
ಪುಟ್ಟ ಕಂದಮ್ಮನ ಆರೋಗ್ಯಕ್ಕಾಗಿ ಸಹಕರಿಸಿ
ಬಂಟ್ವಾಳ: ಭವಿಷ್ಯದಲ್ಲಿ ಹತ್ತುಹಲವು ಕನಸಿನೊಂದಿಗೆ ಬಾಳಿ ಬದುಕಬೇಕಾದ ಐದರ ಹರೆಯದ ಕಂದಮ್ಮ ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಹೆತ್ತವರು ಕಣ್ಣೀರಲ್ಲಿ ಕೈತೊಳೆಯುವಂತಾಗಿದೆಯಲ್ಲದೆ ದಾನಿಗಳ ಸಹಕಾರವನ್ನು ಯಾಚಿಸುತ್ತಿದ್ದಾರೆ.
ಬಂಟ್ವಾಳ ತಾಲೂಕಿನ ಕರ್ಪೆ ಗ್ರಾಮದ ಕುಟ್ಟಿಕಳ ನಿವಾಸಿಯಾದ ಹಿರಣ್ಯಾಕ್ಷ ಶಾಂತಿ-ಸೌಮ್ಯ ದಂಪತಿಯ ಪತ್ರಿ ಮನಸ್ವಿ(5) ಈ ಕಾಯಿಲೆಗೊಳಗಾಗಿದ್ದು, ಹೆತ್ತವರ ಪಾಲಿಗೆ ಆಕಾಶವೇ ತಲೆಮೇಲೆ ಕಳಚಿಬಿದ್ದಾಂತಾಗಿದೆ.
ಕುಟ್ಟಿಕಳದಲ್ಲಿ ಚಿಕ್ಕ ಮನೆಯಲ್ಲಿ ಈ ಕುಟುಂಬ ವಾಸವಾಗಿದ್ದು, ಹಿರಣಾಕ್ಷ್ಯ ಶಾಂತಿ ಅವರು ಪುರೋಹಿತ ಕೆಲಸವನ್ನು ಮಾಡಿಕೊಂಡು ತಮ್ಮ ಜೀವನದ ರಥವನ್ನು ಎಳೆಯುತ್ತಿದ್ದಾರೆ. ಇದೀಗ ಅವರ ಪುತ್ರಿ ಐದರ ಹರೆಯದ ಮನಸ್ವಿಗೆ ಏಕಾಏಕಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದ್ದು, ಆಸ್ಪತ್ರೆಯಲ್ಲಿ ಪರೀಕ್ಷೆಗೊಳಪಡಿಸಿದಾಗ ‘ರಕ್ತದ ಕ್ಯಾನ್ಸರ್’ ಇರುವುದು ದೃಡಪಟ್ಟಿದೆ. ಪ್ರಸ್ತುತ ಮಂಗಳೂರಿನ ಜ್ಯೋತಿ ಕೆ.ಎಂ.ಸಿ.ಯಲ್ಲಿ ಚಿಕಿತ್ಸೆ ಪಡೆಯುತಿದ್ದು, ಈಗಾಗಲೇ ಸಾಲ ಮಾಡಿಕೊಂಡು ಮಗಳ ಚಿಕಿತ್ಸೆಗಾಗಿ ಇದುವರೆಗೆ ಸುಮಾರು 7 ಲಕ್ಷ ರೂ.ವೆಚ್ಚ ಮಾಡಿದ್ದಾರೆ.
ಮುಂದಿನ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಾರಾಯಣ ಹೃದಯಾಲಯ ಆಸ್ಪತ್ರೆಯಲ್ಲಿ ಮನಸ್ವಿಗೆ ಚಿಕಿತ್ಸೆ ಕೊಡಿಸಬೇಕಾಗಿದೆ. ಅದಕ್ಕೆ ಸುಮಾರು 40 ರಿಂದ 45 ಲಕ್ಷ ರೂ. ಖರ್ಚು ತಗಲಲಿದೆ ಎಂದು ವೈದ್ಯರು ತಿಳಿಸಿರುತ್ತಾರೆ. ಈ ವೆಚ್ಚವನ್ನು ಬಡ ಹರಣಾಕ್ಷ್ಯ ಶಾಂತಿ ದಂಪತಿಯಿಂದ ಭರಿಸಲು ಸಾಧ್ಯವಾಗದ ಕಾರಣ, ಸಹೃದಯಿ ದಾನಿಗಳಿಂದ ಧನ ಸಹಾಯವನ್ನು ಯಾಚಿಸಿದ್ದಾರೆ.
ಧನ ಸಹಾಯ ಮಾಡವವರು
ಹಿರಣಾಕ್ಷ್ಯ
ಖಾತೆ ನಂಬರ್ 5267101005365
Ifcs Code: CNRB0005267
ಕೆನರಾ ಬ್ಯಾಂಕ್ ಸ್ವರ್ನಾಡು ಶಾಖೆ ಬಂಟ್ವಾಳ ತಾಲೂಕು.
ಗೂಗುಲ್ ಪೇ ನಂ: 9880792856 ಆಗಿರುತ್ತದೆ.