
ವಕೀಲ ಸಮುದಾಯಕ್ಕೆ ನಿಂದನೆ: ಕೇಸುದಾಖಲು
Tuesday, July 15, 2025
ಬಂಟ್ವಾಳ: ವ್ಯಕ್ತಿಯೋರ್ವ ತನ್ನ ಫೇಸ್‌ಬುಕ್ ಖಾತೆಯಲ್ಲಿ ವಕೀಲ ಸಮುದಾಯದ ಘನತೆಗೆ ಕುಂದು ಉಂಟು ಮಾಡುವಂತಹ ಕೀಳು ಮಟ್ಟದ ಶಬ್ದಗಳೊಂದಿಗೆ ಸಂಭೋದಿಸಿ ಮಾನಹಾನಿ ಮಾಡಿರುವ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
ವಕೀಲರಾದ ಶಿವಾನಂದ ಎಂ.ವಿ. ಎಂಬವರ ದೂರಿನಂತೆ ನವೀನ್ ಗೌಡ ಎಂಬಾತನ ವಿರುದ್ಧ ಕೇಸು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಆರೋಪಿ ನವೀನಗೌಡ ತನ್ನ ಫೇಸ್‌ಬುಕ್ ಖಾತೆಯಲ್ಲಿ ವಕೀಲ ಸಮುದಾಯದ ಘನತೆಗೆ ಕುಂದು ಉಂಟು ಮಾಡುವಂತಹ ಕೀಳು ಮಟ್ಟದ ಶಬ್ದಗಳೊಂದಿಗೆ ಸಂಭೋದಿಸಿದ್ದಲ್ಲದೆ ನಿಂದನ್ಮಾತಕ ಪದಗಳನ್ನು ಬಳಸಿ ಮಾನಹಾನಿಯನ್ನು ಮಾಡಿರುವುದು ಕಂಡುಬಂದಿರುತ್ತದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿರುವ ಬಂಟ್ವಾಳ ನಗರ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.