಮವಾಗಿ ಸ್ಥಳೀಯ ಗ್ರಾ.ಪಂ. ಎಚ್ಚರಿಕೆ ಫಲಕ ಅಳವಡಿಸಿದ್ದರಿಂದ ಯಾವುದೇ ಅನಾಹುತ ಸಂಭವಿಸಿರುವುದಿಲ್ಲ. ಕಾಲುಸಂಕ ಒಂದು ಬದಿಯಲ್ಲಿ ಮುರಿದು ನೀರು ಹರಿಯುವ ತೋಡಿಗೆ ಬಿದ್ದಿದೆ.